• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಂಡಮಾನ್‌ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ: ನಿಗೂಢವಾಗುತ್ತಿರುವ ಪ್ರಕರಣ

|

ಕೋಲ್ಕತಾ, ನವೆಂಬರ್ 22: ಅಂಡಮಾನ್ ದ್ವೀಪದಲ್ಲಿ ನಿಗೂಢ ರೀತಿಯಲ್ಲಿ ಹತ್ಯೆಯಾದ ಅಮೆರಿಕದ ಮಿಷನರಿ ಜಾನ್ ಅಲೆನ್ ಚೌ (27) ಅವರನ್ನು ಅಲ್ಲಿನ ಬುಡಕಟ್ಟು ಸಮುದಾಯದ ಜನರು ದಟ್ಟಾರಣ್ಯದ ಒಳಭಾಗದಲ್ಲಿ ಎರಡು ದಿನ ಒತ್ತೆಯಾಳಾಗಿ ಇರಿಸಿಕೊಂಡು, ಕ್ರೂರವಾಗಿ ಹತ್ಯೆ ಮಾಡಿದ್ದರು. ಬಳಿಕ ನವೆಂಬರ್ 17 ರಂದು ಮೃತದೇಹವನ್ನು ಮಣ್ಣುಮಾಡಿದ್ದರು ಎಂಬ ಆಘಾತಕಾರಿ ಸಂಗತಿ ತನಿಖೆಯಿಂದ ಬಹಿರಂಗವಾಗಿದೆ.

ನವೆಂಬರ್ 14ರಂದು ಚೌ ಮತ್ತು ಮಧ್ಯ ಅಂಡಮಾನ್‌ನ ಕರ್ಮಾಟಂಗ್ ನಿವಾಸಿಗಳಾಗಿರುವ ಗೆಳೆಯರಾದ ಸಾ ಜಂಪೊ ಹಾಗೂ ಅವರ ಮಕ್ಕಳಾದ ಸಾ ವಾಟ್ಸನ್ ಮತ್ತು ಸಾ ಮೊಲಿಯಾನ್, ಅವರ ಸಹೋದರ ಸಾ ಟರಾಯ್ ಹಾಗೂ ಎಂ. ಭೂಮಿ ಅವರೊಂದಿಗೆ ಉತ್ತರ ಸೆಂಟಿನಿಲಿ ದ್ವೀಪದತ್ತ ರಾತ್ರಿ 8 ಗಂಟೆ ಸುಮಾರಿಗೆ ಪುಟ್ಟ ದೋಣಿಯೊಂದರಲ್ಲಿ ಹೊರಟಿದ್ದರು.

ಅಂಡಮಾನ್-ನಿಕೋಬಾರ್ ನಲ್ಲಿ ಅಮೆರಿಕ ಪ್ರವಾಸಿಗನ ಹತ್ಯೆ, ಶವಕ್ಕಾಗಿ ಶೋಧ

ಕರಾವಳಿಯ ಕಾವಲು ಪಡೆಗಳು ಹಾಗೂ ನೌಕಾ ದಳದ ಗಸ್ತಿನ ಕಣ್ಣು ತಪ್ಪಿಸಲು ಚೌ ರಾತ್ರಿ ಸಂಚಾರವನ್ನು ಆಯ್ದುಕೊಂಡಿದ್ದರು.

ಮೀನುಗಾರರ ಜೊತೆಯಲ್ಲಿ ಅವರು ಮಧ್ಯರಾತ್ರಿ ವೇಳೆ ಉತ್ತರ ಸೆಂಟಿನಿಲಿ ಸಮೀಪ ತಲುಪಿದ್ದರು. ನವೆಂಬರ್ 15ರ ನಸುಕಿನ 4.30ರ ವೇಳೆ ಪಶ್ಚಿಮ ಕಡಲ ತೀರದಲ್ಲಿ ಇಳಿದಿದ್ದರು. ಅಲ್ಲಿಯೇ ಅವರು ತಮ್ಮ ಉದ್ದೇಶಿತ ಪಯಣದ ಕೊನೆಯ ಹೆಜ್ಜೆಗಳನ್ನು ಇರಿಸಿದ್ದು ಎಂದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪದ ಡಿಜಿಪಿ ದೇಪೇಂದ್ರ ಪಾಠಕ್ ತಿಳಿಸಿದ್ದಾರೆ.

