Delhi: ಹೈಬ್ರಿಡ್ ಮಾದರಿಯಲ್ಲಿ ಶಾಲಾ, ಕಾಲೇಜು ತರಗತಿ ನಡೆಸಲು ಸೂಚನೆ
ಗಾಳಿ ಗುಣಮಟ್ಟ ಮ್ಯಾನೇಜ್‌ಮೆಂಟ್ ಆಯೋಗವು (CAQM) ದೆಹಲಿ ಶಾಲೆ ಮತ್ತು ಕಾಲೇಜುಗಳಲ್ಲಿ ಹೈಬ್ರಿಡ್ ಬೋಧನೆಯ ವಿಧಾನವನ್ನು ಜಾರಿಗೆ ತರುವಂತೆ ಸೂಚನೆ ಕೊಡಲು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಸಾಧ್ಯವಿರುವ ಕಡೆ ಭೌತಿಕ ಮತ್ತು ಆನ್‌ಲೈನ್ ತರಗತಿಗಳನ್ನು ನಡೆಸುವಂತೆ ಅನುಮತಿ ನೀಡಲಾಗಿದೆ.
ದೆಹಲಿ-ಎನ್‌ಸಿಆರ್‌ನಾದ್ಯಂತ ಶಾಲೆಗಳು ಮತ್ತು ಕಾಲೇಜುಗಳಲ್ಲಿ ದೈಹಿಕ ತರಗತಿಗಳನ್ನು ಮತ್ತೆ ಆರಂಭಿಸುವ ಬಗ್ಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬಳಿಕ ವಾಯು ಗುಣಮಟ್ಟ ನಿಯಂತ್ರಣ ಸಮಿತಿ ಈ ಸೂಚನೆ ನೀಡಿದೆ. ಸಮಿತಿಯು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಮತ್ತು ಹಂತ 3 ರ ಅಡಿಯಲ್ಲಿ ಹಲವಾರು ನಿರ್ಬಂಧಗಳನ್ನು ಸಡಿಲಿಸಿದೆ, ದೆಹಲಿ-ಎನ್‌ಸಿಆರ್ ಪ್ರದೇಶಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಹೈಬ್ರಿಡ್ ಮೋಡ್‌ನಲ್ಲಿ ಕಾರ್ಯನಿರ್ವಹಿಸಲು ಅನುಮತಿ ನೀಡಿದೆ.

ಹೆಚ್ಚಿನ ಮನೆಗಳಲ್ಲಿ ಏರ್ ಪ್ಯೂರಿಫೈಯರ್‌ಗಳ ಕೊರತೆ ಇರುವುದರಿಂದ ಮಕ್ಕಳು ಮನೆಯಲ್ಲಿಯೇ ಇರುವುದಕ್ಕೂ ಅಥವಾ ಶಾಲೆಗಳಿಗೆ ಹಾಜರಾಗುವುದಕ್ಕೂ ಗಮನಾರ್ಹ ವ್ಯತ್ಯಾಸವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಶಾಲೆಗಳಿಗೆ ವಿದ್ಯಾರ್ಥಿಗಳು ಬರದ ಕಾರಣ ಮಧ್ಯಾಹ್ನದ ಊಟ ಕಳೆದುಕೊಳ್ಳುವಂತಾಗಿದ್ದು, ವರ್ಚುವಲ್ ಅಥವಾ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಸಂಪನ್ಮೂಲಗಳ ಕೊರತೆ ಬಗ್ಗೆ ಕೂಡ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು.
ಸೋಮವಾರ ದೆಹಲಿಯಲ್ಲಿ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ IV ಕ್ರಮಗಳನ್ನು ಸಡಿಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದರೂ, ವಿದ್ಯಾರ್ಥಿಗಳಿಗೆ ಸಡಿಲಗೊಳಿಸುವ ನಿಯಮಾವಳಿಗಳನ್ನು ಪರಿಗಣಿಸಲುಗಾಳಿ ಗುಣಮಟ್ಟ ಮ್ಯಾನೇಜ್‌ಮೆಂಟ್ ಆಯೋಗಕ್ಕೆ ನಿರ್ದೇಶನ ನೀಡಿದೆ.
ಎನ್‌ಸಿಆರ್ ಪ್ರದೇಶದಲ್ಲಿ ಗಾಳಿ ಗುಣಮಟ್ಟ ಸೂಚ್ಯಂಕದ ಚಾರ್ಟ್ ಅನ್ನು ಸಲ್ಲಿಸಲಾಗಿದೆ. ನವೆಂಬರ್ 20 ರಿಂದ 23 ರವರೆಗಿನ 300 ರಿಂದ 419 ಎಕ್ಯೂಐ ದಾಖಲಾಗಿದೆ. ಮುಂದಿನ ವಿಚಾರಣೆ ದಿನ ಹೊಸ ಡಾಟಾವನ್ನು ನೀಡುವಂತೆ ಆಯೋಗಕ್ಕೆ ಕೋರ್ಟ್ ನಿರ್ದೇಶನ ನೀಡಿದೆ.
ಆದೇಶದ ಪ್ರತಿ ಇಲ್ಲದಿದ್ದರೂ ಆಯೋಗವು ಆದಷ್ಟು ಬೇಗ ನಿರ್ಧಾರ ಕೈಗೊಳ್ಳಲಿ. ಇಂದು ಅಥವಾ ನಾಳೆ ಬೆಳಗ್ಗೆಯೊಳಗೆ ಅಂತಿಮ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ನ್ಯಾಯಮೂರ್ತಿಗಳು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಜಿಆರ್ ಎಪಿ IV (ನಿಯಮಗಳು) ಮತ್ತು ಆಯೋಗದ (CAQM) ಕಾರಣದಿಂದಾಗಿ ಸಮಾಜದ ಹಲವಾರು ವಿಭಾಗಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತವೆ ಮತ್ತು ಕಾರ್ಮಿಕರು ಮತ್ತು ದಿನಗೂಲಿ ನಂಬಿ ಬದುಕುವವರು ತೊಂದರೆಗೊಳಗಾಗದಂತೆ ವಿವಿಧ ಅಧಿಕಾರಿಗಳಿಗೆ ನಿರ್ದೇಶನಗಳನ್ನು ಕಾಯಿದೆಯ ಅಡಿಯಲ್ಲಿ ಎಲ್ಲಾ ಅಧಿಕಾರಗಳನ್ನು ಹೊಂದಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.











Click it and Unblock the Notifications