ಅಜಿತ್ ದೋವಲ್ ಮಗನ ಸಂಸ್ಥೆಯ ಮೇಲೆ ಹಿತಾಸಕ್ತಿ ಸಂಘರ್ಷದ ಆರೋಪ

Posted By:
Subscribe to Oneindia Kannada

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಮಗ ಶೌರ್ಯ ನಡೆಸುವ ಸಂಸ್ಥೆಯಲ್ಲಿ ಕೇಂದ್ರ ಸಚಿವರು ಸಹ ಇದ್ದು, ಇದು 'ಹಿತಾಸಕ್ತಿಯ ಸಂಘರ್ಷ' ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ದಿ ವೈರ್ ವಿರುದ್ಧ ಅಮಿತ್ ಶಾ ಪುತ್ರನಿಂದ ಮಾನನಷ್ಟ ಮೊಕದ್ದಮೆ

ಶಾ-ಜಾದಾ (ಅಮಿತ್ ಶಾ ಮಗ ಜಯ್ ಶಾ) ಅವರ ಅಪಾರ ಯಶಸ್ಸಿನ ನಂತರ ಬಿಜೆಪಿಯ ಮತ್ತೊಂದು ಕೊಡುಗೆ- ಅಜಿತ್ ಶೌರ್ಯ ಕಥೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ವರದಿಯೊಂದರ ಪ್ರಕಾರ, ದೋವಲ್ ಅವರ ಮಗ ಹಿತಾಸಕ್ತಿ ಸಂಘರ್ಷದ ಆರೋಪದಲ್ಲಿ ಸಿಲುಕಿದ್ದಾರೆ. ಚಿಂತಕರ ಚಾವಡಿ ಇಂಡಿಯಾ ಫೌಂಡೇಷನ್ ಗೆ ಶೌರ್ಯ ದೋವಲ್ ನಡೆಸುತ್ತಿದ್ದು, ಆರ್ಥಿಕ ಸಂಸ್ಥೆಯೊಂದರ ಸಹಭಾಗಿತ್ವ ಹೊಂದಿದೆ. ಇಂಡಿಯಾ ಫೌಂಡೇಷನ್ ನಲ್ಲಿ ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಸುರೇಶ್ ಪ್ರಭು, ಜಯಂತ್ ಸಿನ್ಹಾ ಹಾಗೂ ಎಂ.ಜೆ.ಅಕ್ಬರ್ ನಿರ್ದೇಶಕರಾಗಿದ್ದಾರೆ.

Shaurya Doval

ಈ ಫೌಂಡೇಷನ್ ಗೆ ವಿದೇಶಿ ಹಾಗೂ ಭಾರತದ ಕಾರ್ಪೋರೇಟ್ ಗಳ ಆರ್ಥಿಕ ಬೆಂಬಲವಿದೆ. ಮತ್ತು ಈ ಕಾರ್ಪೋರೇಟ್ ಗಳು ಸರಕಾರದೊಂದಿಗೆ ಕೆಲವು ವ್ಯಾಪಾರ- ವ್ಯವಹಾರದ ಸಂಬಂಧ ಹೊಂದಿವೆ ಎಂದು ಆರೋಪಿಸಲಾಗಿದೆ.

ಇಂಡಿಯಾ ಫೌಂಡೇಷನ್ ನಲ್ಲಿ ನಿರ್ದೇಶಕರಾಗಿರುವ ನಾಲ್ವರು ಕೇಂದ್ರ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಹಾಗೂ ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ಒತ್ತಾಯಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In an exclusive article, the Wire has alleged that a think-tank run by National Security Advisor (NSA) Ajit Doval's son Shaurya Doval reeks of conflict of interest.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