ಮತ್ತೆ ಒಂದಾದ ಅಲ್ಲು ಅರ್ಜುನ್-ತ್ರಿವಿಕ್ರಮ್, ಪ್ಯಾನ್ ಇಂಡಿಯಾ ಸಿನಿಮಾ!

ತೆಲಗು ಸಿನಿಮಾ ಸೂಪರ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಸ್ಟಾರ್ ಡೈರೆಕ್ಟರ್ ತ್ರಿವಿಕ್ರಮ್ ಶ್ರೀನಿವಾಸ್ ಮತ್ತೆ ಒಂದಾಗಿದ್ದಾರೆ. ಪುಷ್ಪ-2 ಚಿತ್ರದಲ್ಲಿ ಬ್ಯುಸಿಯಾಗಿರುವ ಅಲ್ಲು ಅರ್ಜುನ್ ತ್ರಿವಿಕ್ರಮ್ ಶ್ರೀನಿವಾಸ್ ಜೊತೆ ಮುಂದಿನ ಸಿನಿಮಾ ಮಾಡಲಿದ್ದು, ಶೀಘ್ರವೇ ಚಿತ್ರದ ಹೆಸರು ಸೇರಿದಂತೆ ಉಳಿದ ಮಾಹಿತಿ ಘೋಷಣೆಯಾಗಲಿದೆ.

ಹಲವು ದಿನಗಳಿಂದ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಮತ್ತೆ ಒಂದಾಗಲಿದ್ದಾರೆ ಎಂಬ ಸುದ್ದಿಗಳು ಹಬ್ಬಿದ್ದವು. ಸೋಮವಾರ ಈ ಕುರಿತು ಘೋಷಣೆಯಾಗಿದೆ. ಸ್ಟಾರ್ ನಟ ಮತ್ತು ಸ್ಟಾರ್ ಡೈರೆಕ್ಟರ್ 4ನೇ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ.

Allu Arjun And Trivikram Srinivas Join Hands Film Announcement Soon

ಈಗಾಗಲೇ 'ಪುಷ್ಪ' ಸಿನಿಮಾ ಯಶಸ್ಸಿನ ಅಲೆಯಲ್ಲಿರುವ ಅಲ್ಲು ಅರ್ಜುನ್ 'ಪುಷ್ಪ-2' ಬಳಿಕ ತ್ರಿವಿಕ್ರಮ್ ಶ್ರೀನಿವಾಸ್ & ತಂಡದ ಜೊತೆ ಮುಂದಿನ ಚಿತ್ರ ಮಾಡಲಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ, ಶೀಘ್ರವೇ ಚಿತ್ರದ ಟೈಟಲ್, ಉಳಿದ ವಿವರಗಳು ಘೋಷಣೆಯಾಗುವ ನಿರೀಕ್ಷೆ ಇದೆ.

4ನೇ ಸಿನಿಮಾದಲ್ಲಿ ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಈಗಾಗಲೇ ಮೂರು ಬ್ಲಾಕ್ ಬಾಸ್ಟರ್ ಹಿಟ್‌ ಸಿನಿಮಾಗಳನ್ನು ಕೊಟ್ಟಿರುವ ಈ ಜೋಡಿಯ ಮುಂದಿನ ಚಿತ್ರ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಅಭಿಮಾನಿಗಳು ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

4ನೇ ಚಿತ್ರಕ್ಕೆ ಒಂದಾದ ಜೋಡಿ; ಜುಲಾಯಿ, ಸನ್ ಆಫ್ ಸತ್ಯಮೂರ್ತಿ, ಅಲ ವೈಕುಂಠಪುರಮುಲೋ ಚಿತ್ರಗಳನ್ನು ನೀಡಿದ ಸ್ಟಾರ್ ಜೋಡಿ 4ನೇ ಚಿತ್ರಕ್ಕಾಗಿ ಮತ್ತೆ ಕೈ ಜೋಡಿಸಿದೆ. ಗುರುಪೂರ್ಣಿಮಾ ದಿನವಾದ ಸೋಮವಾರ ಹೊಸ ಚಿತ್ರವನ್ನು ಘೋಷಣೆ ಮಾಡಿ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಉಡುಗೊರೆ ನೀಡಲಾಗಿದೆ.

