ಡಿಸೆಂಬರ್ 31ರವರೆಗೆ ಇಂಗ್ಲೆಂಡ್‌ನಿಂದ ಬರುವ ವಿಮಾನಗಳು ಸ್ಥಗಿತ: ಭಾರತಕ್ಕೆ ಬಂದಿಳಿದವರು ಕ್ವಾರಂಟೈನ್

ಮುಂಬೈ, ಡಿಸೆಂಬರ್ 22: ಬ್ರಿಟನ್‌ನಲ್ಲಿ ಹೊಸ ಕೋವಿಡ್ ಸೋಂಕು ಹೆಚ್ಚಾದ ಬಳಿಕ ಇಡೀ ವಿಶ್ವವೇ ಮತ್ತೊಮ್ಮೆ ಆತಂಕಕ್ಕೆ ಒಳಗಾಗಿದ್ದು, ಭಾರತವು ಇಂದು ಮಧ್ಯರಾತ್ರಿಯಿಂದಲೇ ಇಂಗ್ಲೆಂಡ್‌ಗೆ ತೆರಳುವ ಮತ್ತು ಬರುವ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಇದರ ಜೊತೆಗೆ ಇಂಗ್ಲೆಂಡ್‌ನಿಂದ ಭಾರತಕ್ಕೆ ಬಂದಿಳಿದವರಿಗೆ ಕ್ವಾರಂಟೈಂನ್‌ಗೆ ಒಳಪಡಿಸಲಾಗುತ್ತಿದೆ.

ಡಿಸೆಂಬರ್ 22, 2020 ರ ಮಧ್ಯರಾತ್ರಿಯಿಂದ(23.59), ಡಿಸೆಂಬರ್ 31, 2020ರವರೆಗೆ (23.59)ರವರೆಗೆ ಇಂಗ್ಲೆಂಡ್‌ನಿಂದ ಬರುವ ಎಲ್ಲಾ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಇದರ ಜೊತೆಗೆ ಅಲ್ಲಿಂದ ಬಂದಿರುವ ಪ್ರಯಾಣಿಕರಿಗೆ ಆರ್‌ಟಿ-ಪಿಸಿಟಿ ಪರೀಕ್ಷೆ ಕಡ್ಡಾಯವಾಗಿದೆ.

ಈ ಟೆಸ್ಟ್‌ಗೆ ಒಳಪಡುವ ಯಾವುದೇ ಪ್ರಯಾಣಿಕರು ಕೋವಿಡ್ ಪಾಸಿಟಿವ್ ಕಂಡುಬಂದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಗಾಗುವುದು ಕಡ್ಡಾಯವಾಗಿದೆ. ಇನ್ನು ನೆಗೆಟಿವ್ ಬಂದ ಪ್ರಯಾಣಿಕರು ಮನೆಯಲ್ಲಿಯೇ ಏಳು ದಿನಗಳ ಕಾಲ ಕ್ವಾರಂಟೈನ್‌ಗೆ ಒಳಗಾಗಬೇಕಿದೆ. ದೇಶದ ಎಲ್ಲಾ ಏರ್‌ಪೋರ್ಟ್‌ನಲ್ಲಿ ಈ ನಿಯಮವು ಅನ್ವಯವಾಗಿದೆ.

ಮುಂಬೈನಲ್ಲಿ ಇಂಗ್ಲೆಂಡ್‌ನಿಂದ ಆಗಮಿಸಿದ ಪ್ರಯಾಣಿಕರಿಗೆ ಆರ್‌ಟಿ-ಪಿಸಿಟಿ ಪರೀಕ್ಷೆ ಮಾಡಲಾಗಿದೆ. ಅವರನ್ನು ಸ್ವೀಕರಿಸಲು ಬಂದ ಜನರು ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದಾರೆ. ಜೊತೆಗೆ ಸರ್ಕಾರ ನಮಗೆ ಮೊದಲೇ ಏಕೆ ತಿಳಿಸಲಿಲ್ಲ. ವಿಮಾನ ಹತ್ತುವ ಮೊದಲು ಹೇಗೆ ಅನುಮತಿ ನೀಡಿದರು ಎಂದು ಜನರು ಪ್ರಶ್ನಿಸಿದ್ದಾರೆ.

ದೇಶದ ಕೆಲವು ರಾಜ್ಯಗಳ ವಿಮಾನ ನಿಲ್ದಾಣಗಳಲ್ಲಿ ಇದೇ ರೀತಿಯಾದ ಪರಿಸ್ಥಿತಿಯಾಗಿದ್ದು, ಲಂಡನ್‌ನಿಂದ ವಿಮಾನದಿಂದ ಬಂದ ತಮ್ಮ ಸಂಬಂಧಿಕರನ್ನು ಸ್ವೀಕರಿಸಲು ಜನರು ಅಮೃತಸರ ವಿಮಾನ ನಿಲ್ದಾಣದ ಹೊರಗೆ ಕಾಯುತ್ತಿದ್ದಾರೆ

All Flights originating From UK into India be Suspended Temporarily Till 31st December 2020

"ಅಧಿಕಾರಿಗಳು ಪ್ರಯಾಣಿಕರನ್ನು ವಿಮಾನ ಹತ್ತುವ ಮೊದಲು ಪರೀಕ್ಷಿಸಿದರೂ ಸಹ ಕೋವಿಡ್-19 ಪರೀಕ್ಷೆಗೆ ಒಳಗಾಗುವಂತೆ ಕೇಳುತ್ತಿದ್ದಾರೆ. ಅವರನ್ನು ಮನೆಗೆ ಹೋಗಲು ಅನುಮತಿಸಬೇಕು" ಎಂದು ವ್ಯಕ್ತಿಯೊಬ್ಬರು ಆಗ್ರಹಿಸಿದ್ದಾರೆ.

ಇನ್ನು ಅಮೃತಸರದ ವಿಮಾನ ನಿಲ್ದಾಣಕ್ಕೆ ವಿಶೇಷ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರು ಬಂದಿದ್ದಾರೆ. ಅವರು ಆರ್‌ಟಿ-ಪಿಸಿಟಿ ಪರೀಕ್ಷೆಗೆ ಒಳಗಾಗಬೇಕಾಗಿದ್ದು ಅದು 6-8 ಗಂಟೆಗಳು ತೆಗೆದುಕೊಳ್ಳಬಹುದು ಮತ್ತು ಅದಕ್ಕಾಗಿ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿ ಇರಬೇಕಾಗುತ್ತದೆ ಎಂದು ಅಮೃತಸರ ಎಸ್‌ಡಿಎಂ ದೀಪಕ್ ಭಾಟಿಯಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+