ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಮಾನದ ಟಿಕೆಟ್‌ನಲ್ಲಿ ಮೋದಿ ಚಿತ್ರ: ಹಿಂದಕ್ಕೆ ಪಡೆದ ಏರ್ ಇಂಡಿಯಾ

|
Google Oneindia Kannada News

ನವದೆಹಲಿ, ಮಾರ್ಚ್ 25: ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಚಿತ್ರಗಳಿದ್ದ ವಿಮಾನದ ಟಿಕೆಟ್ ತೀವ್ರ ವಿವಾದ ಕೆರಳಿಸಿದ್ದರಿಂದ ಏರ್ ಇಂಡಿಯಾ ಅದನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗುವಂತಿದ್ದರೆ ಫೋಟೊಗಳನ್ನು ಒಳಗೊಂಡಿರುವ ಯಾವುದೇ ಮೂರನೇ ವ್ಯಕ್ತಿಯ ಜಾಹೀರಾತುಗಳು ಬೋರ್ಡಿಂಗ್ ಪಾಸ್‌ಗಳಿದ್ದರೆ ಅವುಗಳನ್ನು ಹಿಂದಕ್ಕೆ ಪಡೆದುಕೊಳ್ಳಲಾಗುವುದು ಈ ಮೊದಲು ವಿಮಾನಯಾನ ಸಂಸ್ಥೆ ತಿಳಿಸಿತ್ತು.

ಏರ್ ಇಂಡಿಯಾ ಪೈಲಟ್ ಮತ್ತು ಸಿಬ್ಬಂದಿಗೆ 'ಜೈ ಹಿಂದ್' ಹೇಳಲು ಆದೇಶಏರ್ ಇಂಡಿಯಾ ಪೈಲಟ್ ಮತ್ತು ಸಿಬ್ಬಂದಿಗೆ 'ಜೈ ಹಿಂದ್' ಹೇಳಲು ಆದೇಶ

'ಪ್ರಧಾನಿ ನರೇಂದ್ರ ಮೋದಿ ಮತ್ತು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಅವರ ಫೋಟೊಗಳನ್ನು ಒಳಗೊಂಡಿದ್ದ ವೈಬ್ರಂಟ್ ಗುಜರಾತ್ ಜಾಹೀರಾತನ್ನು ಮುದ್ರಿಸಿರುವ ಟಿಕೆಟ್‌ಗಳನ್ನು ಹಿಂದಕ್ಕೆ ಪಡೆದುಕೊಳ್ಳಲು ನಿರ್ಧರಿಸಿದ್ದೇವೆ' ಎಂದು ಏರ್ ಇಂಡಿಯಾ ವಕ್ತಾರ ಧನಂಜಯ್ ಕುಮಾರ್ ತಿಳಿಸಿದ್ದಾರೆ.

Air India withdraws boarding pass with PM narendra modis photo

ಪಂಜಾಬ್ ಮಾಜಿ ಡಿಜಿಪಿ ಶಶಿಕಾಂತ್ ಅವರು ಮೋದಿ ಮತ್ತು ರೂಪಾಣಿ ಅವರ ಚಿತ್ರವಿರುವ ಬೋರ್ಡಿಂಗ್ ಪಾಸ್ ಅನ್ನು ನವದೆಹಲಿ ವಿಮಾನ ನಿಲ್ದಾಣದಲ್ಲಿ ಟ್ವೀಟ್ ಮಾಡಿದ್ದಾರೆ.

ಏ.5 ರಂದೇ ನರೇಂದ್ರ ಮೋದಿ ಚಿತ್ರ ತೆರೆಗೆ, ಟ್ರೈಲರ್ ಇಲ್ಲಿದೆ ನೋಡಿ! ಏ.5 ರಂದೇ ನರೇಂದ್ರ ಮೋದಿ ಚಿತ್ರ ತೆರೆಗೆ, ಟ್ರೈಲರ್ ಇಲ್ಲಿದೆ ನೋಡಿ!

'2019ರ ಮಾರ್ಚ್ 25ರ ಇಂದು, ನನ್ನ ಬೋರ್ಡಿಂಗ್ ಪಾಸ್‌ನಲ್ಲಿ ನರೇಂದ್ರ ಮೋದಿ, ವೈಬ್ರಂಟ್ ಗುಜರಾತ್ ಮತ್ತು ವಿಜಯ್ ರೂಪಾಣಿ ಚಿತ್ರಗಳು ಕಣ್ಣಿಗೆ ರಾಚಿದವು. ಬೋರ್ಡಿಂಗ್ ಪಾಸ್‌ನ ಚಿತ್ರ ಕೆಳಗಿದೆ. ನೋಡದ, ಕೇಳದ ಅಥವಾ ಮಾತನಾಡದ ಈಗ ಚುನಾವಣಾ ಆಯೋಗದ ಮೇಲೆ ಏಕೆ ನಾವು ಸಾರ್ವಜನಿಕ ಹಣವನ್ನು ವ್ಯಯಿಸುತ್ತಿದ್ದೇವೆ ಎನ್ನುವುದು ಅಚ್ಚರಿಯಾಗುತ್ತಿದೆ' ಎಂಬುದಾಗಿ ಅವರು ಹೇಳಿದ್ದಾರೆ.

ರೈಲ್ವೆ ಟಿಕೆಟ್‌ಗಳಲ್ಲಿ ಪ್ರಧಾನಿ ಮೋದಿ ಅವರ ಚಿತ್ರ ಇರುವುದರ ವಿರುದ್ಧ ತೃಣಮೂಲ ಕಾಂಗ್ರೆಸ್ ಮಾರ್ಚ್ 20ರಂದು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಮೋದಿ ಚಿತ್ರ ಇರುವ ಟಿಕೆಟ್ ವಿವಾದ ಕೆರಳಿಸಿದ್ದರಿಂದ ಹಿಂದಕ್ಕೆ ಪಡೆದುಕೊಳ್ಳಲಾಗಿತ್ತು.

English summary
Air India has decided to withdrawn the boarding pass featuring the photographs of PM Narendra Modi, Gujarat CM Vijay Rupani along with Vibrand Gujarat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X