ಭಾರಿ ಮಳೆಯಿಂದಾಗಿ ಅಮರನಾಥ ಯಾತ್ರೆ ತಾತ್ಕಾಲಿಕ ಸ್ಥಗಿತ
ಶ್ರೀನಗರ, ಜೂನ್ 30 : ಅಮರನಾಥ ಯಾತ್ರೆ ಗುರುವಾರ ಆರಂಭವಾಗಿದ್ದು, ಭಾರಿ ಮಳೆ ಮತ್ತು ಭೂ ಕುಸಿತದಿಂದಾಗಿ ಶುಕ್ರವಾರ ಬೆಳಗ್ಗೆ ಯಾತ್ರೆ ಸ್ಥಗಿತಗೊಳಿಸಲಾಗಿದೆ ಎಂದು ಶ್ರೀ ಅಮರನಾಥ್ ದೇವಾಲಯ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
J&K: #AmarnathYatra from Udhampur suspended due to heavy rain and landslide on National Highway pic.twitter.com/kUExQFOTgk
— ANI (@ANI_news) June 30, 2017
ಇಂದು ನಸುಕಿನ ವೇಳೆ ಭೂ ಕುಸಿತವುಂಟಾದ್ದರಿಂದ ಪಹಲ್ ಗಾಮ್ ಮತ್ತು ಬಲ್ತಾಲ್ ರಸ್ತೆಯ ಮೂಲಕ ಸಾಗುತ್ತಿರುವ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಯಾತ್ರಿಕರನ್ನು ಬಲ್ತಾಲ್ ಮತ್ತು ನನ್ವಾನ್ ಮೂಲ ಶಿಬಿರಕ್ಕೆ ಕಳಿಸಿದ್ದು, ಅವರಿಗೆ ಯಾತ್ರೆ ಪುನರಾರಂಭವಾಗುವ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಅಮರನಾಥ ಯಾತ್ರೆ ಆರಂಭವಾದ ಮೊದಲ ದಿನವೇ ಬಲ್ತಾಲ್ ಮಾರ್ಗದಲ್ಲಿ ಇಬ್ಬರು ಯಾತ್ರಿಕರು ಮೃತಪಟ್ಟಿದ್ದಾರೆ. ಭಯೋತ್ಪಾದಕರಿಂದ ಸಂಭವನೀಯ ದಾಳಿಯ ಆತಂಕ ಇರುವುದರಿಂದ ಅಮರನಾಥ ಯಾತ್ರಿಕರ ಸುರಕ್ಷತೆಗಾಗಿ ಬಲ್ತಾಲ್ ಮತ್ತು ಪಹಲ್ಗಾಂವ್ ಮಾರ್ಗಗಳಲ್ಲಿ ಜಮ್ಮು ಕಾಶ್ಮೀರ ಪೊಲೀಸರನ್ನಷ್ಟೇ ಅಲ್ಲದೆ ಅರೆ ಸೆನಾ ಪಡೆಗಳ ಸುಮಾರು 30 ಸಾವಿರ ನಿಬ್ಬಂದಿಯನ್ನು ನಿಯೋಜಿಸಲಾಗಿದೆ.












Click it and Unblock the Notifications