ಯೋಧ ಹನುಮಂತಪ್ಪರ ಉಳಿವಿಗೆ ನಾಡಿನಾದ್ಯಂತ ಪೂಜೆ, ಹೋಮ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ,10: ನಾವು ಚಳಿಗಾಲ ಬರುವುದಿರಲಿ, ಬರುವ ಮೊದಲೇ ನಾಲ್ಕು ಹೊದಿಗೆ, ತೊಳೆದು ಬೀರುವಿನಲ್ಲಿ ಇಟ್ಟಿದ್ದ ಶ್ವೆಟರ್, ಮಫ್ಲರ್ ಹೀಗೆ ಚಳಿಗಾಲಕ್ಕೆ ಬೇಕಾದವುಗಳೆಲ್ಲಾವನ್ನು ಲಿಸ್ಟ್ ಮಾಡಿ ನೆನಪಿನಿಂದ ಎತ್ತಿಟ್ಟುಕೊಳ್ತೇವೆ. ನಾವೆಲ್ಲಾ ಸಾಮಾನ್ಯ ಚಳಿಗೆ ತತ್ತರಿಸಿ ಹೋಗ್ತೇವೆ. ಚಳಿಯೆಂದರೆ ಅಷ್ಟೊಂದು ಭಯ.

ಇನ್ನೂ ಹಿಮಪ್ರದೇಶ ಎಂದರೆ ದೇವರೇ ಅಲ್ಲಿಗೆ ಹೋಗುವುದಿರಲಿ, ಕುಳಿತಲ್ಲೇ ಅದನ್ನು ನೆನಸಿಕೊಂಡರೆ ಅರೆಜೀವ ಆಗಿರ್ತೇವೆ. ಆದರೆ ಹುಬ್ಬಳ್ಳಿಯ ಕುಂದಗೋಳ ತಾಲೂಕಿನ ಬೆಟದೂರಿನ ಹನುಮಂತಪ್ಪ ಕೊಪ್ಪದ....

ಹನುಮಂತಪ್ಪ ಸಿಯಾಚಿನ್ ನ 35 ಅಡಿ ಆಳದ ಹಿಮದಲ್ಲಿ ಸಿಲುಕಿ ಬದುಕುಳಿದಿರುವುದು ಇಡೀ ನಾಡಿಗೆ ಒಂದೆಡೆ ಸಂತೋಷ, ಮತ್ತೊಂದೆಡೆ ಪರಮಾಶ್ಚರ್ಯ. ಆದರೆ ಈ ಯೋಧ ಇದೀಗ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಭಗವಂತನಿಗೆ ಪ್ರಿಯವಾಗುವುದೋ ಅಥವಾ ನಾಡಿನ ಹೆಮ್ಮೆ ಪುತ್ರನಾಗಿರುವುದೋ ಎಂಬ ಅರಿಯದ ಸ್ಥಿತಿಯಲ್ಲಿದ್ದಾರೆ.['ಅಮರ' ಯೋಧ ಹನುಮಂತಪ್ಪನ ಅಂತಿಮ ಯಾತ್ರೆಯ ಚಿತ್ರಗಳು]

ಆ ಚಳಿಯ ಚಕ್ರವ್ಯೂಹದಲ್ಲಿ ಸಿಲುಕಿ ಬದುಕುಳಿದ ಕರ್ನಾಟಕದ ವೀರಯೋಧನ ಕಿಡ್ನಿ, ಮೂತ್ರಪಿಂಡವೂ ನಿಷ್ಕ್ರೀಯಗೊಂಡಿದೆ. ಇವರಿಗೆ ವೈದ್ಯರ ಔಷಧಿಗಿಂತ ಜನತೆಯ ಪ್ರಾರ್ಥನೆ ಬೇಕಾಗಿದೆ. ಈತ ಚಿರಂಜೀವಿಯಾಗಿರಲಿ ಎಂದು ಹರಸುವ ಮನಸ್ಸುಗಳು ಬೇಕಾಗಿವೆ.[ಮತ್ತಷ್ಟು ವಿಷಮಿಸಿದ ಯೋಧ ಹನುಮಂತಪ್ಪನ ಆರೋಗ್ಯ]

ಇಡೀ ನಾಡಿನ ಜನತೆ ಸಿಕ್ಕ ಸಿಕ್ಕ ದೇವರಿಗೆಲ್ಲಾ ಯೋಧನ ಹೆಸರಿನಲ್ಲಿ ಹೋಮ ಹವನಗಳನ್ನು ನಡೆಸುತ್ತಿದ್ದಾರೆ. ಪೂಜೆ, ಮಜ್ಜನಗಳನ್ನು ದೇವರಿಗೆ ಸಲ್ಲಿಸುತ್ತಿದ್ದಾರೆ. ಹನುಮಂತಪ್ಪ ಕೊಪ್ಪದ ಚಿರಂಜೀವಿಯಾಗಿರಲಿ ಎಂದು ಹರಸುತ್ತಾ ಅವರಿಗಾಗಿ ಎಲ್ಲೆಲ್ಲಿ ಪ್ರಾರ್ಥನೆಗಳು ಸಲ್ಲುತ್ತಿವೆ ನೋಡಿ ಈ ಕೆಳಗಿನ ಸ್ಲೈಡ್ ಗಳಲ್ಲಿ.

