ಕೀಗಳು 'ಕಾಣೆಯಾಗಿದೆ': ಹೊಸ ಕಚೇರಿ ಹೊರಗೆ ನಿಂತ ನೂತನ ಡಿಸಿಎಂ ಅಜಿತ್ ಪವಾರ್ ಬಣ!

ಮುಂಬೈ, ಜುಲೈ. 04: ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಇಬ್ಭಾಗವಾಗಿದ್ದು, ಪಕ್ಷದೊಳಗಿನ ನಾಯಕತ್ವದ ಪ್ರಶ್ನೆ ಪದೇ ಪದೇ ಮುಮದಕ್ಕೆ ಬರುತ್ತಿದೆ. ಎನ್‌ಸಿಪಿ ಅಧ್ಯಕ್ಷ ಶರರ್ ಪವಾರ್ ನಮ್ಮ ರಾಷ್ಟ್ರೀಯ ಅಧ್ಯಕ್ಷರು ಎಂದು ಅಜಿತ್ ಪವಾರ್ ಹೇಳಿದ್ದರೂ ಕೂಡ ಈ ಹೊಸ ಬಣವನ್ನು ಪಕ್ಷದಿಂದ ದೂರವಿಡಲಾಗಿದೆ. ಇದರ ಬೆನ್ನಲ್ಲೇ ನೂತನ ಕಚೇರಿ ಉದ್ಘಾಟಿಸಿಲಾಗಿದೆ.

ಪಕ್ಷದ ನಿಯಂತ್ರಣಕ್ಕಾಗಿ ಹೋರಾಟದಲ್ಲಿ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಅವರ ವಿರುದ್ಧ ಸಮರ ಸಾರಿರುವ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ರಾಜ್ಯ ಸಚಿವಾಲಯದ ಬಳಿ ಪಕ್ಷದ ಹೊಸ ಕಚೇರಿಯನ್ನು ಉದ್ಘಾಟಿಸಿದ್ದಾರೆ. ಆದರೆ ಇಂದು ಬೆಳಗ್ಗೆ ಅಜಿತ್ ಪವಾರ್ ಅವರ ನಿಷ್ಠಾವಂತ ನಾಯಕರು ಹೊಸ 'ರಾಷ್ಟ್ರವಾದಿ ಭವನ'ವನ್ನು ತಲುಪಿದಾಗ, ಅದಕ್ಕೆ ಬೀಗ ಹಾಕಿರುವುದು ಮತ್ತು ಕೀಗಳು ನಾಪತ್ತೆಯಾಗಿರುವುದು ಕಂಡುಬಂದಿತು.

Ajit Pawars Faction Was Locked Out

ಪಕ್ಷದ ನಾಯಕರು ಬೀಗ ಹಾಕಿದ ಬಾಗಿಲುಗಳ ಹೊರಗೆ ಕುರ್ಚಿಗಳ ಮೇಲೆ ಕುಳಿತಿರುವುದು ಕಂಡುಬಂದಿತು. ಕೊಠಡಿಗಳ ಕೀಗಳು ನಾಪತ್ತೆಯಾಗಿವೆ ಎಂದು ಕೀಗಳನ್ನು ಬೇಗನೆ ಪತ್ತೆಹಚ್ಚಲು ಕರೆಗಳನ್ನು ಮಾಡಲಾಯಿತು. ಹೀಗಾಗಿ ನೂತನ ಉಪಮುಖ್ಯಮಂತ್ರಿ ಕಚೇರಿಯ ಹೊರಗೆ ಕಾಯುವಂತಾಯಿತು.

ನಂತರ, ಯುವ ಮುಖಂಡರು ಕಟ್ಟಡವನ್ನು ಪ್ರವೇಶಿಸಲು ಬೀಗವನ್ನು ಒಡೆಯಲು ಪ್ರಯತ್ನಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ. ಒಮ್ಮೆ ಒಳಗೆ ಹೋದ ಅವರಿಗೆ ಒಳಗಿನ ಕೋಣೆಗಳ ಬಾಗಿಲುಗಳು ಸಹ ಲಾಕ್ ಆಗಿದ್ದು ಕಂಡಿವೆ. ಅಜಿತ್ ಪವಾರ್ ಅವರು ಪಕ್ಷದ ಕಚೇರಿಗೆ ಆಯ್ಕೆ ಮಾಡಿದ್ದ ಬಂಗಲೆ ಮಹಾರಾಷ್ಟ್ರ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಮತ್ತು ಉದ್ಧವ್ ಠಾಕ್ರೆ ಅವರ ನಿಷ್ಠಾವಂತ ಅಂಬಾದಾಸ್ ದಾನ್ವೆ ಅವರಿಗೆ ಸೇರಿತ್ತು. ಅಂಬಾದಾಸ್ ದಾನ್ವೆ ಅವರಿಗೆ ಈಗ ಮತ್ತೊಂದು ಬಂಗಲೆ ಮಂಜೂರು ಮಾಡಲಾಗಿದೆ.

