ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜನಬಲವೂ ಇಲ್ಲ, ನೆಲೆಯೂ ಇಲ್ಲ: ಅಲ್ಪೇಶ್ ಠಾಕೂರ್
ಅಹಮದಾಬಾದ್, ನವೆಂಬರ್ 17: ಒಂದು ಕಾಲದಲ್ಲಿ ರಾಹುಲ್ ಗಾಂಧಿಗೆ ನಿಕಟವರ್ತಿಯಾಗಿದ್ದ ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ಈಗ ಬಿಜೆಪಿ ಪರವಾಗಿ ಬೆಂಬಲವನ್ನು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಗಾಂಧಿನಗರ ದಕ್ಷಿಣ ಕ್ಷೇತ್ರದಿಂದ ಅಲ್ಪೇಶ್ ಠಾಕೋರ್ ಅವರನ್ನು ಬಿಜೆಪಿ ಕಣಕ್ಕಿಳಿಸಿದೆ. ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ಪಕ್ಷಾಂತರಿಗಳಿಗೆ ಟಿಕೆಟ್ ನೀಡಿದೆ.
ಸದ್ಯ ಬಿಜೆಪಿಗೆ ವಲಸೆ ಬಂದ ಅಲ್ಪೇಶ್ ಠಾಕೋರ್ ಕಾಂಗ್ರೆಸ್ ವಿರುದ್ಧ ಹೇಳಿಕೆಯನ್ನು ನೀಡಿದ್ದಾರೆ. 'ಗುಜರಾತ್‌ನಲ್ಲಿ ಕಾಂಗ್ರೆಸ್ ತನ್ನ ನೆಲೆಯನ್ನು ಕಳೆದುಕೊಂಡಿದೆ ಮತ್ತು ಜನಬಲವನ್ನೂ ಹೊಂದಿಲ್ಲ' ಎಂದು ಕಾಂಗ್ರೆಸ್ ವಿರುದ್ಧ ಅಲ್ಪೇಶ್ ವಾಗ್ದಾಳಿ ಮಾಡಿದ್ದಾರೆ. ಇದರಿಂದಾಗಿ ಗುಜರಾತ್ ಅಸೆಂಬ್ಲಿ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಅಲ್ಪೇಶ್ ಠಾಕೂರ್ ಗಮನಾರ್ಹ ಬದಲಾವಣೆ ತರಬಹುದು ಎನ್ನಲಾಗುತ್ತಿದೆ.
ಗುಜರಾತ್ ವಿಧಾನಸಭಾ ಚುನಾವಣೆ ಡಿಸೆಂಬರ್ 1 ಮತ್ತು 5 ರಂದು ನಡೆಯಲಿದೆ ಎಂದು ನಿಮಗೆ ಹೇಳೋಣ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.
ಬಿಜೆಪಿ ನಾಯಕ ಅಲ್ಪೇಶ್ ಠಾಕರ್ 2019 ರ ಮೊದಲು ಕಾಂಗ್ರೆಸ್‌ನಲ್ಲಿದ್ದರು. 2017 ರ ಚುನಾವಣೆಯ ಸಮಯದಲ್ಲಿ ಗುಜರಾತ್‌ನಲ್ಲಿ ಬಿಜೆಪಿ ವಿರೋಧಿ ಚಳವಳಿಯ ಮುಖಗಳಲ್ಲಿ ಒಬ್ಬರಾಗಿದ್ದರು. ಅಲ್ಪೇಶ್ ಠಾಕೂರ್ ಅವರು 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಗೆದ್ದರು. ಆದರೆ 2019 ರ ಉಪಚುನಾವಣೆಯಲ್ಲಿ ರಾಧನ್‌ಪುರ ಕ್ಷೇತ್ರವನ್ನು ಕಳೆದುಕೊಂಡರು.

150ಕ್ಕೂ ಹೆಚ್ಚು ಸ್ಥಾನ ಗೆಲ್ಲುವು ಖಚಿತ- ಅಲ್ಪೇಶ್ ಠಾಕೂರ್
2019 ರಲ್ಲಿ ಬಿಜೆಪಿ ಸೇರಿದ ಅಲ್ಪೇಶ್ ಠಾಕೂರ್ ಅವರು ಗಾಂಧಿನಗರ ದಕ್ಷಿಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ (ನವೆಂಬರ್ 17) ನಾಮಪತ್ರ ಸಲ್ಲಿಸಲಿದ್ದಾರೆ. ನವೆಂಬರ್ 14 ರಂದು ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯಲ್ಲಿ ಅಲ್ಪೇಶ್ ಠಾಕೋರ್ ಹೆಸರನ್ನು ಘೋಷಿಸಲಾಗಿದೆ. "ಗುಜರಾತ್ ಚುನಾವಣೆ ನಮಗೆ ಸವಾಲಲ್ಲ. ಬಿಜೆಪಿ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಇಲ್ಲಿ ಸರ್ಕಾರ ರಚಿಸಲಿದೆ" ಎಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ.

ಅಲ್ಪೇಶ್ ಠಾಕೂರ್ ಗೆಲುವು ಖಚಿತ ಏಕೆ?
ಮೂರು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕರಾಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ಅಲ್ಪೇಶ್ ಠಾಕೂರ್ ಸದ್ಯ ಕಾಂಗ್ರೆಸ್ ವಿರುದ್ಧ ಕೆಂಡ ಕಾರಿದ್ದಾರೆ. 'ಕಾಂಗ್ರೆಸ್ ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಎಂದು ಹೇಳುವವರು ದಾರಿ ತಪ್ಪಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕು. ಕಾಂಗ್ರೆಸ್‌ಗೆ ಯಾವುದೇ ತಳಹದಿಯಿಲ್ಲ. ಅದರ ನಾಯಕರು ತಮ್ಮ ತಮ್ಮಲ್ಲೇ ಹೊಡೆದಾಡಿಕೊಂಡು ಸೋತಿದ್ದಾರೆ. ಅದಕ್ಕಾಗಿಯೇ ಆಮ್ ಆದ್ಮಿ ಪಕ್ಷದ ಬಗ್ಗೆ ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ ನಾಯಕರು ಯಾವುದೇ ಕೆಲಸ ಮಾಡುತ್ತಿಲ್ಲ. ಅವರ ರಾಜಕೀಯ ಕಿಚ್ಚು ನಾಶವಾಗಿದೆ. ಅವರಿಗೆ ಸಾಮೂಹಿಕ ನೆಲೆ ಇಲ್ಲ' ಎಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ.
2022 ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಗೆಲುವಿನ ವಿಶ್ವಾಸವನ್ನು ವ್ಯಕ್ತಪಡಿಸಿದ ಬಿಜೆಪಿ ನಾಯಕ ಅಲ್ಪೇಶ್ ಠಾಕೂರ್, ಗುಜರಾತ್‌ನಲ್ಲಿ ನನ್ನ ಮುಂದೆ ಯಾವುದೇ ರಾಜಕೀಯ ಸವಾಲು ಇಲ್ಲ ಎಂದು ಹೇಳಿದರು. "ನಾನು ಇಲ್ಲಿನ ಜನರ ಹೃದಯ ಗೆದ್ದಿದ್ದೇನೆ. ಬಿಜೆಪಿ ಕಾರ್ಯಕರ್ತರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆ. ಇಲ್ಲಿ ನನಗೆ ಯಾವುದೇ ಸವಾಲು ಎದುರಾಗುವುದಿಲ್ಲ. ಹೀಗಾಗಿ ಇಲ್ಲಿ ನನಗೆ ಗೆಲುವು ಖಚಿತ ಎಮದಿದ್ದಾರೆ" ಎಂದು ಅವರು ಹೇಳಿದ್ದಾರೆ.

OBC ನೀತಿಯ ಬಗ್ಗೆ ಅಲ್ಪೇಶ್ ಅವರ ನಿಲುವು
ನಾನು ಮೂಲಸೌಕರ್ಯ, ಸ್ಟಾರ್ಟಪ್‌ಗಳು ಮತ್ತು ಇತರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಲು ಯೋಚಿಸಿದ್ದೇನೆ. ಮತ್ತೊಮ್ಮೆ ಗೆದ್ದ ನಂತರ ನಮ್ಮ ಕೆಲಸ ಮುಂದುವರೆಸುತ್ತೇನೆಂದು ಅಲ್ಪೇಶ್ ಠಾಕೂರ್ ಹೇಳಿದ್ದಾರೆ. ಅಲ್ಪೇಶ್ ಅವರನ್ನು ಒಬಿಸಿ ಮುಖವಾಗಿ ನೋಡಲಾಗುತ್ತಿದೆ ಮತ್ತು ಈ ಸಮುದಾಯದ ಜನರು ಅವನ ಮೇಲೆ ಹೆಚ್ಚಿನ ಭರವಸೆ ಹೊಂದಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವಾಗ ಕಾಂಗ್ರೆಸ್ ಶಾಸಕರಾಗಿದ್ದ ಅಲ್ಪೇಶ್ ಅವರು ಈಗ ಬಿಜೆಪಿಗೆ ಕಾಂಗ್ರೆಸ್ ನ ವೋಟ್ ಬ್ಯಾಂಕ್ ಒಡೆಯಲು ಟ್ರಂಪ್ ಕಾರ್ಡ್ ಆಗಿ ಕೆಲಸ ಮಾಡಬಹುದು ಎನ್ನಲಾಗುತ್ತಿದೆ.
ಅಲ್ಪೇಶ್ ಠಾಕೂರ್ ಅವರು ಒಬಿಸಿ ಸಮುದಾಯದ ಹಕ್ಕುಗಳನ್ನು ರಕ್ಷಿಸಲು ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ಹೇಳಿದ್ದಾರೆ. ಒಬಿಸಿಗಳಿಗೆ ಮೀಸಲಾದ ನೀತಿಗಳನ್ನು ಜಾರಿಗೆ ತರಲು ನಾನು ಪ್ರಯತ್ನಿಸುತ್ತೇನೆ, ನಾನು ಗುಜರಾತಿಗಳ ಕಲ್ಯಾಣದ ಬಗ್ಗೆ ಆಸಕ್ತಿ ಹೊಂದಿದ್ದೇನೆ. ಒಬಿಸಿ ಸಮುದಾಯದ ಹಕ್ಕುಗಳನ್ನು ನೋಡಿಕೊಳ್ಳುವುದು ನನ್ನ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ತೀವ್ರ ಹೋರಾಟ
ಗಮನಾರ್ಹವಾಗಿ, ಭಾರತೀಯ ಜನತಾ ಪಕ್ಷ (ಬಿಜೆಪಿ) ಗುಜರಾತ್ ವಿಧಾನಸಭೆ ಚುನಾವಣೆ 2022 ರ ಅಭ್ಯರ್ಥಿಗಳ ಪಟ್ಟಿಯನ್ನು ಬುಧವಾರವೂ ಬಿಡುಗಡೆ ಮಾಡಿದೆ. ಐದನೇ ಪಟ್ಟಿಯಲ್ಲಿ, ಗುಜರಾತ್ ಎರಡನೇ ಹಂತದ ಚುನಾವಣೆಗೆ ಪಕ್ಷವು ಮೂರು ಅಭ್ಯರ್ಥಿಗಳನ್ನು ಘೋಷಿಸಿದೆ. ಬಿಜೆಪಿ ಖೇರಾಲು ಕ್ಷೇತ್ರದಿಂದ ಸರ್ದಾರ್ ಸಿಂಗ್ ಚೌಧರಿ ಮತ್ತು ಮಾನ್ಸಾದಿಂದ ಜಯತಿಭಾಯಿ ಪಟೇಲ್ ಅವರನ್ನು ಕಣಕ್ಕಿಳಿಸಿದೆ. ಮಹೇಂದ್ರಭಾಯಿ ಭಬೋರ್ ಅವರಿಗೆ ಗಾರ್ಬಡಾ (ಎಸ್‌ಸಿ)ಯಿಂದ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್ ಈ ಸ್ಥಾನಗಳಲ್ಲಿ ಗೆಲ್ಲಲು ತೀವ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಲ್ಪೇಶ್ ಅವರು ಹೇಳಿದರು.
-
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ












Click it and Unblock the Notifications