ರಷ್ಯಾದಿಂದ ನಾಳೆ ಅಮೆರಿಕ ತಲುಪುತ್ತಾ ಭಾರತದ ವಿಮಾನ?

ನವದೆಹಲಿ: ದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ 216 ಪಯಾಣಿಕರು ಹಾಗೂ 16 ಸಿಬ್ಬಂದಿ ಹೊತ್ತು ಹೊರಟಿದ್ದ ವಿಮಾನ ರಷ್ಯಾದಲ್ಲಿ ತುರ್ತು ಭೂಸ್ಪರ್ಷ ಮಾಡಿತ್ತು. ಈ ಹಿನ್ನೆಲೆ ಬೇರೆ ವಿಮಾನ ಮೂಲಕ ಪ್ರಯಾಣಿಕರನ್ನ ಏರ್‌ಲಿಫ್ಟ್ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಅಲ್ಲದೆ ಪ್ರಯಾಣಿಕರಿಗೆ ಬೇಕಾದ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.

ಇಂಜಿನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದ ತಕ್ಷಣ ರಷ್ಯಾದ ಮಗಡನ್ ಪ್ರದೇಶದಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತ್ತು. ಈ ಘಟನೆಯಿಂದಾಗಿ ಪ್ರಯಾಣಿಕರು ಕೂಡ ಸ್ವಲ್ಪ ಗಾಬರಿ ಆಗಿದ್ದರು. ಆದರೆ ಸೂಕ್ತ ವ್ಯವಸ್ಥೆ ಕಲ್ಪಿಸಿ, ಬೇರೆ ವಿಮಾನವನ್ನು ಹೊಂದಿಸಿ ರಷ್ಯಾದಲ್ಲಿರುವ ಪ್ರಯಾಣಿಕರನ್ನ ಗುರಿ ತಲುಪಿಸಲು ಏರ್ ಇಂಡಿಯಾ ಸಂಸ್ಥೆ ಈಗ ಮುಂದಾಗಿದೆ. ಈಗಾಗಲೇ ಪ್ರಯಾಣಿಕರಿಗೆ ಅಗತ್ಯ ಇರುವ ಸಾಮಗ್ರಿಗಳನ್ನ ರಷ್ಯಾಗೆ ರವಾನಿಸಲು ವ್ಯವಸ್ಥೆ ಮಾಡಲಾಗಿದೆ (Air India). ಎಲ್ಲವೂ ಅಂದುಕೊಂಡಂತೆ ನಡೆದರೆ ನಾಳೆಯೇ ಪ್ರಯಾಣಿಕರು ಅಮೆರಿಕ ತಲುಪುವ ಸಾಧ್ಯತೆ ಕೂಡ ಇದೆ.

Air India arranging basic needs to their passenger in russia

ನಾಳೆ ಸ್ಯಾನ್ ಫ್ರಾನ್ಸಿಸ್ಕೋಗೆ ಪ್ರಯಾಣ?

ಏರ್ ಇಂಡಿಯಾ ಸಂಸ್ಥೆ ಬೇರೆ ವಿಮಾನದ ವ್ಯವಸ್ಥೆ ಮಾಡಿ ತನ್ನ ಪ್ರಯಾಣಿಕರನ್ನ ಸ್ಯಾನ್ ಫ್ರಾನ್ಸಿಸ್ಕೋಗೆ ತಲುಪಿಸಲಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ನಾಳೆಯೇ ರಷ್ಯಾದಿಂದ ಪ್ರಯಾಣಿಕರನ್ನ ಸ್ಯಾನ್ ಫ್ರಾನ್ಸಿಸ್ಕೋಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ. ಮತ್ತೊಂದ್ಕಡೆ ಈ ಕ್ಷಣಕ್ಕೆ ಪ್ರಯಾಣಿಕರಿಗೆ ಅಗತ್ಯ ಇರುವ ವಸ್ತುಗಳನ್ನ ಪೂರೈಸುವಂತೆ ಒತ್ತಾಯ ಕೂಡ ಕೇಳಿ ಬರುತ್ತಿದೆ. ಹೀಗಾಗಿ ಮೊದಲು ಪ್ರಯಾಣಿಕರಿಗೆ ಬೇಕಿರುವ ಆಹಾರ ಹಾಗೂ ವಸ್ತುಗಳನ್ನು ಏರ್ ಇಂಡಿಯಾ ಪೂರೈಕೆ ಮಾಡಲಿದೆ.

ಪ್ರಯಾಣಿಕರಿಗೆ ವಸತಿ, ಆಹಾರದ ಸಮಸ್ಯೆ?

