ನುಸುಳುಕೋರರ ಹೆಸರು ತೆಗೆದಿರುವುದರಿಂದ ರಾಹುಲ್ ಗಾಂಧಿ ಮತಕಳ್ಳತನ ಆರೋಪ: ಅಮಿತ್ ಶಾ

ಬಿಹಾರ ವಿಧಾನಸಭೆ ಚುನಾವಣೆ ಅಂತಿಮ ಹಂತ ತಲುಪಿದೆ. ಇದೀಗ ಬಿಹಾರ ವಿಧಾನಸಭೆ ಚುನಾವಣೆಯಲ್ಲೂ ವೋಟ್ ಚೋರಿ (ಮತ ಕಳ್ಳತನ) ವಿಚಾರ ಚರ್ಚೆ ಆಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ ಅವರ "ವೋಟ್ ಚೋರಿ" ಆರೋಪದ ವಿಚಾರವಾಗಿ ನೇರ ವಾಗ್ದಾಳಿ ನಡೆಸಿದ್ದಾರೆ. ಮತದಾರರ ಪಟ್ಟಿಯಿಂದ ನುಸುಳುಕೋರರ ಹೆಸರುಗಳನ್ನು ಅಳಿಸಲಾಗಿದೆ ಎಂಬ ಕಾರಣಕ್ಕೆ ಅವರು ಈ ವಿಷಯದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಬಗ್ಗೆ ದೂರಿದ್ದಾರೆ.

ಲೋಕಸಭೆಯ ವಿರೋಧ ಪಕ್ಷದ ನಾಯಕರು ಬಿಹಾರದಿಂದ ಇಟಲಿಗೆ ಯಾತ್ರೆ ಮಾಡಬಹುದು ಆದರೆ ಕೇಂದ್ರವು ಅದಕ್ಕೆ ಮಣಿಯುವುದಿಲ್ಲ ಎಂದು ಅವರು ಹೇಳಿದ್ದು, ಇದು ಗಾಂಧಿಯವರ "ಮತ ಅಧಿಕಾರ ಯಾತ್ರೆ" ಆಗಿದೆ. ರಾಹುಲ್ ಗಾಂಧಿ ಅವರು ಮತದಾರರ ಪಟ್ಟಿಯಿಂದ ನುಸುಳುಕೋರರ ಹೆಸರುಗಳನ್ನು ಅಳಿಸಿರುವುದಕ್ಕೆ ಈ ಆರೋಪವನ್ನು ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಅವರು ವೋಟ್ ಚೋರಿಯ ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಬಿಹಾರದಿಂದ ಇಟಲಿಗೆ ಯಾತ್ರೆ ಮಾಡಲಿ, ಆದರೆ ನಾವು ನುಸುಳುಕೋರರನ್ನು ಇಲ್ಲಿಯೇ ಇರಲು ಬಿಡುವುದಿಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

Amit Shah Hits Back Says Rahul Gandhi Crying Vote Rigging After Infiltrators Names Removed

ಮುಂದುವರಿದು ರಾಹುಲ್ ಗಾಂಧಿ ಅವರ ವೋಟ್ ಚೋರಿ ಆರೋಪ ನಿಜವೇ ಆಗಿದ್ದರೆ, ಅವರು ಚುನಾವಣಾ ಆಯೋಗಕ್ಕೆ ಔಪಚಾರಿಕ ದೂರು ಏಕೆ ನೀಡುವುದಿಲ್ಲ?" ಎಂದು ಪ್ರಶ್ನಿಸಿದ್ದಾರೆ. ಇಂಡಿಯಾ ಒಕ್ಕೂಟದೊಂದಿಗೆ ಮೈತ್ರಿ ಮಾಡಿಕೊಂಡಿರುವ ಸಿಪಿಐ(ಎಂಎಲ್) ಲಿಬರೇಶನ್ ಪಕ್ಷವನ್ನು ಉಲ್ಲೇಖಿಸಿ ಮಾತನಾಡಿರುವ ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ನಾವು ನಕ್ಸಲಿಸಂನ ಬೆದರಿಕೆಯನ್ನು ತಡೆಯಲು ಸಾಧ್ಯವಾಗಿದೆ. ಆದರೆ ಇವರಿಗೆ ಸ್ವಲ್ಪ ಅವಕಾಶ ನೀಡಿದರೆ, ಬಿಹಾರ ಹಿಂದೆ ಅನುಭವಿಸಿದ್ದ ಪರಿಸ್ಥಿತಿ ಮತ್ತೆ ನಿರ್ಮಾಣ ಆಗಲಿದೆ ಎಂದಿದ್ದಾರೆ.

ಬಿಹಾರ ಚುನಾವಣೆಯ ಅಂತಿಮ ಹಂತದ ಪ್ರಚಾರ ಭಾನುವಾರ ಮುಕ್ತಾಯಗೊಂಡಿದ್ದು, ನವೆಂಬರ್ 11ರ ಮಂಗಳವಾರ ಎರಡನೇ ಹಂತದ ಮತದಾನ ನಡೆಯಲಿದೆ. ಬಿಹಾರದ ಚುನಾವಣಾ ಫಲಿತಾಂಶವು ನವೆಂಬರ್ 14 ರಂದು ಘೋಷಣೆ ಆಗಲಿದೆ. ಬಿಹಾರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಹಲವಾರು ಬಾರಿ ಬಿಜೆಪಿ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಅಡ್ಡದಾರಿಯನ್ನು ಹಿಡಿದಿದೆ. ಮತಗಳನ್ನು ಕದ್ದಿದ್ದಾರೆ ಎಂದು ಆರೋಪಿಸಿದ್ದಾರೆ.

ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ನಕಲಿ ಮತದಾನ / ಮತಕಳ್ಳತನ ಆಗಿದೆ ಆರೋಪಿಸಿದ್ದಿ, ಈ ಮೂಲಕವೇ ಬಿಜೆಪಿ ಗೆದ್ದಿದೆ ಎಂದಿದ್ದರು. ರಾಹುಲ್ ಗಾಂಧಿ ಅವರು ಬ್ರೆಜಿಲ್ ಮಾಡೆಲ್‌ವೊಬ್ಬರ ಚಿತ್ರವೊಂದನ್ನು ಸಹ ಪ್ರದರ್ಶಿಸಿದರು, ಅವರು ಹರಿಯಾಣದ ಮತದಾರರ ಪಟ್ಟಿಯಲ್ಲಿ ಸೀಮಾ, ಸ್ವೀಟಿ ಮತ್ತು ಇತರ ಹೆಸರುಗಳಲ್ಲಿ 22 ಬಾರಿ ಮತ ಚಲಾವಣೆ ಮಾಡಿದ್ದಾರೆ ಎಂದೂ ಸಹ ರಾಹುಲ್ ಗಾಂಧಿ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಬಿಹಾರದ ವಿಧಾನಸಭೆ ಚುನಾವಣೆ ಸಮಯದಲ್ಲೇ ಮತಕಳ್ಳತನ ಎನ್ನುವ ವಿಚಾರವು ಭಾರೀ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+