ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಗೆ ದ್ರೋಹ ಬಗೆದ ಉದ್ಧವ್ ಠಾಕ್ರೆ ಅಮಿತ್ ಶಾ ಆರೋಪ
ಮುಂಬೈ, ಜೂನ್. 11: ಕಳೆದ 2019 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸುವುದರ ಮೂಲಕ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ ಅವರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಬಿಜೆಪಿಗೆ ದ್ರೋಹ ಮಾಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರದ ಒಂಬತ್ತು ವರ್ಷಗಳನ್ನು ಪೂರ್ಣಗೊಳಿಸಿದ ಸಲುವಾಗಿ ಬಿಜೆಪಿಯ ಪ್ರಚಾರ ಅಭಿಯಾನದ ಭಾಗವಾಗಿ ನಾಂದೇಡ್‌ನಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಕಳೆದ ವರ್ಷ ಬಿಜೆಪಿ, ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸದ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಲಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ ಆ ಕೆಲಸ ಮಾಡಲಿಲ್ಲ. ಉದ್ಧವ್ ಠಾಕ್ರೆಯವರ ನೀತಿಗಳಿಂದ ಬೇಸತ್ತಿರುವ ಶಿವಸೈನಿಕರು ಶರದ್ ಪವಾರ್ ನೇತೃತ್ವದ ಎನ್‌ಸಿಪಿಯೊಂದಿಗೆ ಹೋಗಲು ಸಿದ್ಧರಿರಲ್ಲ ಎಂದು ಅಮಿತ್ ಶಾ ಹೇಳಿದರು. ಮುಂದುವರಿದು, 2024ರ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಅಥವಾ ಕಾಂಗ್ರೆಸ್‌ನ ರಾಹುಲ್ ಗಾಂಧಿ ಪೈಕಿ ಯಾರು ದೇಶದ ಪ್ರಧಾನಿಯಾಗಬೇಕು ಎಂಬುದನ್ನು ಜನರು ನಿರ್ಧರಿಸಬೇಕು ಎಂದಿದ್ದಾರೆ.
"ನಾನು (ಅಂದಿನ) ಬಿಜೆಪಿ ಅಧ್ಯಕ್ಷ ಮತ್ತು (ಅಂದಿನ ಮುಖ್ಯಮಂತ್ರಿ) ದೇವೇಂದ್ರ ಫಡ್ನವಿಸ್ ಮಾತುಕತೆಗಳನ್ನು ನಡೆಸಿದ್ದೆವು. ಇದರಲ್ಲಿ ಎನ್‌ಡಿಎ ಬಹುಮತ ಪಡೆದರೆ, ದೇವೇಂದ್ರ ಫಡ್ನವೀಸ್ ಮತ್ತೆ ಮಹಾರಾಷ್ಟ್ರದ ಮುಖ್ಯಮಂತ್ರಿ ಎಂದು ಉದ್ಧವ್ ಠಾಕ್ರೆ ಒಪ್ಪಿಕೊಂಡಿದ್ದರು. ಆದರೆ, ಫಲಿತಾಂಶದ ನಂತರ ( 2019 ರಲ್ಲಿ), ಉದ್ಧವ್ ಠಾಕ್ರೆ ಭರವಸೆಯನ್ನು ಮುರಿಸು, ಕಾಂಗ್ರೆಸ್-ಎನ್‌ಸಿಪಿಯ ಮಡಿಲಲ್ಲಿ ಕುಳಿತರು" ಎಂದು ಅಮಿತ್ ಶಾ ಆರೋಪಿಸಿದ್ದಾರೆ.
