ಇದು ಪಕ್ಕಾ ಬಾಂಬ್ ಬ್ಲಾಸ್ಟ್? ಸ್ಫೋಟದ ಜಾಗದಲ್ಲಿ ಬ್ಯಾಟರಿ ಸಿಕ್ಕಿದೆ ಎಂದ ‘ರಾಮೇಶ್ವರಂ ಕೆಫೆ’ ಮಾಲೀಕರು!
ಕನ್ನಡಿಗರ ರಾಜಧಾನಿ ಬೆಂಗಳೂರು ಈಗ 'ರಾಮೇಶ್ವರಂ ಕೆಫೆ' ಸ್ಫೋಟದ ನಂತರ ಬೆಚ್ಚಿದ್ದು ಜನರು ನಲುಗಿ ಹೋಗಿದ್ದಾರೆ. ಈ ಸ್ಫೋಟಕ್ಕೆ ಕಾರಣ ಏನು ಅಂತಾ ಪ್ರಶ್ನೆ ಹುಟ್ಟಿರುವಾಗ, 'ರಾಮೇಶ್ವರಂ ಕೆಫೆ'ಯ ಎಂಡಿ ಹಾಗೂ ಸಹ ಸಂಸ್ಥಾಪಕಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಪ್ರಕಾರ 'ರಾಮೇಶ್ವರಂ ಕೆಫೆ'ಯಲ್ಲಿ ಸಂಭವಿಸಿದ್ದು ಬಾಂಬ್ ಸ್ಫೋಟವಾ..? ಎಂಬ ಅನುಮಾನವನ್ನ ಡಬಲ್ ಮಾಡಿದೆ. ಹಾಗಾದರೆ ಇದೀಗ 'ನಿಗೂಢ ಬ್ಯಾಗ್' ಕುರಿತು ಮಾಲೀಕರು ಹೇಳಿದ್ದೇನು?
'ರಾಮೇಶ್ವರಂ ಕೆಫೆ' ಅಂದರೆ ಸಿಕ್ಕಾಪಟ್ಟೆ ಫೇಮಸ್. ಈ ಕೆಫೆಗೆ ಲಕ್ಷಾಂತರ ಗ್ರಾಹಕರು ಇದ್ದಾರೆ. ಬೆಂಗಳೂರಿನ ಟೆಕ್ಕಿಗಳು 'ರಾಮೇಶ್ವರಂ ಕೆಫೆ' ಅಂದರೆ, ಸಿಕ್ಕಾಪಟ್ಟೆ ಇಷ್ಟಪಡ್ತಾರೆ. ಹೀಗಿದ್ದಾಗ ಇಂದಿರಾ ನಗರ 'ರಾಮೇಶ್ವರಂ ಕೆಫೆ'ಯಲ್ಲಿ ಕೂಡ ಇಂದು ಸಿಕ್ಕಾಪಟ್ಟೆ ಕ್ರೌಡ್ ಇತ್ತು. ಈ ವೇಳೆ, ಆಗಿದ್ದು ಮಾತ್ರ ಘೋರ ದುರಂತ. ಹೀಗೆ ನಿಗೂಢ ಸ್ಫೋಟದ ಬಗ್ಗೆ ಇದೀಗ ಕೆಫೆ ಮಾಲೀಕರು ಹೇಳಿದ್ದು ಏನು ಗೊತ್ತೆ? ಅದರ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

2-3 ಬಾರಿ ಹಿಂಗೆ ಆಗಿತ್ತು!
ಗ್ರಾಹಕರು ಊಟ & ತಿಂಡಿ ಮಾಡಲು ಈ ಹೋಟೆಲ್ ಒಳಗೆ ಇದ್ದ ಸಮಯದಲ್ಲೇ ಡೆಡ್ಲಿ ಬ್ಲಾಸ್ಟ್ ಸಂಭವಿಸಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಮಾತನಾಡಿರುವ 'ರಾಮೇಶ್ವರಂ ಕೆಫೆ'ಯ ಎಂಡಿ, ನಿಗೂಢ ಬ್ಯಾಗ್ ಇಟ್ಟು ಹೋದ ನಂತರವೇ ಈ ರೀತಿಯಾಗಿ ಆಗಿದೆ ಎಂದಿದ್ದಾರೆ. ಹೀಗಾಗಿ ಇದೀಗ ಸಂಚಲನ ಸೃಷ್ಟಿ ಆಗಿದೆ. ಅದ್ರಲ್ಲೂ ಇದು ಬಾಂಬ್ ಸ್ಫೋಟವೇ? ಎಂಬ ಪ್ರಶ್ನೆ ಎಲೆಲ್ಲೂ ಹಬ್ಬಿದೆ, ಹಾಗೇ ಈ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಆದರೆ ಇದಕ್ಕೆ ಇನ್ನು ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ.
ಸ್ಫೋಟಕ್ಕೆ ಬಾಂಬ್ ಬಳಕೆ ಮಾಡಿದ್ರಾ?
ಸುದ್ದಿ ತಿಳಿದ ತಕ್ಷಣ ಎಚ್‌ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿಯ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೊದಲು ಬಾಯಿಲರ್ ಸ್ಪೋಟದಿಂದ ಅವಘಢ ಸಂಭವಿಸಿರಬಹುದು ಅಂತಾ ಹೇಳಲಾಗಿತ್ತು, ಆದರೆ ಈಗ ಬೇರೆಯದ್ದೇ ವಿಚಾರ ಹೊರಬರುತ್ತಿದೆ. 'ನಿಗೂಢ ಬ್ಯಾಗ್' ಒಳಗೆ ಇದ್ದ ವಸ್ತು ಈ ಭೀಕರ ಸ್ಫೋಟಕ್ಕೆ ಕಾರಣ ಎಂಬ ಆರೋಪ ಮಾಡಲಾಗುತ್ತಿದೆ. ಹೀಗಾಗಿ, ಈಗ ಸ್ಥಳ ಪರಿಶೀಲನೆ ಮಾಡಲು ಎಫ್‌ಎಸ್‌ಎಲ್ (FSL) ಟೀಂ ಸ್ಫೋಟ ಸಂಭವಿಸಿದ ರಾಮೇಶ್ವರಂ ಕೆಫೆಗೆ ಬಂದಿದೆ.

'ನಿಗೂಢ ಬ್ಯಾಗ್' ಈ ಘಟನೆಗೆ ಕಾರಣ ಎಂಬ ಆರೋಪ ಮಾಡಲಾಗುತ್ತಿದ್ದು. ಆದರೆ ಆ ಬ್ಯಾಗ್ ಯಾರದ್ದು? ಅದನ್ನ ಅಲ್ಲಿ ಯಾರು ಇಟ್ಟರು? ಎಂಬುದಕ್ಕೆ ಸ್ಪಷ್ಟನೆ ಸಿಗುತ್ತಿಲ್ಲ. ಮತ್ತೊಂದ್ಕಡೆ ಘಟನೆಯಲ್ಲಿ 7 ಜನ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೇ ಬ್ಯಾಗ್‌ನಲ್ಲಿ ಸುಧಾರಿತ ಸ್ಫೋಟಕ ಇಡಲಾಗಿತ್ತು ಎನ್ನಲಾಗಿದೆ, ಆದರೆ ಈ ಕುರಿತಾಗಿ ಇನ್ನೂ ತನಿಖಾಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಿಲ್ಲ.












Click it and Unblock the Notifications