Anant Ambani Wedding: ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಆಧುನಿಕ ಜಗತ್ತಿಗೆ ಪರಿಚಯ ಮಾಡಿದ ಅಂಬಾನಿ ಕುಟುಂಬದ ಮದುವೆ
ಭಾರತ ಜಗತ್ತಿನಲ್ಲೇ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿದ್ದು, ಬಹುದೊಡ್ಡ ಇತಿಹಾಸ ಇರುವ ದೇಶವಾಗಿದೆ. ಹೀಗೆ ಆಧುನಿಕ ಕಾಲದಲ್ಲಿ ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ವಿಶ್ವದ ಗಮನಕ್ಕೆ ತಂದಿದ್ದೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಅದ್ಧೂರಿ ವಿವಾಹ. ಇಡೀ ಪ್ರಪಂಚದ ಗಮನ ಸೆಳೆದು, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೇ ಪಸರಿಸಿದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮದುವೆ ನಡೆದು ಇದೀಗ ಒಂದು ವರ್ಷ ತುಂಬಿದೆ. ಜಾಮ್‌ನಗರ, ಯುರೋಪ್ ಮತ್ತು ಮುಂಬೈ ಮಹಾನಗರದಲ್ಲಿ ನಡೆದಿದ್ದ ಈ ವಿವಾಹ ಸಮಾರಂಭವು ಗಣ್ಯರು ಮತ್ತು ಸೆಲೆಬ್ರಿಟಿಗಳ ಸಮಾರಂಭವಷ್ಟೇ ಆಗಿರದೆ ಭಾರತದ ಸಾಂಸ್ಕೃತಿಕ ಶಕ್ತಿಯನ್ನು ಇಡೀ ಜಗತ್ತಿಗೇ ಸಾರಿತ್ತು.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷರಾದ ಮುಕೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ಮತ್ತು ಉದ್ಯಮಿ ವಿರೇನ್ ಮೆರ್ಚಂಟ್‌ರ ಪುತ್ರಿ ರಾಧಿಕಾ ಅವರ ವಿವಾಹ ಸಾಕಷ್ಟು ವಿಚಾರದಲ್ಲಿ ಭಾರತದ ಶಕ್ತಿಯನ್ನು ಜಗತ್ತಿಗೇ ಪಸರಿಸಿದೆ. ಜಾಮ್‌ನಗರ ಟು ಮುಂಬೈ ತನಕ ಬಹುಸ್ಥಳೀಯ ಸಂಭ್ರಮವು ಜಾಗತಿಕ ಚರ್ಚೆಯ ವಿಷಯವಾಗಿತ್ತು. ನಿರ್ವಹಣೆ ಮತ್ತು ವಿವರವಾದ ಆಯೋಜನೆ ಅಂತಾರಾಷ್ಟ್ರೀಯ ಮಾಧ್ಯಮಗಳ ವೇದಿಕೆಯಲ್ಲಿ ವ್ಯಾಪಕವಾಗಿ ಗಮನ ಸೆಳೆದಿತ್ತು. ಇದು ಭಾರತದಲ್ಲಿ ಕಾರ್ಯಕ್ರಮವನ್ನ ಆಯೋಜನೆ ಹಾಗೂ ಆತಿಥ್ಯ ವಹಿಸುವ ಶಕ್ತಿಯನ್ನು ಜಾಗತಿಕ ಮಟ್ಟದಲ್ಲಿ ಪ್ರಚುರಪಡಿಸಿದ ಕ್ಷಣವಾಗಿತ್ತು.

ಬಲಿಷ್ಠ ಭಾರತಕ್ಕೆ ಇನ್ನಷ್ಟು ಹೆಮ್ಮೆ
ಭಾರತವನ್ನ ಆತ್ಮವಿಶ್ವಾಸ ತುಂಬಿರುವ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ ದೇಶವಾಗಿ ಪ್ರಸ್ತುತಪಡಿಸುವ ನಿರಂತರ ಪ್ರಯತ್ನ ವಿಶೇಷವಾಗಿತ್ತು. ಮೂಲಸೌಕರ್ಯ, ಲಾಜಿಸ್ಟಿಕ್ಸ್ ಅಥವಾ ಆತಿಥ್ಯ ವಹಿಸುವ ಕ್ಷೇತ್ರದಲ್ಲಿ ಆಧುನಿಕವಾಗಿ ಭಾರತವು ಈಗ ಜಾಗತಿಕ ವೇದಿಕೆಯಲ್ಲಿ ಬೆಳೆಯುತ್ತಿರುವ ಸ್ಥಾನಮಾನವನ್ನು ಇದು ಪ್ರತಿಬಿಂಬಿಸುವಂತೆ ಕಂಡಿತು.