2019 ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ (ಅವಿಭಜಿತ) ಮತ್ತು ಬಿಜೆಪಿ ಒಟ್ಟಿಗೆ ಸ್ಪರ್ಧಿಸಿದ್ದವು, ಆದರೆ ಮಾಜಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಮೈತ್ರಿಯಿಂದ ಹೊರನಡೆದರು. "ಉದ್ಧವ್ ಠಾಕ್ರೆ ಅವರು ಮೋಸ ಮತ್ತು ದ್ರೋಹವನ್ನು ಮಾಡಿದ್ದಾರೆ. ಮೋದಿ ಜಿ ಮತ್ತು ದೇವೇಂದ್ರ ಜಿ ಹೆಸರಿನಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಿ, ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಮಡಿಲಲ್ಲಿ ಕುಳಿತರು" ಎಂದು ಅಮಿತ್ ಶಾ ಹೇಳಿದ್ದಾರೆ.
ಶಿವಸೇನೆಯ (ಯುಬಿಟಿ) ನಾಯಕರು ವಾಡಿಕೆಯಂತೆ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ನಿಷ್ಠರಾಗಿರುವ ಶಾಸಕರು ಉದ್ಧವ್ ಠಾಕ್ರೆ ಅವರ ಶಿವಸೇನೆಯಿಂದ ಹೊರ ಬಂದು ಕಳೆದ ವರ್ಷ ಜೂನ್‌ನಲ್ಲಿ ದಿವಂಗತ ಬಾಳ್ ಠಾಕ್ರೆ ಸ್ಥಾಪಿಸಿದ ಪಕ್ಷವನ್ನು ವಿಭಜಿಸಿದ್ದಾರೆ. ಈಗ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ತನ್ನ ಬಿಲ್ಲು ಮತ್ತು ಬಾಣವನ್ನು ಮರಳಿ ಪಡೆದಿದೆ ಮತ್ತು ನಿಜವಾದ ಶಿವಸೇನೆ ಯಾರು ಎಂದು ನಿರ್ಧರಿಸಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ಇನ್ನು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಒಂಬತ್ತು ವರ್ಷಗಳಲ್ಲಿ ಮೋದಿ ಮಾಡಿದ್ದನ್ನು ಕಾಂಗ್ರೆಸ್‌ನ ನಾಲ್ಕು ತಲೆಮಾರುಗಳು ಸಾಧಿಸಲು ಸಾಧ್ಯವಾಗಲಿಲ್ಲ.
ಪ್ರಧಾನಿ ಮೋದಿಯವರು ಜಾಗತಿಕ ಮಟ್ಟದಲ್ಲಿ ಭಾರತದ ಘನತೆಯನ್ನು ಹೆಚ್ಚಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್‌ನ "ರಾಜಕುಮಾರ" ರಾಹುಲ್ ಗಾಂಧಿ ವಿದೇಶಕ್ಕೆ ಹೋಗಿ ದೇಶವನ್ನು ಅವಮಾನಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
"ರಾಹುಲ್ ಬಾಬಾ ವಿದೇಶದಲ್ಲಿದ್ದಾಗ ದೇಶದ ರಾಜಕೀಯದ ಬಗ್ಗೆ ಮಾತನಾಡುವುದಿಲ್ಲ, ನಿಮಗೆ ಈ ಬಗ್ಗೆ ಗೊತ್ತಿಲ್ಲದಿದ್ದರೆ ಹಿರಿಯ ಕಾಂಗ್ರೆಸ್ ನಾಯಕರನ್ನು ಕೇಳಿ, ರಾಹುಲ್ ಬಾಬಾ ದೇಶದಲ್ಲಿ ಮಾತನಾಡುವುದಿಲ್ಲ, ಅವರು ವಿದೇಶದಲ್ಲಿ ಮಾತನಾಡುತ್ತಾರೆ. ಏಕೆಂದರೆ ಸೇಶದಲ್ಲಿ ಕೆಲವೆ ಮಂದಿ ಮಾತ್ರ ಅವರ ಮಾತನ್ನು ಕೇಳುತ್ತಾರೆ" ಎಂದು ಹೇಳಿದ್ದಾರೆ.












Click it and Unblock the Notifications