ಕೊನೆಗೂ ಸೆರೆಸಿಕ್ಕರು ದಾದ್ರಿ ಗೋಮಾಂಸ ಪ್ರಕರಣ ಆರೋಪಿಗಳು
ಲಕ್ನೋ, ಅಕ್ಟೋಬರ್, 19 : ಗೋಮಾಂಸ ಸಂಗ್ರಹಣಾ ಆರೋಪದ ಮೇಲೆ ಮಹಮ್ಮದ್ ಇಖ್ಲಾನ್ ನನ್ನು ಹತ್ಯೆ ಮಾಡಿದವರ ಪೈಕಿ ಕೊನೆ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ಅಕ್ಟೋಬರ್ 19ರ ಸೋಮವಾರದಂದು ಬಂಧಿಸಿದ್ದಾರೆ. 10 ಜನರ ಉದ್ರಿಕ್ತ ಗುಂಪೊಂದು ಮಹಮ್ಮದ್ ಇಖ್ಲಾಕ್ ಮೇಲೆ ಸೆಪ್ಟೆಂಬರ್ 28ರ ಸೋಮವಾರದಂದು ದಾಳಿ ನಡೆಸಿ ಹತ್ಯೆಗೈದಿತ್ತು.
ಮಹಮ್ಮದ್ ಇಖ್ಲಾನ್ ಪ್ರಕರಣದ ಕೊನೆ ಆರೋಪಿ ಹರಿ ಓಮ್ ನನ್ನು ಉತ್ತರ ಪ್ರದೇಶದ ಸರ್ದಾನದಲ್ಲಿ ಬಂಧಿಸಿದ್ದಾರೆ. ಈ ಮೊದಲು ಶ್ರೀ ಓಮ್, ವಿವೇಕ್, ಗೌರವ್, ಸೌರಭ, ಸಂದೀಪ್ ಮತ್ತು ರೂಪೇಂದ್ರ ಎಂಬ ಆರು ಆರೋಪಿಗಳನ್ನು ಬಂಧಿಸಲಾಗಿತ್ತು. ಬಳಿಕ ಶಿವಮ್ ಮತ್ತು ವಿಶಾಲ್ ನನ್ನು ಪೊಲೀಸರು ಸೆರೆಹಿಡಿದಿದ್ದರು.['ನನ್ನ ಜೈನ ಗೆಳೆಯರು ಗೋಮಾಂಸ ಮಾರುತ್ತಾರೆ': ಮೋದಿ]

ಕೊನೆ ಆರೋಪಿ ಹರಿ ಓಮ್ ನನ್ನು ಬಂಧಿಸಲು ಪೊಲೀಸರು ಹಲವಾರು ದಿನಗಳಿಂದ ಪ್ರಯತ್ನಿಸುತ್ತಿದ್ದರು. ಆದರೂ ಆತನ ಸುಳಿವು ಸಿಕ್ಕಿರಲಿಲ್ಲ. ಬಳಿಕ ಅವನ ಫೋನನ್ನು ಟ್ರ್ಯಾಪ್ ಮಾಡಿದ ಪೊಲೀಸರು ಹರಿ ಇರುವ ಸ್ಥಳವನ್ನು ಕಂಡು ಹಿಡಿದು ಸ್ಥಳವನ್ನು ಪತ್ತೆ ಮಾಡಿದ್ದಾರೆ.[ದನದ ಮಾಂಸದ ಸುತ್ತ ನಾರುತ್ತಿರುವ ರಾಜಕೀಯ ದುರ್ಮಾಂಸ]
ಉತ್ತರ ಪ್ರದೇಶದ ದಾದ್ರಿಯಲ್ಲಿ ಗೋ ಮಾಂಸ ಸಂಗ್ರಹಣೆಯಲ್ಲಿ ತೊಡಗಿದ್ದಾನೆ ಎಂದು ಅನುಮಾನಿಸಿ 10 ಜನರ ಗುಂಪೊಂದು ಸೆಪ್ಟೆಂಬರ್ 28ರ ಸೋಮವಾರಂದು 50 ವರ್ಷದ ಮಹಮ್ಮದ್ ಇಖ್ಲಾಕ್ ನನ್ನು ಹತ್ಯೆ ಮಾಡಲಾಗಿದ್ದು, ಈತನ ಮಗ ಧಾನೀಶ್ ಮೇಲೂ ಹಲ್ಲೆ ನಡೆಸಿತ್ತು.
ಒಟ್ಟಿನಲ್ಲಿ ಈ ಘಟನೆ ಇಡೀ ಭಾರತವನ್ನು ಬೆಚ್ಚಿ ಬೀಳಿಸುವಂತೆ ಮಾಡಿತ್ತು. ಈ ಪ್ರಕರಣದಲ್ಲಿ ಸಾವನ್ನಪ್ಪಿದ ಮಹಮ್ಮದ್ ಇಖ್ಲಾಕ್ ಕುಟುಂಬ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಾಂತ್ವನ ಹೇಳಿದ್ದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಸಂತ್ರಸ್ತರ ಕುಟುಂಬಕ್ಕೆ 45 ಲಕ್ಷ ಪರಿಹಾರ ಘೋಷಿಸಿದ್ದರು.[ಗೋಮಾಂಸ ಸಂಗ್ರಹ: ಇಖ್ಲಾಕ್ ಕುಟುಂಬಕ್ಕೆ 45 ಲಕ್ಷ ಪರಿಹಾರ]
ಅಲ್ಲದೇ ಗೋ ಮಾಂಸ ಪ್ರಕರಣದ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ ಹರಿಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್, ಕೇಂದ್ರ ಸಚಿವ ಮಹೇಶ್ ಶರ್ಮ, ಸಂಸದ ಸಾಕ್ಷಿ ಮಹಾರಾಜ್, ಶಾಸಕ ಸಂಗೀತ್ ಸೋಮ್ ಅವರನ್ನು ಪಕ್ಷದ ಕಚೇರಿಗೆ ಕರೆಸಿಕೊಂಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಈ ಪ್ರಕರಣ ವಿಚಾರದಲ್ಲಿ ವಿವಾದಿತ ಹೇಳಿಕೆ ನೀಡಬಾರದೆಂದು ಕಿವಿಮಾತು ಹೇಳಿದ್ದಾರೆ.












Click it and Unblock the Notifications