ಹಿಮಲಿಂಗರೂಪಿ ಅಮರನಾಥನ ದರ್ಶನಕ್ಕೆ ನೋಂದಣಿ ಆರಂಭ
ಶ್ರೀನಗರ, ಮಾ.4: ಅಮರನಾಥ ಯಾತ್ರೆಪ್ರಕ್ರಿಯೆ ಮತ್ತೆ ಆರಂಭವಾಗಿದೆ. ಸುಮಾರು 59 ದಿನಗಳ ಪವಿತ್ರ ಯಾತ್ರೆಗೆ ನೋಂದಾವಣೆ ಮುಖ್ಯ. ವೈದ್ಯಕೀಯ ಪರೀಕ್ಷೆ ನಂತರವೇ ಯಾತ್ರಿಗಳಿಗೆ ಚಾರಣ ಮಾಡಲು ಅನುಮತಿ ನೀಡಲಾಗುತ್ತದೆ. ಎರಡು ಮಾರ್ಗಗಳಲ್ಲಿ ತೆರಳಲು 430ಕ್ಕೂ ಅಧಿಕ ಬ್ಯಾಂಕ್ ಗಳ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಬಾಲ್ಟಲ್ ಹಾಗೂ ಚಂದನ್ ವಾರಿ ಮಾರ್ಗದಿಂದ ಅಮರನಾಥ್ ಕಡೆಗೆ ತೆರಳುವವರಿಗೆ ಮಾ.2ರಿಂದಲೇ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ದೇಶದೆಲ್ಲೆಡೆ ಇರುವ ಪಂಜಾಬ್ ನ್ಯಾಷನಲ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಯಸ್ ಬ್ಯಾಂಕ್ ಗಳ 430ಕ್ಕೂ ಅಧಿಕ ಬ್ರಾಂಚ್ ಗಳಲ್ಲಿ ಅಮರ್ ನಾಥ್ ಯಾತ್ರೆ ಅರ್ಜಿ ಹಾಗೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ ಎಂದು ಶ್ರೀ ಅಮರ್ ನಾಥ್ ಜೀ ದೇಗುಲ ಟ್ರಸ್ಟ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಕೇಶ್ ಕುಮಾರ್ ಗುಪ್ತಾ ಹೇಳಿದ್ದಾರೆ.

59 ದಿನಗಳ ಯಾತ್ರೆ ಜುಲೈ 2 ರಿಂದ ಆರಂಭಗೊಳ್ಳಲಿದ್ದು ಆಗಸ್ಟ್ 29 ರಕ್ಷಾ ಬಂಧನ್ ದಿನದಂದು ಸಂಪನ್ನಗೊಳ್ಳಲಿದೆ. ನೊಂದಣಿ ವಿವರ ಹಾಗೂ ಯಾತ್ರಿಕರಿಗೆ ಮಾರ್ಗ ಸೂಚಿ ವಿವರಗಳನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದೆ. 13ವರ್ಷಕ್ಕಿಂತ ಕೆಳಗಿನವರು, 75 ವರ್ಷ ಮೇಲ್ಪಟ್ಟವರು, 6 ವಾರಗಳು ಕಳೆದ ಗರ್ಭಿಣಿಯರಿಗೆ ನೋಂದಣಿ ನಿಷೇಧಿಸಲಾಗಿದೆ. ಶ್ರೀ ಅಮರನಾಥ್ ದೇಗುಲ ಬೋರ್ಡ್(SASB) ವತಿಯಿಂದ ಪ್ರತಿದಿನ ನೋಂದಣಿ ನಡೆಯುತ್ತದೆ.
ದರ್ಶನದ ಅವಧಿ: ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳ ಹೊರತಾಗಿ ವರ್ಷವಿಡೀ ಇಲ್ಲಿ ಹಿಮ ಉದುರುವ ವಾತಾವರಣ. ಈ ಕಾರಣಕ್ಕೆ ಕೇವಲ ಈ ಸಮಯದಲ್ಲಿ ಮಾತ್ರ ದೇವಸ್ಥಾನದ ಬಾಗಿಲು ತೆರೆದಿರುತ್ತದೆ. ಯಾತ್ರಿಗಳು ನಡೆದು ಇಲ್ಲವೇ ಕುದುರೆ ಸವಾರಿ ಮೂಲಕ ಸಾಗಬೇಕು. ಲಗ್ಗೇಜ್ ಹೊರಲು ಪೊರ್ಟರ್ ಗಳಿರುತ್ತಾರೆ. ಇದಕ್ಕೆ ಪ್ರತ್ಯೇಕ ವೆಚ್ಚ ಭರಿಸಬೇಕಾಗುತ್ತದೆ.
ಜಮ್ಮು-ಪಹಲ್ ಗಾಮ್- ಚಂದನ್ ವಾರಿ-ಶೇಷ್ ನಾಗ್- ಪಂಚತರ್ತ್ನಿ- ಅಮರನಾಥ್ ಹಾಗೂ ಅದೇ ಕ್ರಮದಲ್ಲಿ ಹಿಂತಿರುಗಿ ಶ್ರೀನಗರ ತಲುಪ ಬಹುದು. ಮಾರ್ಗಮಧ್ಯೆ ಸುಂದರ ದೃಶ್ಯ, ಕಣಿವೆ, ಸರೋವರಗಳು ಭಕ್ತರ ಕಣ್ಮನ ಮುದಗೊಳಿಸುತ್ತದೆ. ಅಮರ್ ನಾಥ್ ಯಾತ್ರೆ ವಿವರ ಹಾಗೂ ನೋಂದಣಿಗೆ ವೆಬ್ ಸೈಟ್ ಗೆ ಭೇಟಿ ಕೊಡಿ












Click it and Unblock the Notifications