ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾನು ಪಲಾಯನ ಮಾಡಿಲ್ಲ: ಸಿಧು ಪತ್ನಿಯಿಂದ ಸಮಜಾಯಿಷಿ

|
Google Oneindia Kannada News

ಅಮೃತಸರ, ಅಕ್ಟೋಬರ್ 20: ಅಮೃತಸರದಲ್ಲಿ ಸಂಭವಿಸಿದ ಘೋರ ರೈಲು ದುರಂತದ ನಂತರ ಇಲ್ಲಿ ನಡೆಯುತ್ತಿದ್ದ ದಸರಾ ಉತ್ಸವದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನವಜೋತ್ ಸಿಂಗ್ ಸಿಧು ಅವಅರ ಪತ್ನಿ ಪಲಾಯನ ಮಾಡಿದ್ದರು ಎಂಬ ಸುದ್ದಿಯನ್ನು ಸ್ವತಃ ಅವರೇ ತಳ್ಳಿಹಾಕಿದ್ದಾರೆ.

ಕಾಂಗ್ರೆಸ್ ಮುಖಂಡ, ಪಂಜಾಬ್ ಸಚಿವ ಸಿಧು ಅವರ ಪತ್ನಿ, ನವಜೋತ್ ಕೌರ್ ಸಿಧು ಅವರು ವಿಜಯ ದಶಮಿಯಂದು ನಡೆಯುವ ರಾವಣ ಪ್ರತಿಕೃತಿ ದಹನದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ತಾನು ತಮ್ಮ ಮನೆಗೆ ತಲುಪಿದ ಮೇಲೆ ಈ ದುರಂತ ನಡೆದಿದೆ. ನಾನು ದುರಂತದ ಸುದ್ದಿ ಕೇಳಲಿ ಪಲಾಯನ ಮಾಡಿಲ್ಲ ಎಂದು ಅವರು ಸಮಜಾಯಿಷಿ ನೀಡಿದ್ದಾರೆ.

ದಶಮಿ ದಿನ ದುರಂತ: ರೈಲು ಅಪಘಾತದ ಸಾವಿನ ಸಂಖ್ಯೆ ನೂರಾರು?ದಶಮಿ ದಿನ ದುರಂತ: ರೈಲು ಅಪಘಾತದ ಸಾವಿನ ಸಂಖ್ಯೆ ನೂರಾರು?

Amritsar Train accident: Navjot Sidhus wife denies leaving after accident

ದುರಂತದ ನಂತರ ಕೌರ್ ಅವರು ಸ್ಥಳದಿಂದ ಪಲಾಯನ ಮಾಡಿದ್ದಾರೆ ಎಂಬ ವದಂತಿ ಹಬ್ಬಿತ್ತು. 'ನಾನು ಮನೆಗೆ ತಲುಪಿದ ಮೇಲೆಯೇ ನನಗೆ ಸಾವಿನ ಸುದ್ದಿ ತಿಳಿದಿದ್ದು. ಆ ನಂತರ ನಾನು ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ ವಿಚಾರಿಸಿದೆ. ನಾನು ವಾಪಸ್ ಬರಬಹುದೇ ಎಂದೂ ವಿಚಾರಿಸಿದೆ. ಅದಕ್ಕೆ ಕಮಿಷನರ್, 'ಇಲ್ಲಿ ಬಹಳ ಗಲಾಟೆ ನಡೆಯುತ್ತಿದೆ. ಸುರಕ್ಷತೆಯ ದೃಷ್ಟಿಯಿಂದ ಇಲ್ಲಿಗೆ ದಯವಿಟ್ಟು ಬರಬೇಡಿ' ಎಂದರು. ಅದಕ್ಕೆಂದೇ ನಾನು ಮತ್ತೆ ಬರಲಿಲ್ಲ' ಎಂದು ಅವರು ಹೇಳಿದರು.

ಅಮೃತಸರ ರೈಲು ದುರಂತ: ಸೆಲ್ಫಿ ಕ್ಲಿಕ್ಕಿಸುತ್ತಿದ್ದವರ ಮೇಲೆ ಹರಿದ ರೈಲು!ಅಮೃತಸರ ರೈಲು ದುರಂತ: ಸೆಲ್ಫಿ ಕ್ಲಿಕ್ಕಿಸುತ್ತಿದ್ದವರ ಮೇಲೆ ಹರಿದ ರೈಲು!

ಪಂಜಾಬಿನ ಅಮೃತಸರ ರೈಲು ನಿಲ್ದಾಣದ ಬಳಿ ವಿಜಯ ದಶಮಿ ಉತ್ಸವದಂದು ರಾವಣ ಪ್ರತಕೃತಿ ದಹನ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಹಳಿಯ ಮೇಲಿದ್ದ ಜನರ ಮೇಲೆ ರೈಲು ಹರಿದ ಪರಿಣಾಮ 61 ಕ್ಕೂ ಹೆಚ್ಚು ಜನ ಮೃತರಾಗಿದ್ದರು. ನೂರು ಜನ ಗಾಯಗೊಂಡಿದ್ದರು.

English summary
Punjab Congress leader Navjot Kaur Sidhu has denied allegations that she left a Dussehra event in Amritsar after a speeding train ran over 60 spectatorson Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X