ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಅಧಿಕೃತ ಟ್ವಿಟರ್ ಅಕೌಂಟ್ ಹ್ಯಾಕ್!
ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿರುವ ವರದಿಗಳ ಬಗ್ಗೆ ಪಕ್ಷ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.
ಕೋಲ್ಕತ್ತಾ, ಫೆಬ್ರವರಿ. 28: ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಹ್ಯಾಕ್ ಆಗಿರುವಂತೆ ಕಾಣಿಸುತ್ತಿದ್ದು, ಅದರ ಹೆಸರನ್ನು 'ಯುಗ ಲ್ಯಾಬ್ಸ್' ಎಂದು ಬದಲಾಯಿಸಲಾಗಿದೆ. ಪುಟದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರು ಜನರಿಗಾಗಿ ಮಾಡಿರುವ ಕೆಲಸಗಳ ಕುರಿತು ವಿಡಿಯೋಗಳನ್ನು ಹಂಚಿಕೊಳ್ಳಲಾಗಿದೆ.
All India Trinamool Congress' Twitter account appears to be hacked. pic.twitter.com/wyE417xG0c
— ANI (@ANI) February 28, 2023
"ಆಹಾರವು ಏಕತೆ, ಸಮುದಾಯ ಮತ್ತು ಗುರುತಿನ ಸಂಕೇತವಾಗಿದೆ. 'ಅಂಚಲೆ ಏಕ್ ದಿನ್' ಕಾರ್ಯಕ್ರಮದ ಅಡಿಯಲ್ಲಿ, ಏಕತೆಯನ್ನು ಬೆಳೆಸುವ ಸಲುವಾಗಿ ಮತ್ತು ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ, ನಮ್ಮ ನಾಯಕರು ಸ್ಥಳೀಯರು ಮತ್ತು ಸಮುದಾಯದ ನಾಯಕರೊಂದಿಗೆ ಊಟವನ್ನು ಹಂಚಿಕೊಂಡರು" ಎಂದು ಯುಗ ಲ್ಯಾಬ್ ಟ್ವೀಟ್ ಮಾಡಿದೆ.

"ಗೌರವಾನ್ವಿತ ಮುಖ್ಯಮಂತ್ರಿ ಶ್ರೀಮತಿ ಮಮತಾ ಬ್ಯಾನರ್ಜಿ ಅವರು ಇಂದು ಪಶ್ಚಿಮ ಬಂಗಾಳ್ ಹೌರಾದ ಮಂದಿರ್ತಾಲಾದಲ್ಲಿ ಭದ್ರತಾ ನಿರ್ದೇಶನಾಲಯ 'ಸುಜಾತ್ನಾ' ವನ್ನು ಉದ್ಘಾಟಿಸಿದರು" ಎಂದು ಮತ್ತೊಂದು ಟ್ವೀಟ್ ಮಾಡಲಾಗಿದೆ.
ಆದರೆ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಧಿಕೃತ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿರುವ ವರದಿಗಳ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.












Click it and Unblock the Notifications