ಅಂಬಾದಾಸ್ ದಾನ್ವೆ ಅವರ ಆಪ್ತ ಸಹಾಯಕರು ಬಂಗಲೆಯಲ್ಲಿ ಮಲಗಿದ್ದರು ಎಂದು ಎನ್‌ಸಿಪಿ ನಾಯಕ ಅಪ್ಪಾ ಸಾವಂತ್ ಎನ್‌ಡಿಟಿವಿಗೆ ತಿಳಿಸಿದ್ದಾರೆ. "ನಾವು ಒಳಗೆ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದೇವೆ. ಆದರೆ ಪಿಎ ಬೀಗ ಹಾಕಿಕೊಂಡು ಹೋದರು. ನಾವು ಅವರನ್ನು ಕರೆದಿದ್ದೇವೆ. ಅವರು ಮಂತ್ರಾಲಯಕ್ಕೆ ಹೋಗುತ್ತಿದ್ದಾರೆ ಮತ್ತು ಕೀಗಳನ್ನು ನಮಗೆ ಹಸ್ತಾಂತರಿಸುವುದಾಗಿ ಹೇಳಿದ್ದಾರೆ" ಎಂದು ಎನ್‌ಸಿಪಿಯ ಉಪಾಧ್ಯಕ್ಷ ಸಾವಂತ್ ಹೇಳಿದರು. ಇದರ ಹಿಂದೆ ಷಡ್ಯಂತ್ರವಿದೆ ಎಂದು ಎನ್‌ಸಿಪಿ ನಾಯಕ ಆರೋಪಿಸಿದ್ದಾರೆ.

Ajit Pawars Faction Was Locked Out

ಅಜಿತ್ ಪವಾರ್ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಬಣಗಳು ತಮ್ಮ ಮುಂದಿನ ನಡೆಗಳನ್ನು ಯೋಜಿಸಲು ಪ್ರಮುಖ ಸಭೆಗಳನ್ನು ನಡೆಸುತ್ತಿವೆ. ಇದರ ಜೊತೆಗೆ ಎನ್‌ಸಿಪಿಯ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಕೂಡ ಕಳೆದೆರಡು ದಿನಗಳ ಆಘಾತಕಾರಿ ಬೆಳವಣಿಗೆಗಳ ಕುರಿತು ಚರ್ಚಿಸಲು ಮಂಗಳವಾರ ಸಭೆ ನಡೆಸುತ್ತಿದ್ದಾರೆ.

ಎರಡೂ ಬಣಗಳು ತಾವು ನಿಜವಾದ ಎನ್‌ಸಿಪಿಯನ್ನು ಪ್ರತಿನಿಧಿಸುತ್ತೇವೆ ಎಂದು ಹೇಳಿಕೊಂಡಿವೆ. ಆದರೆ ಅವರನ್ನು ಬೆಂಬಲಿಸುವ ಶಾಸಕರ ಸಂಖ್ಯೆಯನ್ನು ಅವರು ವಿವರಿಸಿಲ್ಲ. ಅಜಿತ್ ಪವಾರ್ ಮತ್ತು ಇತರ ಎಂಟು ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರಕ್ಕೆ ಸೇರ್ಪಡೆಗೊಂಡ ಭಾನುವಾರ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಫುಲ್ ಪಟೇಲ್ ಅವರಂತಹ ಹಿರಿಯ ನಾಯಕರನ್ನು ಶರದ್ ಪವಾರ್ ಬಂಡಾಯಗಾರರನ್ನು ಉಚ್ಛಾಟಿಸಿದ್ದಾರೆ.

ಅಜಿತ್ ಪವಾರ್ ಮತ್ತು ಅವರ ಎಂಟು ನಿಷ್ಠಾವಂತರನ್ನು ಅನರ್ಹಗೊಳಿಸಬೇಕೆಂದು ಶರದ್ ಪವಾರ್ ನೇತೃತ್ವದ ಬಣ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಸಲ್ಲಿಸಿದೆ. ಎನ್‌ಸಿಪಿಯ ಸಂಸ್ಥಾಪಕ ಶರದ್ ಪವಾರ್ ಅವರು ಪಕ್ಷದ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆ ಎಂದು ಒತ್ತಿಹೇಳಿ ಪಕ್ಷವು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+