ಕೊರೊನಾ ಲಾಕ್‌ಡೌನ್: ಮೇ 3ರ ವರೆಗೆ ಎಲ್ಲಾ ವಿಮಾನಗಳ ಹಾರಾಟ ರದ್ದು
ನವದೆಹಲಿ, ಏಪ್ರಿಲ್ 14: ಲಾಕ್‌ಡೌನ್ ವಿಸ್ತರಣೆಯಾದ ಹಿನ್ನೆಲೆಯಲ್ಲಿ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಮೇ 3ರವರೆಗೂ ನಿರ್ಬಂಧಿಸಲಾಗಿದೆ ಎಂದು ವಿಮಾನಯಾನ ಸಚಿವಾಲಯ ಮಾಹಿತಿ ನೀಡಿದೆ.
Recommended Video
ಅಂದು ರಾತ್ರಿ 11.59ರವರೆಗೆ ಅನ್ವಯವಾಗುವಂತೆ ನಿರ್ಬಂಧ ಹೇರಲಾಗಿದೆ. ಇದಕ್ಕೂ ಮುನ್ನ ದೇಶದಲ್ಲಿ ಲಾಕ್‌ಡೌನ್ ಘೋಷಣೆಯಾಗುತ್ತಿದ್ದಂತೆಯೇ ಡೊಮೆಸ್ಟಿಕ್ ಹಾಗೂ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಕೇವಲ ಬೇರೆ ದೇಶದಲ್ಲಿರುವ ಭಾರತೀಯರನ್ನಯ ಕರೆ ತರಲು ಮಾತ್ರ ವಿಶೇಷ ವಿಮಾನವನ್ನು ಬಳಸಲಾಗಿತ್ತು.
ಇದೀಗ ಇನ್ನೂ 19ದಿನಗಳ ಕಾಲ ವಿಮಾನ ಹಾರಾಟ ಬಂದ್ ಮಾಡಿ ಆದೇಶಿಸಲಾಗಿದೆ. ಮೇ 4ರಿಂದ ಮೊದಲು ದೇಶೀಯ ವಿಮಾನ ಹಾರಾಟ ನಡೆಸಲಿದೆಯೇ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಇನ್ನೂ ದೊರೆತಿಲ್ಲ.

ಹಾಗೆಯೇ ಮೇ 3ರವರೆಗೆ ರೈಲು ಸಂಚಾರವನ್ನೂ ವಿಸ್ತರಣೆ ಮಾಡಿ ಭಾರತೀಯ ರೈಲ್ವೆ ಪ್ರಕಟಣೆ ಹೊರಡಿಸಿದೆ.
ಅಗತ್ಯ ವಸ್ತುಗಳ ಸಾಗಣೆಗೆ ಗೂಡ್ಸ್ ರೈಲು, ಕೆಲವು ವಿಶೇಷ ರೈಲುಗಳು ಎಂದಿನಂತೆ ಸಂಚಾರ ನಡೆಸಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಣೆ ಹೊರಡಿಸಿದೆ. ಮೇ 4ರಿಂದ ರೈಲು ಸಂಚಾರ ಆರಂಭವಾಗಲಿದೆಯೇ? ಎಂಬುದಕ್ಕೆ ಇನ್ನೂ ಉತ್ತರ ದೊರೆತಿಲ್ಲ.












Click it and Unblock the Notifications