• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನುಮತಿ ಇಲ್ಲದೆ ಅಮಿತಾಬ್ ಬಚ್ಚನ್ ಧ್ವನಿ, ಚಿತ್ರ ಬಳಸುವಂತಿಲ್ಲ: ಕೋರ್ಟ್

|
Google Oneindia Kannada News

ನವದೆಹಲಿ ನವೆಂಬರ್ 25: ಅಮಿತಾಬ್ ಬಚ್ಚನ್ ಬಾಲಿವುಡ್‌ನಲ್ಲಿ ಅತ್ಯಂತ ಹಿರಿಯ ಹಾಗೂ ಖ್ಯಾತ ನಟ. ಆದರೆ ಇವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಅನುಮತಿ ಇಲ್ಲದೆ ಬಳಕೆ ಮಾಡಲಾಗುತ್ತಿದೆ ಎನ್ನುವ ವಿಚಾರ ಹೇಳಿಬಂದಿದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಅಮಿತ್ ಬಚ್ಚನ್ ಅವರ ಅನುಮತಿಯಿಲ್ಲದೆ ಅವರ ಹೆಸರು, ಚಿತ್ರ ಅಥವಾ ಧ್ವನಿಯನ್ನು ಬಳಸಲಾಗುವುದಿಲ್ಲ ಎಂದು ನಟನ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ಇಂದು ತೀರ್ಪು ನೀಡಿದೆ. ಒಂದು ವೇಳೆ ಬಳಕೆ ಮಾಡಿದ್ದರೆ ಅದನ್ನು ತೆಗೆದುಹಾಕುವಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಟೆಲಿಕಾಂ ಸೇವಾ ಪೂರೈಕೆದಾರರಿಗೆ ನ್ಯಾಯಾಲಯ ಸೂಚಿಸಿದೆ.

ನವದೆಹಲಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಪ್ ಮುಖಂಡ ಸಂದೀಪ್ ಭಾರದ್ವಾಜ್ ನವದೆಹಲಿ: ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಆಪ್ ಮುಖಂಡ ಸಂದೀಪ್ ಭಾರದ್ವಾಜ್

ಬಿಗ್ ಬಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಅಮಿತಾಬ್ ಬಚ್ಚನ್ (80 ವರ್ಷ) ಅವರು "ಹೆಸರು, ಚಿತ್ರ, ಧ್ವನಿ" ಬಳಸದಂತೆ ಅರ್ಜಿಯೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸಿದ್ದಾರೆ.

"ಯಾರೋ ನನ್ನ ಚಿತ್ರದ ಟೀ-ಶರ್ಟ್ಗಳನ್ನು ತಯಾರಿಸುತ್ತಿದ್ದಾರೆ. ಅವುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇನ್ನ್ಯಾರೋ ನನ್ನ ಹೆಸರಿನ ಕಂಪನಿ ಶುರು ಮಾಡುತ್ತಾರೆ. ಅಮಿತಾಭಚ್ಚನ್.ಕಾಮ್. ಎನ್ನುವ ಸೈಟ್ ಓಪನ್ ಮಾಡುತ್ತಾರೆ. ನನ್ನ ಅನುಮತಿ ಇಲ್ಲದೆ ತನ್ನನ್ನು ಬಳಸಿಕೊಳ್ಳಲಾಗುತ್ತಿದೆ'' ಎಂದು ಬಚ್ಚನ್ ಪರ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು. ವಾದ ವಿವಾದಗಳ ಬಳಿಕ ಮೆಗಾಸ್ಟಾರ್ ಪುಸ್ತಕ ಪ್ರಕಾಶಕರು, ಟಿ-ಶರ್ಟ್ ಮಾರಾಟಗಾರರು ಮತ್ತು ಇತರ ಹಲವಾರು ವ್ಯವಹಾರಗಳ ವಿರುದ್ಧ ತಡೆಯಾಜ್ಞೆ ಕೋರಿದ್ದಾರೆ.

ನ್ಯಾಯಮೂರ್ತಿ ನವೀನ್ ಚಾವ್ಲಾ ಅವರು, ಅನುಮತಿ ಇಲ್ಲದೆ ಅಮಿತಾಬ್ ಬಚ್ಚನ್ ಧ್ವನಿ, ಚಿತ್ರ ಬಳಸುವಂತಿಲ್ಲ ಎಮದು ಸೂಚಿಸಿದ್ದಾರೆ.

English summary
Delhi Court has given an important verdict regarding the issue of using Amitabh Bachchan name, picture or voice without permission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X