ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಿಲು ಹಾಕಿದ ಕಚೇರಿ; ಈ ಕಂಪನಿ ಉದ್ಯೋಗಿಗಳಿಗೆ Work From Home ಶಾಶ್ವತ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 30: ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಮತ್ತೆ ಕಚೇರಿಗಳಿಗೆ ಕರೆಯಲು ಆರಂಭಿಸಿರುವ ಈ ಸಮಯದಲ್ಲಿ, ಅಮೆಜಾನ್ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್ ಕಾಲ್ ಸೆಂಟರ್‌ಗಳಲ್ಲಿ ತನ್ನ ಗ್ರಾಹಕ ಸೇವಾ ಉದ್ಯೋಗಿಗಳನ್ನು ಮನೆಯಿಂದಲೇ ಕೆಲಸ ಮಾಡಲು ವಿನಂತಿಸುತ್ತಿದೆ.

ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವುದರಿಂದ ಕಂಪನಿಗೆ ರಿಯಲ್ ಎಸ್ಟೇಟ್‌ನಲ್ಲಿ ಹಣವನ್ನು ಉಳಿಸಲು ಸಹಾಯವಾಗುತ್ತದೆ ಎಂದು ಈ ವಿಷಯದ ಅಧ್ಯಯನ ಮಾಡಿರುವ ಜನರು ಹೇಳುತ್ತಿದ್ದಾರೆ. ಕಳೆದ 2005ರಲ್ಲಿ ವಾಷಿಂಗ್ಟನ್‌ನ ಕೆನ್ನೆವಿಕ್‌ನಲ್ಲಿ ಪ್ರಾರಂಭವಾದ ಕಾಲ್ ಸೆಂಟರ್ ಕಚೇರಿಯನ್ನು ಮುಚ್ಚುವುದಕ್ಕೆ ಕಂಪನಿಯು ಮುಂದಾಗಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಅನೇಕ ಸಂಸ್ಥೆಗಳು ಮತ್ತು ಟೆಕ್ ಕಂಪನಿಗಳು ಸೇರಿದಂತೆ ಕಾರ್ಪೋರೇಟ್ ಸಂಸ್ಥೆಗಳು ತಮ್ಮ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಸೂಚನೆ ನೀಡಿದ್ದವು. ಅಲ್ಲಿಂದ ಶುರುವಾದ Work From Home ಪದ್ಧತಿಯು ಇಂದು ದುಡ್ಡು ಉಳಿಸುವ ಯೋಜನೆಯವರೆಗೂ ಮುಂದುವರಿದಿದೆ.

ಅನುಕೂಲಕರ ರೀತಿಯಲ್ಲಿ ಗ್ರಾಹಕರಿಗೆ ಸೇವೆ

ಅನುಕೂಲಕರ ರೀತಿಯಲ್ಲಿ ಗ್ರಾಹಕರಿಗೆ ಸೇವೆ

ವರ್ಚುವಲ್ ಆಗಿ ಕಾರ್ಯ ನಿರ್ವಹಿಸುವುದರ ಮೂಲಕ ನಮ್ಮ ಗ್ರಾಹಕರಿಗೆ ಹೆಚ್ಚು ಅನುಕೂಲಕರ ರೀತಿಯಲ್ಲಿ ಸೇವೆಯನ್ನು ಒದರಿಸುವುದಕ್ಕೆ ನಾವು ಆದ್ಯತೆ ನೀಡುತ್ತೇವೆ. ಗ್ರಾಹಕರಿಗೆ ಉತ್ತಮ ದರ್ಜೆಯ ಸೇವೆ ಒದಗಿಸಲು ಆದ್ಯತೆ ನೀಡುತ್ತಿರುವ ಸಂದರ್ಭದಲ್ಲಿ ಪರಿವರ್ತನೆಯು ತಡೆರಹಿತವಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ನಾವು ಉದ್ಯೋಗಿಗಳ ಜೊತೆಗೆ ಕಾರ್ಯ ನಿರ್ವಹಿಸುತ್ತಿದ್ದೇವೆ," ಎಂದು ಅಮೆಜಾನ್ ವಕ್ತಾರ ಬ್ರಾಡ್ ಗ್ಲಾಸರ್ ಇಮೇಲ್‌ನಲ್ಲಿ ತಿಳಿಸಿದ್ದಾರೆ.

