NIA: ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ, ಎನ್‌ಐಎ ಅಲರ್ಟ್‌

ಬೆಂಗಳೂರು, ಅಕ್ಟೋಬರ್ 28: ದೇಶದಲ್ಲಿ ಪ್ರಯಾಣಿಕ ವಿಮಾನಗಳಿಗೆ ಪದೇ ಪದೇ ಬಾಂಬ್ ಬೆದರಿಕೆ ಕರೆ ಬರುತ್ತಿದೆ. ಈ ಕರೆಗಳ ಕುರಿತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಲರ್ಟ್‌ ಆಗಿದೆ. ಕಳೆದ ಎರಡು ವಾರದಲ್ಲಿ 400 ಬೆದರಿಕೆ ಕರೆಗಳು ಬಂದಿದ್ದು, ವಿಮಾನಗಳ ತಪಾಸಣೆ ಮಾಡಲಾಗಿದೆ. ಎನ್‌ಐಎ ಸೈಬರ್ ವಿಂಗ್‌ ಈ ಕುರಿತು ತನಿಖೆಯನ್ನು ಆರಂಭಿಸಿದೆ. ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಸಹ ಹೆಚ್ಚಿಸಲಾಗುತ್ತಿದೆ.

ಪದೇ ಪದೇ ಬಾಂಬ್ ಬೆದರಿಕೆ ಕರೆ ಬರುತ್ತಿರುವ ಹಿನ್ನಲೆಯಲ್ಲಿ ದೇಶದ ಭದ್ರತೆ ಹಿತದೃಷ್ಟಿಯಿಂದ ಎನ್ಐಎ ತನಿಖೆಯನ್ನು ಆರಂಭಿಸಿದೆ. ವಿಮಾನ ಪ್ರಯಾಣಿಕರ ಸುರಕ್ಷತೆ ಮತ್ತು ದೇಶದ ಸುರಕ್ಷತೆಯ ದೃಷ್ಟಿಯಿಂದ ಕರೆಗಳ ಮೂಲವನ್ನು ಜಾಲಾಡಲು ಎನ್‌ಐಎ ಮುಂದಾಗಿದೆ.

Airline Threat Calls National Investigation Agency Began Probe

ವಿಮಾನಗಳಿಗೆ ಬಂದಿರುವ ಬಹಳಷ್ಟು ಬೆದರಿಕೆ ಕರೆಗಳು ವಿದೇಶದಿಂದ ಬಂದಿವೆ. ಆದ್ದರಿಂದ ಎನ್‌ಐಎ ಈ ಕರೆಗಳ ಮಾಹಿತಿ ಸಂಗ್ರಹ ಮಾಡುತ್ತಿದೆ. ಈ ಕರೆಗಳ ಹಿಂದಿನ ಉದ್ದೇಶ ಮತ್ತು ಮುಂದೆ ನಡೆಯಬಹುದಾದ ದಾಳಿಯ ಸಾಧ್ಯತೆಯನ್ನು ತಡೆಯಲು ತನಿಖೆಯನ್ನು ಕೈಗೊಳ್ಳಲಾಗಿದೆ.

ಎನ್‌ಐಎ ಒಂದೇ ತನಿಖೆಯಲ್ಲ: ವಿಮಾನಗಳ ಬಾಂಬ್ ಬೆದರಿಕೆ ಕುರಿತು ಎನ್‌ಐಎ ಒಂದೇ ಸಂಸ್ಥೆ ತನಿಖೆ ನಡೆಸುತ್ತಿಲ್ಲ. ವಿವಿಧ ಏಜೆನ್ಸಿಗಳ ಮೂಲಕ ತನಿಖೆಯನ್ನು ಮಾಡಲಾಗುತ್ತಿದೆ. ಈ ತನಿಖೆಯ ವರದಿಯ ಬಳಿಕ ದೇಶದ ವಿಮಾನ ನಿಲ್ದಾಣಗಳಲ್ಲಿ ಕೈಗೊಳ್ಳಬೇಕಾದ ಭದ್ರತಾ ಮಾರ್ಗಸೂಚಿಗಳನ್ನು ಪರಿಷ್ಕರಣೆ ಮಾಡಲು ಸರ್ಕಾರ ಮುಂದಾಗಿದೆ.