ಭಾರತವು ತನ್ನ ವ್ಯಾಪಾರ, ರಾಜತಂತ್ರಿಕ ಸಂಬಂಧ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಪ್ರಭಾವವನ್ನು ವಿಸ್ತರಿಸುತ್ತಿರುವಂತೆ ಈ ವಿವಾಹ ಪ್ರಗತಿಯನ್ನು ಸಂಕ್ಷಿಪ್ತವಾಗಿ ಪ್ರತಿಬಿಂಬಿಸುವ ನಿರ್ಣಾಯಕ ಕ್ಷಣವಾಗಿತ್ತು. ಭವ್ಯತೆಯಲ್ಲಿ & ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಅಂಕಿತವಾದ ಮಹೋತ್ಸವಗಳನ್ನು ಆಯೋಜಿಸುವ ರಾಷ್ಟ್ರದ ಅಪೂರ್ವ ಸಾಮರ್ಥ್ಯವನ್ನು ಕೂಡ ಈ ವಿವಾಹವು ಜಗತ್ತಿಗೆ ತೋರಿಸಿಕೊಟ್ಟಿದೆ.
ಆಧುನಿಕ ಜಗತ್ತಿನಲ್ಲೂ ಈ ವಿವಾಹ ಭಾರತೀಯ ಮೌಲ್ಯಗಳು, ವಿಧಿಗಳು ಮತ್ತು ಪರಂಪರೆಗಳಲ್ಲಿ ಸ್ಥಿರವಾಗಿ ರೂಪುಗೊಂಡಿತ್ತು.
ಸಾಂಸ್ಕೃತಿಕ ಶ್ರೀಮಂತಿಕೆಗೆ ಮಾದರಿ ಈ ವಿವಾಹ
ಅಂಬಾನಿ ಅವರ ಕುಟುಂಬಕ್ಕೆ, ಈ ವಿವಾಹವು ಭಾರತದ ಆತಿಥ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿನಾದ್ಯಂತ ತಲುಪಿಸಲು ಒಂದು ವೇದಿಕೆ ಒದಗಿಸಿತ್ತು. ವಿಶ್ವದ ವಿವಿಧ ಖಂಡಗಳಿಂದ ಬಂದ ಅತಿಥಿಗಳು ಕೇವಲ ಭವ್ಯತೆಯಿಂದ ಮಾತ್ರವಲ್ಲದೆ, ವಿಧಿ, ಆಹಾರ, ಸಂಗೀತ ಮತ್ತು ಆಧ್ಯಾತ್ಮಿಕತೆ ಮೂಲಕ ಕೂಡ ಭಾರತದಲ್ಲಿ ಅನುಭವ ಪಡೆದರು.
ಈ ವಿವಾಹ ಸಮಾರಂಭದಲ್ಲಿ ಆಯಾಮ ಜಾಗತಿಕವಾಗಿದ್ದರೂ ಆತ್ಮಭಾವನೆ ಸ್ಪಷ್ಟವಾಗಿ ಭಾರತೀಯವಾಗಿತ್ತು ಎನ್ನುವುದರಲ್ಲಿ ಯಾವುದೇ ಪ್ರಶ್ನೆ ಮೂಡುವುದಿಲ್ಲ. ಹಾಗೇ, ಅನೇಕರು ಶಕ್ತಿಶಾಲಿ ಸಾಂಸ್ಕೃತಿಕ ಸಂದೇಶವನ್ನ ಕೂಡ ಇಲ್ಲಿ ಕಂಡುಕೊಂಡರು.
ಒಂದು ವರ್ಷ ಕಳೆದರೂ ಈ ಕಾರ್ಯಕ್ರಮ ಅಂತಾರಾಷ್ಟ್ರೀಯ ವಲಯದಲ್ಲಿ ಸಾಂಸ್ಕೃತಿಕ ರಾಜತಂತ್ರದಲ್ಲಿ ಮಾದರಿಯಾಗಿ ಉಲ್ಲೇಖಿಸಲಾಗುತ್ತಿದ್ದು, ಭಾರತದ ಈ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನಿಖರತೆ, ಗರ್ವ ಮತ್ತು ಆಳವಾದ ಸಾಂಸ್ಕೃತಿಕ ಸ್ಪಂದನೆಯ ಜೊತೆಗೆ ಹೇಗೆ ತಿಳಿಸಬಹುದು ಎಂಬುದಕ್ಕೆ ಸ್ಪಷ್ಟ ಉದಾಹರಣೆ ಆಗಿದೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ಬೇಸಿಗೆಯ ಸುಡು ಬಿಸಿಲಿನಿಂದ ಪಾರಾಗಲು ಭೇಟಿ ನೀಡಬಹುದಾದ ಭಾರತದ 10 ಪ್ರೇಕ್ಷಣೀಯ ಸ್ಥಳಗಳು












Click it and Unblock the Notifications