 ಉದ್ಯೋಗಿಗಳನ್ನು ಕಚೇರಿಗೆ ಕರೆಯುವ ಉದ್ದೇಶವಿಲ್ಲ

ಉದ್ಯೋಗಿಗಳನ್ನು ಕಚೇರಿಗೆ ಕರೆಯುವ ಉದ್ದೇಶವಿಲ್ಲ

ಈಗಾಗಲೇ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಯಾವುದೇ ಕಾರಣಕ್ಕೆ ಕಚೇರಿಗೆ ಆಗಮಿಸುವಂತೆ ಕರೆಯುವ ಉದ್ದೇಶವನ್ನು ಕಂಪನಿ ಹೊಂದಿಲ್ಲ ಎಂದು ಈ ತಿಂಗಳ ಆರಂಭದಲ್ಲಿ ಇ-ರೀಟೇಲರ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಂಡಿ ಜಾಸ್ಸಿ ಹೇಳಿದ್ದರು. "ಉದ್ಯೋಗಿಗಳು ಕಚೇರಿಗೆ ಹಿಂತಿರುಗಲು ಅಗತ್ಯವಿರುವ ಯೋಜನೆಯನ್ನು ನಾವು ಹೊಂದಿಲ್ಲ. ನಾವು ಇದೀಗ ಉದ್ಯೋಗಿಗಳನ್ನು ಕಚೇರಿಗೆ ಕರೆಸುವುದಿಲ್ಲ ನಿಜ, ಆದರೆ ಕಲಿಕೆಯನ್ನು ಹಾಗೂ ಹೊಂದಾಣಿಕೆ ಪದ್ಧತಿಯನ್ನು ಮುಂದುವರಿಸಲಿದ್ದೇವೆ, ಎಂದು ಹೇಳಿದ್ದರು.

ಆಪಲ್ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಗೆ

ಆಪಲ್ ಉದ್ಯೋಗಿಗಳು ವಾರದಲ್ಲಿ ಮೂರು ದಿನ ಕಚೇರಿಗೆ

ಈ ಹಿಂದೆ ಆಪಲ್ ತನ್ನ ಉದ್ಯೋಗಿಗಳಿಗೆ ವಾರದಲ್ಲಿ ಕನಿಷ್ಠ ಮೂರು ದಿನ ಕಚೇರಿಯಲ್ಲಿ ಇರುವಂತೆ ಸೂಚನೆ ನೀಡಿತ್ತು. ಪ್ರಾರಂಭದಲ್ಲಿ ಮಂಗಳವಾರ, ಬುಧವಾರ ಮತ್ತು ಗುರುವಾರ ಕಚೇರಿಗೆ ಆಗಮಿಸುವಂತೆ ಆಪಲ್ ಕಂಪನಿಯು ತನ್ನ ಉದ್ಯೋಗಿಗಳಿಗೆ ಸೂಚಿಸಿತ್ತು. ತದನಂತರದಲ್ಲಿ ನೀವು ವಾರ ಯಾವ ಮೂರು ದಿನ ಕಚೇರಿಗೆ ಬರಬೇಕು ಎಂಬುದನ್ನು ನಿಮ್ಮ ತಂಡವೇ ನಿರ್ಧರಿಸಲಿದೆ. ಉಳಿದ ವಾರದ ಎರಡು ದಿನ ಕಚೇರಿಯಿಂದ ದೂರದಲ್ಲಿ ಇದ್ದುಕೊಂಡೇ ಉದ್ಯೋಗಿಗಳು ತಮ್ಮ ಕೆಲಸವನ್ನು ಮಾಡಬಹುದು. ವರ್ಷದಲ್ಲಿ ನಾಲ್ಕು ವಾರಗಳವರೆಗೂ ಉದ್ಯೋಗಿಗಳು ಮನೆಯಿಂದ ಅಥವಾ ಕಚೇರಿಯಿಂದ ದೂರದಲ್ಲಿ ಇದ್ದುಕೊಂಡು ತಮ್ಮ ಕೆಲಸವನ್ನು ಮಾಡುವ ಅವಕಾಶ ಹೊಂದಿರುತ್ತಾರೆ," ಎಂದು ಉದ್ಯೋಗಿಗೆ ಟಿಮ್ ಕುಕ್ ಹೇಳಿದ್ದಾರೆ.

