ಅರವಿಂದ್ ಕೇಜ್ರಿವಾಲ್ ನಿಮಗಿದೋ ಕಹಿ ಸುದ್ದಿ: ಅಮಿತ್ ಶಾ ಹೇಳಿದ್ದೇನು?
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜಾಮಿನು ಅರ್ಜಿಗೆ ಸಂಬಂಧಿಸಿದ್ದಂತೆ ಜನ ಮಾತನಾಡುತ್ತಿರುವ ಬಗ್ಗೆ ಹಾಗೂ ಪಿಓಕೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ತಿರುಗೇಟು ನೀಡಿದ್ದಾರೆ.
ಅರವಿಂದ್ ಕೇಜ್ರಿವಾಲ್‌ಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಕುರಿತು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, "ಇದು ವಾಡಿಕೆಯ ನಿರ್ಧಾರವಲ್ಲ ಎಂದು ನಾನು ನಂಬುತ್ತೇನೆ. ಈ ದೇಶದ ಅನೇಕ ಜನರು ವಿಶೇಷ ವಿನಾಯಿತಿ ನೀಡಲಾಗಿದೆ ಎಂದು ನಂಬುತ್ತಾರೆ. ಈಗ ಅರವಿಂದ್ ಕೇಜ್ರಿವಾಲ್ ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಸಹ ದೇಶದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಚಾರದಲ್ಲಿ ಭಾಗವಹಿಸಲು ಜಾಮೀನು ನೀಡಿದೆ. ಅಲ್ಲದೆ ಕೇಜ್ರಿವಾಲ್ ಜೂನ್ 2ರಂದು ಮತ್ತೆ ಜೈಲಿಗೆ ವಾಪಸ್ ಆಗಬೇಕಾಗುತ್ತದೆ. ಈ ತೀರ್ಪಿನ ಬಗ್ಗೆ ಕೇಂದ್ರ ಗ್ರಹ ಸಚಿವ ಅಮಿತ್ ಶಾ ಪ್ರತಿಕ್ರಿಯೆ ನೀಡಿದ್ದಾರೆ.
ಚುನಾವಣಾ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಮೋದಿ 75 ವಯಸ್ಸಾದ ಬಳಿಕ ಯಾರು ಪ್ರಧಾನಿ ಎಂದು ಪ್ರಶ್ನೆ ಎತ್ತಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಮಿತ್ ಶಾ, ಪ್ರಧಾನಿ ಮೋದಿ 2029ರ ವರೆಗೆ ಕಾರ್ಯ ನಿರ್ವಹಿಸಲಿದ್ದಾರೆ. ಇನ್ನು ಕೇಜ್ರಿವಾಲ್ ಅವರೇ ನೀವು ಇದನ್ನು ಗಮನದಲ್ಲಿಟ್ಟುಕೊಳ್ಳಿ, ಮುಂದೇಯೂ ಅವರೇ ಮುಂದಾಳತ್ವವನ್ನು ವಹಿಸುತ್ತಾರೆ" ಎಂದು ತಿರುಗೇಟು ನೀಡಿದ್ದಾರೆ.
ಪಿಓಕೆ ನಮ್ದೇ ನಮಗೆ ಸೇರಿದ್ದು
ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಈ ವೇಳೆ ಅವರು ಪಿಓಕೆ ಬಗ್ಗೆಯೂ ಮಾತನಾಡಿದರು.

ಮೊದಲು ಕಾಶ್ಮೀರದಲ್ಲಿ ಸ್ವಾತಂತ್ರ್ಯದ ಘೋಷಣೆಗಳು ಎದ್ದಿದ್ದವು, ಇಂದು ಪಿಒಕೆಯಲ್ಲಿ ಸ್ವಾತಂತ್ರ್ಯದ ಘೋಷಣೆಗಳು ಮೊಳಗುತ್ತಿವೆ ಎಂದು ಅಮಿತ್ ಶಾ ಹೇಳಿದರು. ಈ ಹಿಂದೆ ಇಲ್ಲಿ ಕಲ್ಲು ತೂರಾಟ ನಡೆಯುತ್ತಿತ್ತು, ಇಂದು ಅಲ್ಲಿ ಕಲ್ಲು ತೂರಾಟ ನಡೆಯುತ್ತಿದೆ ಎಂದು ಅಮಿತ್ ಶಾ ಹೇಳಿದ್ದಾರೆ. 2 ಕೋಟಿ 11 ಲಕ್ಷ ಪ್ರವಾಸಿಗರು ಕಾಶ್ಮೀರಕ್ಕೆ ತೆರಳಿ ಹೊಸ ದಾಖಲೆ ಬರೆದರೆ, ಪಿಒಕೆಯಲ್ಲಿ ಹಿಟ್ಟಿನ ಬೆಲೆ ದಾಖಲೆ ಮುಟ್ಟಿದೆ ಎಂದು ತಿಳಿಸಿದ್ದಾರೆ.
ಎದುರಾಳಿಗಳು ಹೇದರಬೇಕು ನಾವಲ್ಲ
ಈ ಮಣಿಶಂಕರ್ ಅಯ್ಯರ್, ಈ ಫಾರೂಕ್ ಅಬ್ದುಲ್ಲಾ ದೇಶವನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ, ಪಾಕಿಸ್ತಾನದಲ್ಲಿ ಅಣುಬಾಂಬ್ ಇದೆ ಮತ್ತು ಪಿಒಕೆ ಬಗ್ಗೆ ಮಾತನಾಡಬೇಡಿ ಎಂದು ಅವರು ಹೇಳುತ್ತಾರೆ. ಇವರ ಹೇಳಿಕೆಗಳಿಗೆ ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿ ಹೆದರಬೇಕು. ಆದರೆ ಪಿಒಕೆ ಭಾರತಕ್ಕೆ ಸೇರಿದೆ. ಅದನ್ನು ನಾವು ಪಡೆದೆ ತೀರುತ್ತೇವೆ ಎಂದಿದ್ದಾರೆ.
ಭ್ರಷ್ಟ ಹಾಗೂ ಪ್ರಾಮಾಣಿಕರ ನಡುವಿನ ಹೋರಾಟ
ಪ್ರಸ್ತುತ ಲೋಕಸಭಾ ಚುನಾವಣೆಯು INDIA ಮೈತ್ರಿಕೂಟದ ಭ್ರಷ್ಟ ನಾಯಕರು ಮತ್ತು ಪ್ರಾಮಾಣಿಕ ರಾಜಕಾರಣಿ ನರೇಂದ್ರ ಮೋದಿಯ ನಡುವೆ ನಡೆಯುವ ಚುನಾವಣೆಯಾಗಿದೆ ಎಂದು ಶಾ ಹೇಳಿದರು. ಮೋದಿ ಅವರು ಮುಖ್ಯಮಂತ್ರಿ ಮತ್ತು ಪ್ರಧಾನಿಯಾಗಿದ್ದರೂ ಅವರ ವಿರುದ್ಧ ಒಂದು ಪೈಸೆ ಕೂಡ ಆರೋಪ ಮಾಡಿಲ್ಲ. ನುಸುಳುಕೋರರು ಬೇಕೋ ಅಥವಾ ನಿರಾಶ್ರಿತರಿಗಾಗಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೇಕೋ ಎಂಬುದನ್ನು ಬಂಗಾಳ ನಿರ್ಧರಿಸಬೇಕು ಎಂದು ಅವರು ಹೇಳಿದರು.












Click it and Unblock the Notifications