ತಳಿಪರಂಬ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಉದ್ಘಾಟಿಸಿದ ಶಾ

ಮಂಗಳೂರು, ಅಕ್ಟೋಬರ್ 3: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕೇರಳಕ್ಕೆ ಭೇಟಿ ನೀಡಿದ್ದಾರೆ .

ಕಣ್ಣೂರಿನಲ್ಲಿ ಐತಿಹಾಸಿಕ ತಳಿಪರಂಬ ರಾಜರಾಜೇಶ್ವರ ದೇವಾಲಯದ ಪೂಜೆ ಸಲ್ಲಿಸಿದ ಅಮಿತ್ ಶಾ ನಂತರ ಪಯ್ಯನೂರಿನಲ್ಲಿ 'ಜನರಕ್ಷಾ ಯಾತ್ರೆ'ಗೆ ಚಾಲನೆ ನೀಡಿದರು.

ಕೇರಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಆರ್.ಎಸ್.ಎಸ್ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ಹತ್ಯೆ ಖಂಡಿಸಿ 'ಜನರಕ್ಷಾ ಯಾತ್ರೆ' ಹೆಸರಿನಲ್ಲಿ ಕೇರಳದ ಬಿಜೆಪಿ ಘಟಕ ಈ ಬೃಹತ್ ಪಾದಯಾತ್ರೆ ಆಯೋಜಿಸಿದೆ.

ರಾಜರಾಜೇಶ್ವರ ದೇವರಿಗೆ ವಿಶೇಷ ಪೂಜೆ

ಬೆಳಿಗ್ಗೆ ದೇವಾಲಯದಲ್ಲಿ ರಾಜರಾಜೇಶ್ವರ ದೇವರ ದರ್ಶನ ಪಡೆದ ಅಮಿತ್ ಶಾ , ವಿಶೇಷ ಪೂಜೆ ಸಲ್ಲಿಸಿದರು . ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ , ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮಮ್ ರಾಜಶೇಖರ್ , ಪ್ರಧಾನ ಕಾರ್ಯದರ್ಶಿ ಕೆ, ಸುರೇಂದ್ರನ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು .

ಭಾವಚಿತ್ರ ಪ್ರದರ್ಶನ ಉದ್ಘಾಟನೆ

ಪೂಜೆ ಸಲ್ಲಿಸಿದ ನಂತರ ಪಯ್ಯನೂರು ನಗರ ವೃತ್ತದಲ್ಲಿ ಕೊಲೆಯಾದ ಬಿಜೆಪಿ ಮತ್ತು ಆರ್.ಎಸ್.ಎಸ್ ಕಾರ್ಯಕರ್ತರ ಭಾವಚಿತ್ರಗಳ ಪ್ರದರ್ಶನವನ್ನು ಅಮಿತ್ ಶಾ ಉದ್ಘಾಟಿಸಿದರು.

ಜನರಕ್ಷಾ ಯಾತ್ರೆ ಉದ್ಘಾಟನೆ

ಪಯ್ಯನೂರಿನಲ್ಲಿ ಜನರಕ್ಷಾ ಯಾತ್ರೆಯನ್ನು ಅಮಿತ್ ಶಾ ಉದ್ಘಾಟಿಸಿದ್ದಾರೆ. ಇನ್ನು ಕೆಲವೇ ಕ್ಷಣಗಳಲ್ಲಿ ಅವರು ಜನರಕ್ಷಾ ಯಾತ್ರೆಯ ರ್ಯಾಲಿ ಉದ್ದೇಶಿಸಿ ಅವರು ಭಾಷಣ ಮಾಡಲಿದ್ದಾರೆ.

15 ದಿನಗಳ ಪಾದಯಾತ್ರೆ

ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತವರು ನೆಲ ಹಾಗೂ ಅತೀ ಹೆಚ್ಚು ರಾಜಕೀಯ ಹಿಂಸೆಗೆ ಸಾಕ್ಷಿಯಾದ ಕಣ್ಣೂರಿನಿಂದ ಜನರಕ್ಷಾ ಯಾತ್ರೆ ಆರಂಭವಾಗಲಿದೆ. ಅಕ್ಟೋಬರ್ 17ರಂದು ಪಾದಯಾತ್ರೆ ರಾಜಧಾನಿ ತಿರುವನಂತಪುರಂನಲ್ಲಿ ಸಮಾರೋಪಗೊಳ್ಳಲಿದೆ. ಒಟ್ಟು 15 ದಿನಗಳ ಯಾತ್ರೆ ಇದಾಗಿದ್ದು ಆರ್.ಎಸ್.ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಹಲ್ಲೆ ಖಂಡಿಸಿ ಕೇರಳದ ಬಿಜೆಪಿ ಘಟಕ ಈ ಪಾದಯಾತ್ರೆ ಆಯೋಜಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+