ಛತ್ತೀಸ್‌ಗಢ: ನಕ್ಸಲಿಸಂ ನಿರ್ಮೂಲನೆ ಮಾಡುವ ಮಾತು ಕೊಟ್ಟರು ಅಮಿತ್ ಶಾ!

ಗೆದ್ದೇ ಗೆಲ್ಲಬೇಕು ಎಂಬ ಒಂದೇ ಮಂತ್ರದೊಂದಿಗೆ ಬಿಜೆಪಿ ಕೇಂದ್ರದ ವರಿಷ್ಠರು ಛತ್ತೀಸ್‌ಗಢ ರಾಜ್ಯದಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಮತದಾನವು ಛತ್ತೀಸ್‌ಗಢ ರಾಜ್ಯದಲ್ಲಿ ನಡೆದಿದ್ದು, ಇನ್ನೇನು ಕೆಲ ದಿನಗಳಲ್ಲಿ 2ನೇ ಹಂತದ ವೋಟಿಂಗ್ ಕೂಡ ನಡೆಯಲಿದೆ. ಆದರೆ ಈ ಸಮಯದಲ್ಲಿ ಕೇಂದ್ರ ಗೃಹ ಸಚಿವರು ನಕ್ಸಲರ ನೆಲದಲ್ಲೇ ನಿಂತು, ನಕ್ಸಲಿಸಂ ವಿರುದ್ಧ ಗುಡುಗಿದ್ದಾರೆ. ಹೌದು, ಅಮಿತ್ ಶಾ ಅವರು ಹೇಳಿದ್ದೇನು?

ಅಂದಹಾಗೆ ಪದೇ ಪದೆ ನಕ್ಸಲರ ಭೀಕರ ಕೃತ್ಯದ ಕಾರಣಕ್ಕೆ ಛತ್ತೀಸ್‌ಗಢ ರಾಜ್ಯ ದೇಶದಲ್ಲಿ ಸದ್ದು ಮಾಡುತ್ತಾ ಸುದ್ದಿಯಲ್ಲಿ ಇರುತ್ತದೆ. ಆದರೆ ಈಗ ಈ ನಕ್ಸಲರ ವಿಚಾರ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ದೊಡ್ಡ ಸದ್ದು ಮಾಡುತ್ತಾ, ರಾಜಕೀಯ ಪಕ್ಷಗಳ ಪಾಲಿಗು ಅಸ್ತ್ರವಾಗಿದೆ.

amit-shah-warned-against-the-naxalism

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಿತ್ತಾಟಕ್ಕೂ ಕಾರಣವಾಗಿದೆ. ಆದರೆ ಇದೇ ಸಮಯದಲ್ಲಿ ಕೇಂದ್ರ ಗೃಹ ಸಚಿವರು ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ನಕ್ಸಲಿಸಂ ಸಂಪೂರ್ಣ ನಿರ್ಮೂಲನೆ ಆಗುತ್ತೆ ಅಂತಾ ಹೇಳಿದ್ದಾರೆ.

5 ವರ್ಷದಲ್ಲಿ ನಕ್ಸಲಿಸಂ ನಿರ್ಮೂಲನೆ

ಹೌದು ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ 5 ವರ್ಷದಲ್ಲಿ ನಕ್ಸಲಿಸಂ ಪೂರ್ತಿ ನಿರ್ಮೂಲನೆ ಮಾಡಲಾಗುತ್ತೆ ಎಂದಿದ್ದಾರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ. ಛತ್ತೀಸ್‌ಗಢದ ಜಾಶ್‌ಪುರದಲ್ಲಿ ಚುನಾವಣೆ ಪ್ರಚಾರದ ವೇಳೆ ಅಮಿತ್‌ ಶಾ ಈ ಮಾತು ಕೊಟ್ಟರು.

ಹಾಗೂ ಈ ಸಮಯದಲ್ಲೇ, ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಸಾಕಷ್ಟು ಎಡವಟ್ಟು ಆಗಿದೆ ಎಂದು ಅಮಿತ್ ಅವರು ಆರೋಪ ಮಾಡಿದರು. ಮತ್ತೊಂದು ಕಡೆ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನ ಛತ್ತೀಸ್‌ಗಢ ಮತದಾರರ ಎದುರು ಪ್ರಸ್ತಾಪ ಮಾಡಿದ್ರು.

amit-shah-warned-against-the-naxalism

'ಪ್ರಧಾನಿ ಮೋದಿ ನೇತೃತ್ವದಲ್ಲಿ ಅಭಿವೃದ್ಧಿ'

ಛತ್ತೀಸ್‌ಗಢ ಚುನಾವಣೆ ಪ್ರಚಾರದಲ್ಲಿ ಮಾತು ಮುಂದುವರಿಸಿದ ಗೃಹ ಸಚಿವ ಅಮಿತ್ ಶಾ ಅವರು, ಪ್ರಧಾನಿ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಚಂದ್ರಯಾನ-3 ಯೋಜನೆಯ ಸಕ್ಸಸ್ ಮಾಡಿದೆ. ಚಂದ್ರನ ಮೇಲೆ ರೋವರ್‌ ಇಳಿದ ಸ್ಥಳವನ್ನು ಶಿವಶಕ್ತಿ ಸ್ಥಳ ಎಂದು ಮೋದಿ ಅವರು ಗುರುತಿಸಿದರು ಎಂದು ಚಂದ್ರಯಾನದ ಯಶಸ್ಸು ಪ್ರಸ್ತಾಪಿಸಿದರು. ಹಾಗೆ ಈ ವೇಳೆ ಛತ್ತೀಸ್‌ಗಢ ಸಿಎಂ ವಿರುದ್ಧ ಕೇಳಿಬಂದಿರುವ ಬೆಟ್ಟಿಂಗ್ ಅಪ್ಲಿಕೇಷನ್ ಆರೋಪವನ್ನ ಕೂಡ ಪ್ರಸ್ತಾಪ ಮಾಡಿದರು.

ಒಟ್ನಲ್ಲಿ ಛತ್ತೀಸ್‌ಗಢ ಚುನಾವಣೆ ಕ್ಷಣಕ್ಷಣಕ್ಕೂ ರಂಗೇರುತ್ತಿದ್ದು, ಇದೇ ಸಮಯಕ್ಕೆ ಕೇಂದ್ರ ಗೃಹ ಸಚಿವರು ಮಹತ್ವದ ಆಶ್ವಾಸನೆ ನೀಡಿ ಛತ್ತೀಸ್‌ಗಢ ಚುನಾವಣಾ ಅಖಾಡದಲ್ಲಿ ಈಗ ಸಂಚಲನ ಸೃಷ್ಟಿಸಿದ್ದಾರೆ. ಈಗಾಗಲೇ ಒಂದು ಸುತ್ತಿನ ಮತದಾನ ಮುಗಿಸಿರುವ ಛತ್ತೀಸ್‌ಗಢ ರಾಜ್ಯದಲ್ಲಿ, ಈಗ ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿರುವ ಆಶ್ವಾಸನೆ ಹೇಗೆ ಗಮನ ಸೆಳೆಯಲಿದೆ? ಎಂಬುದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+