ಇಂತಹ ಬೆದರಿಕೆ ಕರೆಗಳು ಬಂದಾಗ ವಿಮಾನ ಸಂಚಾರದಲ್ಲಿ ವ್ಯತ್ಯಯವಾಗದಂತೆ ಕಾರ್ಯ ನಿರ್ವಹಣೆ ಮಾಡುವ ಕುರಿತು ನಿಯಮಗಳನ್ನು ರೂಪಿಸಲಾಗುತ್ತಿದೆ. ಬಾಂಬ್ ಕರೆಗಳ ಕುರಿತು ಮಾಹಿತಿ ಸಂಗ್ರಹ ಮಾಡಲು ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಎನ್‌ಐಎ ಬಾಂಬ್ ಬೆದರಿಕೆ ನಿರ್ವಹಣಾ ಸಮಿತಿಯನ್ನು ರಚನೆ ಮಾಡಿದೆ.

ಬಾಂಬ್ ಕರೆಗಳು ಬಂದಾಗ ತುರ್ತಾಗಿ ಹೇಗೆ ಕಾರ್ಯ ನಿರ್ವಹಣೆ ಮಾಡಬೇಕು? ಎಂದು ಸಮಿತಿಗೆ ತರಬೇತಿ ನೀಡಲಾಗುತ್ತಿದೆ. ಇದಕ್ಕಾಗಿ ಅಗತ್ಯವಿರುವ ಮೂಲ ಸೌಕರ್ಯಗಳನ್ನು ಸಹ ವಿಮಾನ ನಿಲ್ದಾಣದಲ್ಲಿ ನೀಡಲಾಗುತ್ತಿದೆ. ಇದುವರೆಗೂ ಬಂದಿರುವುದು ಕೇವಲ ಹುಸಿ ಬಾಂಬ್ ಬೆದರಿಕೆ ಕರೆ, ಆದರೂ ಸಹ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಳ್ಳಲಾಗಿದೆ.

ವಿಮಾನಯಾನ ಸಂಸ್ಥೆಗಳಿಗೆ ಬರುವ ಇಂತಹ ಬೆದರಿಕೆ ಕರೆಗಳು ದುರುದ್ದೇಶಪೂರಿತ ಕೃತ್ಯಗಳು ಎಂಬುದು ಸಾಬೀತಾಗುತ್ತಿದೆ. ಇಂತಹ ಹುಸಿ ಬಾಂಬ್ ಬೆದರಿಕೆಗಳು ಜನರ ಮೇಲೆ ಪರಿಣಾಮ ಬೀರುವ ಜೊತೆಗೆ ದೇಶದ ಆರ್ಥಿಕ ಭದ್ರತೆಯನ್ನು ಸಹ ಅಸ್ಥಿರಗೊಳಿಸುತ್ತದೆ. ಇದಲ್ಲದೆ, ಸಾಮಾಜಿಕ ಮಾಧ್ಯಮದ ಪ್ಲಾಟ್‌ಫಾರ್ಮ್‌ಗಳಲ್ಲಿ ಇಂತಹ ಸಂದೇಶಗಳನ್ನು ಫಾರ್ವರ್ಡ್/ ಮರು ಟ್ವೀಟಿಂಗ್ ಆಯ್ಕೆಯ ಲಭ್ಯತೆಯಿಂದಾಗಿಯೂ ಇಂತಹ ಹುಸಿ ಬಾಂಬ್ ಬೆದರಿಕೆಗಳ ಹರಡುವಿಕೆಯ ಪ್ರಮಾಣ ಅಧಿಕವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಕಳೆದ ಶುಕ್ರವಾರ 27 ವಿಮಾನಗಳಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಇದರಿಂದಾಗಿ ವಿಮಾನ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ಈ ಬೆದರಿಕೆ ಕರೆಯಿಂದಾಗಿ ಸ್ಪೈಸ್‌ ಜೆಟ್, ಇಂಡಿಗೋ, ಏರ್‌ ಇಂಡಿಯಾ, ವಿಸ್ತಾರಾ ವಿಮಾನಯಾನ ಸಂಸ್ಥೆಗಳ ವಿಮಾನ ಹಾರಾಟದಲ್ಲಿ ವ್ಯತ್ಯಯ ಉಂಟಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+