ಸಸ್ಯಾಹಾರಕ್ಕೆ ಶರಣಾದ ಏರ್ ಇಂಡಿಯಾ!

Posted By:
Subscribe to Oneindia Kannada

ನವದೆಹಲಿ, ಡಿಸೆಂಬರ್ 26 : ದೇಶಿಯ ವಿಮಾನ ಪ್ರಯಾಣದ ವೇಳೆ ಸಸ್ಯಾಹಾರವನ್ನು ಮಾತ್ರ ನೀಡಲು ಏರ್ ಇಂಡಿಯಾ ನಿರ್ಧರಿಸಿದೆ. ಜನವರಿ 1ರಿಂದ 61 ರಿಂದ 90 ನಿಮಿಷಗಳ ಪ್ರಯಾಣದ ವೇಳೆ ಸಸ್ಯಾಹಾರವನ್ನು ಮಾತ್ರ ನೀಡಲಾಗುತ್ತದೆ ಎಂದು ಏರ್ ಇಂಡಿಯಾ ಸುತ್ತೋಲೆ ಹೊರಡಿಸಿದೆ.

ಏರ್ ಇಂಡಿಯಾದ ಸುತ್ತೋಲೆ ಪ್ರಕಾರ ಜನವರಿ 1ರಿಂದ ವಿಮಾನದ ಎಕಾನಮಿ ದರ್ಜೆಯಲ್ಲಿ 61 ರಿಂದ 90 ನಿಮಿಷದ ಅವಧಿಯ ಪ್ರಯಾಣಕ್ಕೆ ಸಸ್ಯಾಹಾರವನ್ನು ಮಾತ್ರ ಒದಗಿಸಲಾಗುತ್ತದೆ. ಪ್ರಯಾಣಿಕರು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಲಾಗಿದೆ. [ಏರ್ ಇಂಡಿಯಾದಲ್ಲೂ ನಿಮಗೆ ಬೇಕಾದ ಊಟ ಆರ್ಡರ್ ಮಾಡಿ]

airindia

ಟೇಕಾಫ್ ಮತ್ತು ವಿಮಾನ ಲ್ಯಾಂಡ್ ಆಗುವ ವೇಳೆ ಆಹಾರವನ್ನು ಪೂರೈಸಲಾಗುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ಊಟದ ಸಮಯದಲ್ಲಿ ಕಾಫಿ ಮತ್ತು ಟೀ ಯನ್ನು ಪ್ರಯಾಣಿಕರಿಗೆ ನೀಡುವುದಿಲ್ಲ ಎಂದು ಏರ್ ಇಂಡಿಯಾ ಸ್ಪಷ್ಟಪಡಿಸಿದೆ. [ಹಲವು ವರ್ಷಗಳ ನಂತರ ಏರ್ ಇಂಡಿಯಾಕ್ಕೆ ಬಂತು ಲಾಭ]

ಅತಿ ಕಡಿಮೆ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗೆ ಅನುಗುಣವಾಗಿ ಆಹಾರ ಪೂರೈಕೆ ಮಾಡಲು ಸಾಧ್ಯವಿಲ್ಲ. ಮಾಂಸಹಾರಿಗಳು ಸಸ್ಯಹಾರ ಸೇವಿಸಬಹುದು. ಆದರೆ, ಸಸ್ಯಹಾರಿಗಳು ಮಾಂಸಹಾರ ಸೇವಿಸುವುದಿಲ್ಲ. ಆದ್ದರಿಂದ ಸಸ್ಯಾಹಾರ ಪೂರೈಕೆ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.

ಒಂದು ಗಂಟೆಯಿಂದ ಒಂದೂವರೆ ಗಂಟೆಯೊಳಗಿನ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರಿಗೆ ತಂಪಾದ ಸಸ್ಯಾಹಾರ ತಿನಿಸುಗಳನ್ನು ನೀಡಲಾಗುತ್ತಿದೆ. ಇನ್ನು ಮುಂದೆ ಇದರ ಬದಲಿಗೆ ಬಿಸಿಯಾದ ಸಸ್ಯಾಹಾರಿ ಊಟ ಪೂರೈಸಲಾಗುತ್ತದೆ ಎಂದು ಏರ್‌ ಇಂಡಿಯಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಶ್ವನಿ ಲೋಹನಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Air India will be serving hot vegetarian meals on their 60 to 90 minutes domestic flights from January 1, 2016.
Please Wait while comments are loading...