ಮೈಕ್ರೋಸಾಪ್ಟ್ ಸಿಇಒ WFH ಕುರಿತು ಏನು ಹೇಳುತ್ತಾರೆ?

ಮೈಕ್ರೋಸಾಪ್ಟ್ ಸಿಇಒ WFH ಕುರಿತು ಏನು ಹೇಳುತ್ತಾರೆ?

ಕೋವಿಡ್ ಪ್ರಕರಣಗಳು ಗಣನೀಯವಾಗಿ ಇಳಿಮುಖವಾಗಿರುವುದರಿಂದ ಜಗತ್ತಿನಾದ್ಯಂತ ಹೆಚ್ಚಿನ ಐಟಿ ಕಂಪನಿಗಳು ವಲಯವನ್ನು ಲೆಕ್ಕಿಸದೆ ಉದ್ಯೋಗಿಗಳನ್ನು ಕಚೇರಿಗೆ ವಾಪಸ್ ಕರೆಸುತ್ತಿವೆ. ನಿರ್ವಹಣೆಯು ತಮ್ಮ ತಂಡವು ಕಚೇರಿಗೆ ಮರಳಲು ಬಯಸುತ್ತಿರುವಾಗ, ಹೆಚ್ಚಿನ ಉದ್ಯೋಗಿಗಳು ಇನ್ನೂ ಮನೆಯಿಂದಲೇ ಕೆಲಸ ಮಾಡಲು ಹೆಣಗಾಡುತ್ತಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಅವರು ಈಗ ಮನೆಯಿಂದಲೇ ಕೆಲಸ ಮಾಡುವ ಸಂಸ್ಕೃತಿಯಿಂದ ಕೆಲಸ ಮಾಡುವ ಬಗ್ಗೆ ತಮ್ಮ ಆಲೋಚನೆಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ ಮತ್ತು ಅವರ ಸ್ವಂತ ಕಂಪನಿಯ ಆಂತರಿಕ ಸಮೀಕ್ಷೆಯು ಅದರ ಬಗ್ಗೆ ಏನು ಹೇಳುತ್ತಿದೆ ? ಎಂದರೆ, ಮೈಕ್ರೋಸಾಫ್ಟ್‌ನ ಹೆಚ್ಚಿನ ಮುಖ್ಯಸ್ಥರು, ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ಬಯಸುತ್ತಾರೆ. ಏಕೆಂದರೆ, ಐಟಿ ಕಂಪನಿಗಳ ಉದ್ಯೋಗಿಗಳು ಮನೆಯಿಂದಲೇ ಕೆಲಸ ಮಾಡುವಾಗ ವಿಳಂಬ ಆಗುತ್ತದೆ ಎಂದು ನಾದೆಲ್ಲಾ ಹೇಳಿದ್ದಾರೆ. ಇನ್ನು ಈ ವಿಷಯವನ್ನು ಮೈಕ್ರೋಸಾಫ್ಟ್‌ನ ಉದ್ಯೋಗಿಗಳು ಬೇರೆ ರೀತಿಯಲ್ಲಿ ಭಾವಿಸುತ್ತಾರೆ!

English summary
This Company indicated Employees to Continue permanent Work From Home after Shuts Down Offices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X