ಉಡುಗೊರೆ ನೀಡಲು ಪ್ರಯತ್ನ

ಉಡುಗೊರೆ ನೀಡಲು ಪ್ರಯತ್ನ

ಉತ್ತರ ಸೆಂಟಿನಿಲಿ ದ್ವೀಪ ತಲುಪಿದ ಬಳಿಕ ಚೌ, ಸ್ಥಳೀಯ ಬುಡಕಟ್ಟು ಜನರನ್ನು ಸಂಪರ್ಕಿಸಲು ಪ್ರಯತ್ನಿಸಿದರು. ಅವರಿಗೆ ಸಣ್ಣ ಫುಟ್ಬಾಲ್, ಆಡುವ ರಿಂಗ್, ಕತ್ತರಿಗಳು, ವೈದ್ಯಕೀಯ ಕಿಟ್ ಮುಂತಾದ ಉಡುಗೊರೆಗಳನ್ನು ನೀಡಲು ಮುಂದಾದರು.

ಸೆಂಟಿನಿಲೀಸ್ ಬುಡಕಟ್ಟು ಜನರನ್ನು ಗೆಳೆಯರನ್ನಾಗಿಸಿಕೊಳ್ಳುವುದು ಅವರ ಪ್ರಯತ್ನವಾಗಿತ್ತು. ಆದರೆ, ವ್ಯಕ್ತಿಯೊಬ್ಬ ಅವರ ಮೇಲೆ ಬಾಣ ಹಾರಿಸಿದ. ಚೌ ಅವರ ಜತೆ ಬಂದಿದ್ದ ಮೀನುಗಾರರು ನವೆಂಬರ್ 16ರಂದು ಅವರನ್ನು ಜೀವಂತವಾಗಿ ನೋಡಿದ್ದು ಅಂದೇ ಕೊನೆ.

ಅಂಡಮಾನಿನಲ್ಲಿ ಕೊಲೆಯಾದ ಅಮೆರಿಕದವನ ಡೈರಿಯಲ್ಲಿತ್ತು ಸಾವಿನ ಸೂಚನೆ!

ದೇಹ ಎಳೆದುಕೊಂಡು ಬಂದರು

ನವೆಂಬರ್ 17ರಂದು ಬೆಳಿಗ್ಗೆ 6.30ರ ವೇಳೆಗೆ ದ್ವೀಪದ ತೀರದಿಂದ ಸ್ವಲ್ಪ ದೂರದಲ್ಲಿ ಚೌ ಅವರ ಜತೆಗೆ ಬಂದಿದ್ದ ಮೀನುಗಾರರು ಸಣ್ಣ ದೋಣಿಯಲ್ಲಿ ಕುಳಿತು ಕಾಯುತ್ತಿದ್ದರು. ಆಗ ತೀರದ ಸಮೀಪ ಅಪರಿಚಿತರು ಮೃತದೇಹವೊಂದನ್ನು ಎಳೆದುಕೊಂಡು ಬಂದು ಹೂಳುತ್ತಿರುವುದು ಕಾಣಿಸಿತು. ದೇಹದ ಗಾತ್ರ, ಬಟ್ಟೆ ಮತ್ತು ಸಂದರ್ಭವನ್ನು ಗಮನಿಸಿದಾಗ ಅದು ಚೌ ಅವರ ಮೃತದೇಹದಂತೆ ಕಾಣಿಸಿತು.

ಪೋರ್ಟ್ ಬ್ಲೇರ್‌ಗೆ ಮರಳಿದ ಬಳಿಕ ಅವರು ಚೌ ಸ್ನೇಹಿತ ಅಲೆಗ್ಸಾಂಡರ್ (28) ಅವರಿಗೆ ಘಟನೆಯನ್ನು ವಿವರಿಸಿದರು. ಅಲೆಗ್ಸಾಂಡರ್ ಡೈರಿ ಫಾರ್ಮ್‌ನ ನಿವಾಸಿಯಾಗಿದ್ದು, ವೃತ್ತಿಯಿಂದ ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿದ್ದಾರೆ.

ಅಂಡಮಾನ್ ನಲ್ಲಿ ಅಮೆರಿಕನ್ ನನ್ನು ಕೊಂದ ನಿಗೂಢ ಬುಡಕಟ್ಟು ಸೆಂಟಿನಿಲೀಸ್

ಸ್ನೇಹಿತ ಅಲೆಗ್ಸಾಂಡರ್

ಮಿಷಿನರಿ ಚಟುವಟಿಕೆಗಳಿಗಾಗಿ ನೆರವಾಗಲು ಚೌ ಅವರಿಗೆ ಸಾ ಜಂಪೊ ಮತ್ತು ಸಾ ರೆಮ್ಮಿಸ್ (ಉತ್ತರ ಸೆಂಟಿನೆಲ್ ದ್ವೀಪದ ಪ್ರಯಾಣಕ್ಕೆ ವ್ಯವಸ್ಥೆ ಮಾಡಿದವರು) ಪರಿಚಯ ಮಾಡಿಸಿಕೊಟ್ಟವರು ಇದೇ ಅಲೆಗ್ಸಾಂಡರ್. ಚೌ ಅವರೊಂದಿಗೆ ಉಳಿದವರೆಲ್ಲರೂ ನ.14ರಂದು ಸೆಂಟಿನೆಲ್ ದ್ವೀಪದತ್ತ ಹೊರಟರೆ, ಅಲೆಗ್ಸಾಂಡರ್ ಮತ್ತು ರೆಮ್ಮಿಸ್ ಮಾತ್ರ ಉಳಿದುಕೊಂಡರು.