ದಿಢೀರ್ ಯಾವುದೋ ದೇಶದಲ್ಲಿ ಇಳಿದ ಪರಿಣಾಮ ಪ್ರಯಾಣಿಕರು ಪರದಾಡಿಬಿಟ್ಟರು. ಈ ವೇಳೆ ಪ್ರಮುಖವಾಗಿ ಎದುರಾದ ಸಮಸ್ಯೆ ಆಹಾರದ್ದು. ಮಹಿಳೆಯರು, ಮಕ್ಕಳು, ವೃದ್ಧರಿಗೆ ನೆಲದ ಮೇಲೆ ಮಲಗಲು ವ್ಯವಸ್ಥೆ ಮಾಡಲಾಗಿದೆ ಅನ್ನೋ ಆರೋಪ ಕೂಡ ಕೇಳಿಬಂದಿದೆ ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ಕೆಲ ವಿಡಿಯೋಗಳು ಕೂಡ ಹರಿದಾಡುತ್ತಿವೆ. ಆದರೆ ಈ ಎಲ್ಲ ಸಮಸ್ಯೆ ಅರಿತು ಏರ್ ಇಂಡಿಯಾ ಸಂಸ್ಥೆ ಈಗ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

Air India arranging basic needs to their passenger in russia

ಕೆಲಸಕ್ಕೆ ಹೊರಟಿದ್ದವರು ಲಾಕ್?

ಕೆಲವರದ್ದು ಕಾಲೇಜ್ ಇತ್ತು, ಇನ್ನೂ ಕೆಲವರು ಕೆಲಸದ ಮೇಲೆ ಅಮೆರಿಕಗೆ ಹೊರಟಿದ್ರು. ಆದರೆ ವಿಮಾನದ ತಾಂತ್ರಿಕ ದೋಷ ಅವರ ಪ್ಲ್ಯಾನ್ ಹಾಳು ಮಾಡಿದೆ. ಹೀಗಾಗಿ ರಷ್ಯಾ ನೆಲದಲ್ಲಿ ಕುಳಿತು ಭಾರತೀಯ ಪ್ರಯಾಣಿಕರು ಚಿಂತಿಸುತ್ತಿದ್ದಾರೆ. ಕೆಲಸಗಳಿಗೆ ತೆರಳಬೇಕಿದ್ದ ಉದ್ಯೋಗಿಗಳು ಕೂಡ ಆದಷ್ಟು ಬೇಗ ನಮ್ಮ ಜಾಗ ತಲುಪಿದರೆ ಸಾಕು ಅನ್ನುವಂತಾಗಿದೆ. ಸ್ಥಳೀಯವಾಗಿ ಎಲ್ಲಿ ಸಾಧ್ಯವೋ ಅಲ್ಲಿ ಪ್ರಯಾಣಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗಿದ್ದು. ಇನ್ನೇನು ನಾಳೆ ಒಳಗೆ ಸಮಸ್ಯೆ ಬಗೆಹರಿಯುವ ಸಾಧ್ಯತೆ ಇದೆ.

ಎಲ್ಲವನ್ನೂ ಗಮನಿಸುತ್ತಿದೆ ಅಮೆರಿಕ!

ರಷ್ಯಾ ಮತ್ತು ಅಮೆರಿಕ ಶತ್ರುಗಳು. ಅದರಲ್ಲೂ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ನಂತರ ಎರಡೂ ದೇಶಗಳ ನಡುವೆ ಕಿರಿಕ್ ಜೋರಾಗಿದೆ. ಹೀಗಿದ್ದಾಗ ದಿಢೀರ್ ಅಮೆರಿಕಗೆ ತೆರಳಬೇಕಿದ್ದ ವಿಮಾನ, ತಾಂತ್ರಿಕ ದೋಷದ ಕಾರಣ ರಷ್ಯಾಗೆ ತೆರಳಿದೆ. ಹೀಗಾಗಿ ಅಮೆರಿಕ ಕೂಡ ಘಟನೆಯನ್ನ ಸೂಕ್ಷ್ಮವಾಗಿ ಗಮನಿಸುತ್ತಿದೆ ಎನ್ನಲಾಗಿದೆ. ಆದರೆ ಪ್ರಯಾಣಿಕರು ಈ ಜಾಗದಿಂದ ಮೊದಲು ನಮ್ಮ ಸ್ಥಳ ತಲುಪಿದರೆ ಸಾಕಪ್ಪಾ ಅಂತಾ ದೇವರ ಮೊರೆ ಹೋಗ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+