ಇಂಡಿಯಾ ಒಕ್ಕೂಟಕ್ಕೆ ಆಘಾತ: ಲೋಕಸಭಾ ಚುನಾವಣೆಗೆ 16 ಅಭ್ಯರ್ಥಿಗಳ ಹೆಸರು ಘೋಷಿಸಿದ ಅಖಿಲೇಶ್ ಯಾದವ್
ಕಾಂಗ್ರೆಸ್ ಜೊತೆ ಸೀಟು ಹಂಚಿಕೆಯ ಮಾತುಕತೆಯ ನಡುವೆ ಸಮಾಜವಾದಿ ಪಕ್ಷವು ಲೋಕಸಭೆ ಚುನಾವಣೆಗೆ 16 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಸಮಾಜವಾದಿ ಪಕ್ಷದ ಈ ನಡೆ ಇಂಡಿಯಾ ಒಕ್ಕೂಟಕ್ಕೆ ಮತ್ತೊಂದು ಹೊಡೆತ ಬಿದ್ದಂತಾಗಿದೆ.
ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ತಮ್ಮ ಪಕ್ಷವು ಉತ್ತಮವೆಂದು ಭಾವಿಸುವದನ್ನು ಮಾಡುತ್ತದೆ ಮತ್ತು ಕಾಂಗ್ರೆಸ್‌ನ ಅನುಮತಿ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸೀಟು ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್‌ಗೆ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತು ಪಂಜಾಬ್‌ನಲ್ಲಿ ಎಎಪಿಯ ಭಗವಂತ್ ಮಾನ್ ನಿರಾಕರಣೆ ಮಾಡಿದ್ದಾರೆ. ಬಿಜೆಪಿಯೊಂದಿಗೆ ಮೈತ್ರಿ ಸರ್ಕಾರದ ನೇತೃತ್ವ ವಹಿಸಲು ಭಾನುವಾರ ಒಂಬತ್ತನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಿತೀಶ್ ಕುಮಾರ್ ಅವರು ಪಕ್ಷಾಂತರಗೊಂಡಿದ್ದರಿಂದ ಇಡೀ ಪ್ರತಿಪಕ್ಷಗಳು ಜಿಗುಪ್ಸೆಗೊಂಡಿವೆ ಎನ್ನಲಾಗಿದೆ.
ಮೈತ್ರಿಕೂಟ ಅಂತ್ಯದ ಆರಂಭ?
ಕಳೆದ ವರ್ಷ ಮಧ್ಯಪ್ರದೇಶದ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಆರು ಸ್ಥಾನಗಳಿಗೆ ಅಖಿಲೇಶ್ ಯಾದವ್ ಅವರೊಂದಿಗಿನ ಕೇಂದ್ರ ನಾಯಕತ್ವದ ಒಪ್ಪಂದವನ್ನು ಗೌರವಿಸಲು ನಿರಾಕರಿಸಿದ ನಂತರ ಸಮಾಜವಾದಿ ಪಕ್ಷದ ಜಪತೆ ಹೊಂದಾಣಿಕೆ ಕಷ್ಟ ಎಂದು ಸ್ಪಷ್ಟವಾಗಿತ್ತು.
ರಾಜ್ಯ ಪಕ್ಷದ ಮುಖ್ಯಸ್ಥ ಕಮಲ್ ನಾಥ್ ಅವರು "ಯಾವುದೇ ಅಖಿಲೇಶ್-ವಕೀಲೇಶ್ ಗೊತ್ತಿಲ್ಲ" ಎಂದು ಹೇಳಿಕೆ ನೀಡಿದ್ದು ಸಮಾಜವಾದಿ ಪಾಳಯದಲ್ಲಿ ತೀವ್ರ ಕೋಪವನ್ನು ಹುಟ್ಟುಹಾಕಿತ್ತು. ಮಂಗಳವಾರ, 16 ಅಭ್ಯರ್ಥಿಗಳನ್ನು ಘೋಷಿಸಿದ ನಂತರ ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷವು "ಯುಪಿಯಲ್ಲಿ ಮೈತ್ರಿಯಲ್ಲಿ ತನ್ನದೇ ಆದ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ" ಎಂದು ಹೇಳಿದರು.
80 ಸ್ಥಾನಗಳ ಉತ್ತರಪ್ರದೇಶದಲ್ಲಿ ಯಾದವ್ ಅವರು ಕಾಂಗ್ರೆಸ್‌ಗೆ 11 ಸ್ಥಾನಗಳನ್ನು ನೀಡಿದ್ದಾರೆ. 2019 ರಲ್ಲಿ, ಯಾವುದೇ ಮೈತ್ರಿಯಿಲ್ಲದೆ, ಸೌಜನ್ಯದ ಸೂಚಕವಾಗಿ ಪಕ್ಷವು ಅಮೇಥಿ ಮತ್ತು ರಾಯ್ ಬರೇಲಿಯಿಂದ ಸ್ಪರ್ಧಿಸಿರಲಿಲ್ಲ.
ಮಂಗಳವಾರ ಹೆಸರಿಸಲಾದ ಅಭ್ಯರ್ಥಿಗಳಲ್ಲಿ ಎಸ್‌ಪಿ ಮುಖ್ಯಸ್ಥರ ಪತ್ನಿ ಡಿಂಪಲ್ ಯಾದವ್ ಅವರು ಕುಟುಂಬದ ಭದ್ರಕೋಟೆಯಾದ ಮೈನ್‌ಪುರಿಯಿಂದ ಸ್ಪರ್ಧಿಸಲಿದ್ದಾರೆ.
ಬಿಜೆಪಿ ವಿರುದ್ಧ ಹೋರಾಟಲು ವಿಪಕ್ಷಗಳು ಒಗ್ಗಟ್ಟಾಗಿ ಇಂಡಿಯಾ ಒಕ್ಕೂಟವನ್ನು ರಚನೆ ಮಾಡಿದ್ದವು. ಇಂಡಿಯಾ ಒಕ್ಕೂಟ ರಚೆನಯಲ್ಲಿ ಮುಂದಿದ್ದ ನಿತೀಶ್ ಕುಮಾರ್ ಈಗ ಎನ್‌ಡಿಎ ಸೇರಿಕೊಂಡಿರುವುದು ಒಕ್ಕೂಟಕ್ಕೆ ದೊಡ್ಡ ಹಿನ್ನಡೆಯಾಗಿದೆ.
ಸೀಟು ಹಂಚಿಕೆ ಬಗ್ಗೆ ಚರ್ಚೆಗೆ ಮುನ್ನವೇ ಒಕ್ಕೂಟದ ಪಕ್ಷಗಳ ನಡುವೆ ಅಸಮಾಧಾನ ಸ್ಫೋಟವಾಗಿದೆ. ಚುನಾವಣೆ ಹತ್ತಿರವಾದಂತೆ ಇದು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಇಂಡಿಯಾ ಒಕ್ಕೂಟದ ಅಸ್ತಿತ್ವದ ಬಗ್ಗೆಯೇ ಅನುಮಾನ ಮೂಡುವಂತೆ ಮಾಡಿದೆ.












Click it and Unblock the Notifications