ಅವರ ಜತೆಗಿದ್ದ ಮೀನುಗಾರ ಎಂ. ಭೂಮಿ ನೀಡಿದ ಮಾಹಿತಿ ಆಧಾರದಲ್ಲಿ ಅಲೆಗ್ಸಾಂಡರ್ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದರು. ಮೀನುಗಾರರು ಚೌ ಬರೆದಿದ್ದ 13 ಪುಟಗಳ ಡೈರಿಯನ್ನು ಮೀನುಗಾರರು ಪೊಲೀಸರಿಗೆ ಒಪ್ಪಿಸಿದರು.

ಬಳಿಕ ಅಮೆರಿಕದಲ್ಲಿದ್ದ ಚೌ ಸ್ನೇಹಿತ ಬಾಬ್ಬಿ ಪಾರ್ಕ್ಸ್‌ಗೆ ಮಾಹಿತಿ ನೀಡಿದರು. ಅಲ್ಲಿಂದ ಆತನ ತಾಯಿಗೆ ಸುದ್ದಿ ಮುಟ್ಟಿತು. ಚೆನ್ನೈನಲ್ಲಿರುವ ಅಮೆರಿಕದ ಕಾನ್ಸುಲೇಟ್ ಜನರಲ್ ಕಚೇರಿ ಅವರನ್ನು ಸಂಪರ್ಕಿಸಿತು.

ವೈಮಾನಿಕ ಹುಡುಕಾಟ

ವೈಮಾನಿಕ ಹುಡುಕಾಟ

ಜಾನ್ ಚೌ ಅ.16ರಂದು ಪೋರ್ಟ್ ಬ್ಲೇರ್ ತಲುಪಿದ್ದರು. ಲಾಲಾಜಿ ಬೇ ವ್ಯೂ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಅ. 19ರಂದು ಲಿಟ್ಲ್ ಅಂಡಮಾನ್ ದ್ವೀಪದ ಹಟ್ ಬೇಗೆ ತೆರಳಿದ್ದರು. ನವೆಂಬರ್ 5ರಂದು ಪೋರ್ಟ್ ಬ್ಲೇರ್‌ಗೆ ಮರಳಿ, ನ.14ರಂದು ಉತ್ತರ ಸೆಂಟಿನೆಲ್ ದ್ವೀಪಕ್ಕೆ ಹೊರಡುವವರೆಗೂ ತಮ್ಮ ಸ್ನೇಹಿತ ಅಲೆಕ್ಸಾಂಡರ್ ಅವರೊಂದಿಗೆ ಇದ್ದರು.

ಚೌ ಅವರ ಮೃತದೇಹ ಪತ್ತೆ ಮಾಡುವ ಸಲುವಾಗಿ ನ.20ರಂದು ಭಾರತದ ಕರಾವಳಿ ಪಡೆಯ ಗಸ್ತು ತಂಡವು ಹಿರಿಯ ಅಧಿಕಾರಗಳ ಜತೆ ಉತ್ತರ ಸೆಂಟಿನೆಲ್ ದ್ವೀಪದುದ್ದಕ್ಕೂ ವೈಮಾನಿಕ ಹುಡುಕಾಟ ನಡೆಸಿತ್ತು.

ಹೊರಜಗತ್ತಿನ ಸಂಪರ್ಕದಿಂದ ಸಂಪೂರ್ಣ ದೂರವಿರುವ ಸೆಂಟಿನೆಲಿಸ್ ಬುಡಕಟ್ಟು ಸಮುದಾಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಕಾನೂನು ಪ್ರಕ್ರಿಯೆಯ ಚೌಕಟ್ಟಿನಲ್ಲಿ ಚೌ ಅವರ ಮೃತದೇಹ ಪತ್ತೆಗಾಗಿ ಅರಣ್ಯ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಗಳ ನೆರವು ಪಡೆಯಲಾಗಿದೆ. ಉಳಿದ ವಿಚಾರಣೆಯು ಪ್ರಗತಿಯಲ್ಲಿದೆ ಎಂದು ಡಿಜಿಪಿ ವಿವರಿಸಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ameircan missionary John Allen Chau was held hostage for two days before being killed by the Sentinelese tribe on November 17, the police investigations revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more