ಹರಿಯಾಣದ ಫರಿದಾಬಾದ್ ನಲ್ಲಿ ವಿದ್ಯಾರ್ಥಿಗಳಿಂದ ಮೌನಾಚರಣೆ

ಹರಿಯಾಣದ ಫರಿದಾಬಾದ್ ನಲ್ಲಿ ವಿದ್ಯಾರ್ಥಿಗಳಿಂದ ಮೌನಾಚರಣೆ

ಹರಿಯಾಣದ ಫರಿದಾಬಾದ್ ನಲ್ಲಿ ಖಜಾನಿ ಮಹಿಳಾ ವೊಕೆಶನಲ್ ಸಂಸ್ಥೆಯ ವಿದ್ಯಾರ್ಥಿನಿಯರು ಪವಾಡ ಸದೃಶ ರೀತಿಯಲ್ಲಿ ಉಳಿದ ಹನುಮಂತಪ್ಪ ಕೊಪ್ಪದ ಬದುಕಲಿ. ಇವರ ಸೇವೆ ನಮ್ಮ ದೇಶಕ್ಕೆ ಇನ್ನಷ್ಟು ಸಲ್ಲಲಿ ಎಂದು ಮೌನಾಚರಣೆ ಮಾಡಿದರು.

ಮುಂಬೈನಲ್ಲಿ ಪ್ರಾರ್ಥನೆ

ಮುಂಬೈನಲ್ಲಿ ಪ್ರಾರ್ಥನೆ

ಮುಂಬೈನಲ್ಲಿ ಡಬ್ಬವಾಲಾಗಳು 'ಈಶ್ವರನೇ ಹನುಮಂತಪ್ಪನಿಗೆ ದೀರ್ಘ ಆಯುಷ್ಯ ದಯಪಾಲಿಸು' ಎಂದು ಪ್ಲೆಕಾರ್ಡ್ ಹಿಡಿದು ಅವರ ಉಳಿವಿಗಾಗಿ ದೇವರಲ್ಲಿ ಮೊರೆಇಟ್ಟರು.

ಭೋಪಾಲ್ ನಲ್ಲಿ ಹೋಮ ಹವನ

ಭೋಪಾಲ್ ನಲ್ಲಿ ಹೋಮ ಹವನ

ತೀವ್ರ ನಿಗಾ ಘಟಕದಲ್ಲಿ ಇರಿಸಿರುವ ಹನುಮಂತಪ್ಪ ಅವರಿಗಾಗಿ ಗಡಿ, ನಾಡು, ಎಲ್ಲೆಯನ್ನು ಮೀರಿ ಜನರು ಪ್ರಾರ್ಥನೆ ಮಾಡುತ್ತಿದ್ದು, ಯುವ ಕಾಂಗ್ರೆಸ್ ಕಾರ್ಯಕರ್ತರು ವೀರಯೋಧರ ಹೆಸರಿನಲ್ಲಿ ಹೋಮ ಹವನ ಮಾಡಿದರು. ಮೃತ್ಯುಪಾಶದಿಂದ ದೂರವಾಗಲಿ ಎಂದು ದೇವರಲ್ಲಿ ಬೇಡಿದರು.

ವೀರಯೋಧನ ಉಳಿವಿಗಾಗಿ ಪ್ರಾರ್ಥಿಸದ ಮನಸ್ಸುಗಳಿಲ್ಲ

ವೀರಯೋಧನ ಉಳಿವಿಗಾಗಿ ಪ್ರಾರ್ಥಿಸದ ಮನಸ್ಸುಗಳಿಲ್ಲ

ನಮ್ಮ ನಾಡಿನ ಜನತೆಯಲ್ಲಿ ಹನುಮಂತಪ್ಪ ಬದುಕುಳಿಯಲಿ ಎಂಬ ಭಾವ ದಿನೇ ದಿನೇ ಗಾಢವಾಗುತ್ತಿದೆ. ಆತನ ಕುಟುಂಬದವರ ಜೊತೆಯಲ್ಲಿ ಇಡೀ ನಾಡಿನ ಪ್ರಾರ್ಥನೆಯ ಶಕ್ತಿ ಅವರನ್ನು ಜೀವಂತವಾಗಿಸುತ್ತದೆ ಎಂಬ ಭರವಸೆ ಪ್ರತಿಯೊಬ್ಬರಲ್ಲಿಯೂ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
All over India pray for speedy recovery of Lance Naik Hanumanthappa Koppad like Allahabad, Bhopal, Faridabad, Mumbai.
Please Wait while comments are loading...