ಸದ್ಯ ಅಲ್ಲು ಅರ್ಜುನ್ ಪುಷ್ಪ-2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಿಡುಗೆಡೆಯಾಗಿರುವ ಟೀಸರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸುಕುಮಾರನ್ ನಿರ್ದೇಶನದ ಚಿತ್ರದಲ್ಲಿ ಫಹಾದ್ ಫಾಸಿಲ್, ಸುನೀಲ್ ಮುಂತಾದವರು ನಟಿಸುತ್ತಿದ್ದು, ದೇವಿಶ್ರೀ ಪ್ರಸಾದ್ ಸಂಗೀತ ನೀರ್ದೇಶಕರು.

ಅಲ್ಲು ಅರ್ಜುನ್ ಮತ್ತು ತ್ರಿವಿಕ್ರಮ್ ಶ್ರೀನಿವಾಸ್ 4ನೇ ಚಿತ್ರಕ್ಕೆ ಒಂದಾಗಿರುವ ಕುರಿತು ಹಾರಿಕಾ ಮತ್ತು ಹಾಸನ್ ಕ್ರಿಯೇಷನ್ಸ್ ಸೋಮವಾರ ಟ್ವೀಟ್ ಮಾಡಿದೆ. ಐಕಾನ್ ಸ್ಟಾರ್ ಅಲ್ಲು ಅರ್ಜುನ್‌ & ನಮ್ಮ ಡಾರ್ಲಿಂಗ್ ಡೈರೆಕ್ಟರ್ ತ್ರಿವಿಕ್ರಮ್ ನಮ್ಮ ಪ್ರೊಡಕ್ಷನ್ ನಂಬರ್ -8 ಗೆ ಮತ್ತೆ ಒಂದಾಗಿದ್ದಾರೆ ಎಂದು ಹೇಳಿದೆ. ಹೆಚ್ಚಿನ ವಿವರಗಳು ಶೀಘ್ರವೇ ಲಭ್ಯ ಎಂದು ಹೇಳಿದೆ.

ಕೇವಲ ಎರಡು ಗಂಟೆಯಲ್ಲಿಯೇ ಈ ಟ್ವೀಟ್ ವೈರಲ್ ಆಗಿದೆ. 3 ಸಾವಿರಕ್ಕೂ ಅಧಿಕ ಜನರು ರಿ-ಟ್ವೀಟ್ ಮಾಡಿದ್ದಾರೆ. 8 ಸಾವಿರ ಜನರು ಲೈಕ್ ಮಾಡಿದ್ದಾರೆ. 222.2ಕೆ ಜನರಿಗೆ ಪೋಸ್ಟ್‌ ರೀಚ್ ಆಗಿದೆ. ಚಿತ್ರದ ಟೈಟಲ್ ಏನಿರಬಹುದು? ಎಂದು ಚರ್ಚೆಗಳು ಶುರುವಾಗಿವೆ.

ಅಲ್ಲು ಅರ್ಜುನ್ ಮತ್ತು ಕನ್ನಡತಿ ಪೂಜಾ ಹೆಗ್ಡೆ ತೆಲಗು ಚಿತ್ರರಂಗದ ಜನಪ್ರಿಯ ತಾರಾ ಜೋಡಿ. ಅಲ ವೈಕುಂಠಪುರಮುಲೋ ಬಳಿಕ ಮತ್ತೆ ಪೂಜಾ ಹೆಗ್ಡೆ ಅಲ್ಲು ಅರ್ಜುನ್ ಜೊತೆಯಾಗಲಿದ್ದಾರೆಯೇ? ಎಂದು ಚರ್ಚೆಗಳು ನಡೆಯುತ್ತಿವೆ.

ತ್ರಿವಿಕ್ರಮ್ ಶ್ರೀನಿವಾಸ್ ತಮ್ಮ ತಂಡದ ಜೊತೆ ಸಿನಿಮಾದ ಕೆಲಸಗಳನ್ನು ಆರಂಭಿಸಿದ್ದಾರೆ. ಈ ವರ್ಷದ ಅಂತ್ಯಕ್ಕೆ ಸಿನಿಮಾ ಆರಂಭವಾಗುವ ನಿರೀಕ್ಷೆ ಇದೆ. ಮುಂದಿನ ವರ್ಷ ಚಿತ್ರ ತೆರೆ ಮೇಲೆ ಬರುವ ನಿರೀಕ್ಷೆ ಇದೆ.

12 ವರ್ಷಗಳ ಬಳಿಕ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಮಹೇಶ್‌ ಬಾಬು ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ 2024ರಲ್ಲಿ ತೆರಗೆ ಬರಲಿದೆ. ಬಳಿಕ ಅಲ್ಲು ಅರ್ಜುನ್ ಜೊತೆಗಿನ ಸಿನಿಮಾ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+