Telangana: ತಂಪು ಪಾನೀಯ, ಭಜ್ಜಿಗಾಗಿ ಆಂಬುಲೆನ್ಸ್ ಸೈರನ್-ಲೈಟ್ ಹಾಕಿ ಸಿಗ್ನಲ್ ದಾಟಿದ ಭೂಪ
ಬೆಂಗಳೂರು, ಜುಲೈ 12: ತುರ್ತು ಸಂದರ್ಭಗಳಲ್ಲಿ ಸೈರನ್ ಹಾಕಿಕೊಂಡು ತೆರಳುವ ಮೂಲಕ ಆಂಬುಲೆನ್ಸ್‌ಗಳು ಅನೇಕರ ಜೀವಗಳನ್ನು ಉಳಿಸುತ್ತವೆ. ಆದರೆ ಇಲ್ಲೊಬ್ಬ ವ್ಯಕ್ತಿ ಸಂಚಾರ ಸಿಗ್ನಲ್ ತಪ್ಪಿಸಲು ಅನವಶ್ಯಕವಾಗಿ ಆಂಬುಲೆನ್ಸ್ ಸೈರನ್ ಹಾಕಿದ್ದಾನೆ. ಸಿಗ್ನಲ್ ದಾಟಿದ ಮೇಲೆ ತಿಂಡಿ ಅಂಗಡಿಯೊಂದರ ಮುಂದೆ ನಿಲ್ಲಸಿದ್ದನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
#TelanganaPolice urges responsible use of ambulance services, citing misuse of sirens. Genuine emergencies require activating sirens for swift and safe passage. Strict action against abusers is advised.
— Anjani Kumar IPS (@Anjanikumar_IPS) July 11, 2023
Together, we can enhance emergency response and community safety. pic.twitter.com/TuRkMeQ3zN
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಸೈರನ್ ಹಾಕಿಕೊಂಡು ಹೋಗುವ ಆಂಬುಲೆನ್ಸ್‌ಗಳಿಗೆ ಅದೆಷ್ಟೋ ಜನ ಪೊಲೀಸರು ಸಹಕರಿಸುತ್ತಾರೆ. ಟ್ರಾಫಿಕ್ ಅನ್ನು ಕ್ಲಿಯರ್ ಮಾಡಿ ತುರ್ತು ವಾಹನಕ್ಕೆ ದಾರಿ ಮಾಡಿಕೊಡುತ್ತಾರೆ. ಆದರೆ ಇಂತಹ ವ್ಯವಸ್ಥೆಯನ್ನು ಇಲ್ಲೊಬ್ಬ ಆಸಾಮಿ ದುರುಪಯೋಗ ಮಾಡಿಕೊಂಡ ಘಟನೆ ತೆಲಂಗಾಣದಲ್ಲಿ ಜರುಗಿದೆ.

ಹೈದರಾಬಾದ್‌ನಲ್ಲಿ ಆಂಬ್ಯುಲೆನ್ಸ್ ತನ್ನ ತುರ್ತು ದೀಪಗಳು ಮತ್ತು ಸೈರನ್‌ಗಳನ್ನು ಆನ್ ಮಾಡಿಕೊಂಡು TS09 UA1390 ಸಂಖ್ಯೆಯ ಆಂಬುಲೆನ್ಸ್ ಟ್ರಾಫಿಕ್ ಸಿಗ್ನಲ್ ಅನ್ನು ದಾಟಿದ್ದಾನೆ. ದಾಟಿದ ಬಳಿಕ ಅದು ನೇರವಾಗಿ ಆಸ್ಪತ್ರೆಗೆ ಹೋಗದೇ ತಿಂಡಿ ಅಂಗಡಿ ಮುಂದೆ ನಿಂತಿದೆ. ಸರ್ಕಾರ ಈ ಸೌಲಭ್ಯವನ್ನು ಹೀಗೆ ದುರುಪಯೋಗ ಮಾಡಿಕೊಂಡಿದ್ದಕ್ಕೆ ತೆಲಂಗಾಣ ಪೊಲೀಸ್ ಮಹಾನಿರ್ದೇಶಕ ಅಂಜನಿ ಕುಮಾರ್ ಅವರು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಘಟನೆ ಕುರಿತ ವಿಡಿಯೋವನ್ನು ಅವರು ಟ್ವೀಟ್ ಮಾಡಿದ್ದಾರೆ.
ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತ
ಖಾಸಗಿ ಆಸ್ಪತ್ರೆಯ ಆಂಬ್ಯುಲೆನ್ಸ್‌ವೊಂದು ರಸ್ತೆ ಬದಿಯ ಉಪಾಹಾರ ಗೃಹದ ಮುಂದೆ ಸೈರನ್, ತುರ್ತು ದೀಪ್ ಆನ್ ಮಾಡಿಕೊಂಡು ನಿಂತಿದ್ದನ್ನು ಅಂಜನಿ ಕುಮಾರ್ ನೋಡಿ ಚಾಲಕನನ್ನು ಪ್ರಶ್ನೆ ಮಾಡಿರುವುದು ವಿಡಿಯೋದಲ್ಲಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಆಂಬುಲೆನ್ಸ್‌ನಲ್ಲಿ ನೋಡಿದರೆ ಯಾವ ರೋಗಿಯು ಇರಲಿಲ್ಲ. ಹಾಗಿದ್ದರೂ ಸೈರನ್ ಹಾಕಿ ಸಿಗ್ನಲ್ ದಾಟಿದ್ದ ಭೂಪ ನರ್ಸ್‌ಗಾಗಿ ತಿಂಡಿ, ತಂಪು ಪಾನೀಯ ಅಂಗಡಿ ಮುಂದೆ ವಾಹನ ನಿಲ್ಲಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರಂಭದಲ್ಲಿ ಸುಳ್ಳು ಹೇಳಲು ಪ್ರಯತ್ನಿಸಿದ ಚಾಲಕನಿಗೆ ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ವಾಹನಗಳನ್ನು ತಡೆದು ನಿಲ್ಲಿಸಿ ನಿಮಗೆ ದಾರಿ ಮಾಡಿಕೊಟ್ಟಿದ್ದೇನೆ. ಆದರೆ ನೀವು ಮಿರ್ಚಿ ಭಜ್ಜಿ ತಿನ್ನಲು ಈ ಅಂಗಡಿ ಮುಂದೆ ನಿಲ್ಲಿಸಿದ್ದೀರಿ ಎಂದು ಪೊಲೀಸರು ಚಾಲಕನಿಗೆ ಬುದ್ಧಿ ಹೇಳಿದ್ದಾರೆ.

ನೀವು ಮಾಡಿರುವ ತಪ್ಪು ರೆಕಾರ್ಡ್ ಆಗಿದ್ದು, ಇದನ್ನು ಮೇಲಾಧಿಕಾರಿಗಳಿಗೆ ಕಳುಹಿಸಿ ಶಿಕ್ಷೆ ಕೊಡಿಸುವುದಾಗಿ ಪೊಲೀಸರು ಹೇಳಿದ್ದಾರೆ. ಜೊತೆಗೆ ಜನ ಸೇವೆ ಇರುವ ವಾಹನಗಳನ್ನು, ಸೇವೆಯನ್ನು ಸದ್ಬಳಕೆ ಯಾಗಲಿದೆ ಎಂದು ತಿಳಿಹೇಳಿದ್ದಾರೆ.
ಸೈರನ್‌ಗಳ ದುರುಪಯೋಗವಾಗಿದೆ. ಆಂಬುಲೆನ್ಸ್ ಸೇವೆಗಳನ್ನು ಜವಾಬ್ದಾರಿಯುತ ಬಳಕೆಯಾಗಬೇಕಿದೆ. ನಿಜವಾಗಿಯೂ ತುರ್ತು ಸ್ಥಿತಿಗಳಿಗೆ ತ್ವರಿತ ಮತ್ತು ಸುರಕ್ಷಿತ ಮಾರ್ಗಕ್ಕಾಗಿ ಸೈರನ್‌ಗಳನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ದೌರ್ಜನ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications