ಮಲ್ಯ, ನೀರವ್ ಮೋದಿ ಪರಾರಿಗೆ ಅಲೋಕ್ ವರ್ಮಾ ನೆರವು?

ನವದೆಹಲಿ, ಜನವರಿ 13: ಬಹುಕೋಟಿ ಹಗರಣಗಳ ರುವಾರಿಗಳಾದ ನೀರವ್ ಮೋದಿ ಹಾಗೂ ವಿಜಯ್ ಮಲ್ಯ ಅವರ ಪರಾರಿಗೆ ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಅವರು ಪರೋಕ್ಷವಾಗಿ ನೆರವಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಸಿ.ಶಿವಶಂಕರನ್​ಗೆ ಸಿಬಿಐ ಮಾಜಿ ನಿರ್ದೇಶಕ ಅಲೋಕ್ ವರ್ಮಾ ಪರೋಕ್ಷವಾಗಿ ನೆರವಾಗಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಪಿಎನ್​ಬಿ ಹಗರಣದ ತನಿಖೆಗೆ ಸಂಬಂಧಿಸಿದ ಸೂಕ್ಷ್ಮ ದಾಖಲೆಗಳಿಂದ ಇಮೇಲ್ ಸೋರಿಕೆಯಲ್ಲೂ ಅಲೋಕ್ ವರ್ಮಾ ಅವರ ಪಾತ್ರವಿದೆ ಎಂದು ದೂರು ಕೇಂದ್ರೀಯ ವಿಚಕ್ಷಣ ದಳ (ಸಿವಿಸಿ)ದಲ್ಲಿ ದಾಖಲಾಗಿದೆ.

ಐಡಿಬಿಐ ಬ್ಯಾಂಕ್​ಗೆ 600 ಕೋಟಿ ರು ವಂಚನೆ ಮಾಡಿರುವ ಏರ್ ಸೆಲ್ ಸ್ಥಾಪಕ ಸಿ ಶಿವಶಂಕರನ್ ನಾಪತ್ತೆಯಾದ ಬಳಿಕ ಹೊರಡಿಸಲಾದ ಲುಕ್ ಔಟ್ ನೋಟಿಸ್ ಪ್ರಭಾವ ತಗ್ಗಿಸುವುದರಲ್ಲೂ ಅಲೋಕ್ ವರ್ಮಾ ಅವರು ನೆರವಾಗಿದ್ದರು ಎಂದು ಹೇಳಲಾಗಿದೆ.

Alok Verma helped Nirav Modi case cover-up, Mallya flight?

ಇದೇ ರೀತಿ ಉದ್ಯಮಿ ವಿಜಯ್ ಮಲ್ಯ ಲುಕ್​ಔಟ್ ನೋಟಿಸ್ ಪ್ರಭಾವ ಸಡಿಲಗೊಳಿಸಿದ ಸಿಬಿಐ ಜಂಟಿ ನಿರ್ದೇಶಕ ಎ.ಕೆ. ಶರ್ಮ ಕೂಡ ಅಲೋಕ್ ವರ್ಮಾ ಅವರ ಆಪ್ತವಲಯದವರು ಎಂದು ತಿಳಿದು ಬಂದಿದೆ. ಮಲ್ಯಗೆ ಸಂಬಂಧಿತ ಪ್ರಕರಣದಲ್ಲಿಯೂ ಅಲೋಕ್ ಹಸ್ತಕ್ಷೇಪದ ಬಗ್ಗೆ ತನಿಖೆ ನಡೆಯುವ ಸಾಧ್ಯತೆಯಿದೆ. ಈ ಆರೋಪಗಳಿಗೆ ಸಂಬಂಧಿಸಿ ಸಿಬಿಐನಿಂದ ಸಿವಿಸಿ ಅಧಿಕಾರಿಗಳು ವಿವರಣೆ ಕೇಳಿದ್ದಾರೆ. ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ವಿರುದ್ಧದ ಏರ್​ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಶಿವಶಂಕರನ್ ದೂರುದಾರರಾಗಿದ್ದಾರೆ. ಅವರು ಪರಾರಿಯಾಗಿರುವುದು ಚಿದಂಬರಂಗೆ ಸಹಕಾರಿಯಾಗಲಿದೆ ಎಂಬ ಆರೋಪವಿದೆ.

ಇದಲ್ಲದೆ, ಸುಧಾಂಶು ಖರೆ ಅವರನ್ನು ಸಿಬಿಐನ ಲಕ್ನೋ ಬ್ರ್ಯಾಂಚಿಗೆ ವರ್ಗಾವಣೆ ಮಾಡುವುದರಲ್ಲಿ ಹಾಗೂ ಉತ್ತರಪ್ರದೇಶದ ಎಟಿಎಸ್ ಹೆಚ್ಚುವರಿ ಎಸ್ ಪಿ ರಾಜೇಶ್ ಸಹ್ನಿ ನಿಗೂಢ ಸಾವು ಪ್ರಕರಣ ಸೇರಿದಂತೆ ಐದಾರು ಕೇಸುಗಳು ಈಗ ಅಲೋಕ್ ವರ್ಮಾ ಅವರ ಮೇಲೆ ಹೊರಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+