ಭಾರತೀಯ ಸೇನಾಪಡೆಗೆ ಶೀಘ್ರದಲ್ಲೇ ಎಸಿ ಜಾಕೆಟ್: ಪರಿಕ್ಕರ್

Posted By:
Subscribe to Oneindia Kannada

ಪಣಜಿ, ಆಗಸ್ಟ್ 20 : ಭಾರತೀಯ ವಿಶೇಷ ಸೇನಾಪಡೆ ಯೋಧರಿಗೆ ಶೀಘ್ರದಲ್ಲಿಯೇ ಎಸಿ ಜಾಕೆಟ್ ಗಳನ್ನು ನೀಡಲಾಗುತ್ತದೆ ಎಂದು ಮಾಜಿ ಕೇಂದ್ರ ರಕ್ಷಣಾ ಸಚಿವ ಹಾಗೂ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಹೇಳಿದ್ದಾರೆ.

'ಕರ್ನಾಟಕದಿಂದ ಬೀಫ್ ತರಿಸ್ತೀನಿ': ಪರಿಕ್ಕರ್ ರಾಜೀನಾಮೆಗೆ VHP ಆಗ್ರಹ

ಭಾನುವಾರ ಖಾಸಗಿ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿರುವ ಅವರು, ವಿಶೇಷ ಕಾರ್ಯಾಚರಣೆ ಪಡೆಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸಲು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕಾರ್ಯಾಚರಣೆ ವೇಳೆ ಯೋಧರ ದೇಹ ಬಿಸಿಯಾಗುತ್ತದೆ. ಈ ವೇಳೆ ಅವರಿಗೆ ಏರ್ ಕಂಡೀಷನ್ ಜಾಕೆಟ್ ಗಳನ್ನು ನೀಡಿದರೆ ಹಿತಕರವನೆಸುತ್ತದೆ ಎಂದು ಅವರು ಹೇಳದರು.

Air-Conditioned Jackets For Indian Special Forces Soon: Manohar Parrikar

ಇದೇ ವೇಳೆ ಸ್ವದೇಶಿ ನಿರ್ಮಿತ ಯುದ್ಧ ವಿಮಾನ ತೇಜಸ್ ಕುರಿತಂತೆ ಮಾತನಾಡಿರುವ ಅವರು, ಸ್ವದೇಶಿ ನಿರ್ಮಿತ ಯುದ್ಧ ವಿಮಾನ ಹಗುರ ವಿಮಾನವಾಗಿದ್ದು, 3.5 ಟನ್ ರಷ್ಟು ಪೇಲೋಡ್ ನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದು, ಈ ವೈಶಿಷ್ಟ್ಯ ವಿಮಾನವನ್ನು ಸ್ವದೇಶದಲ್ಲಿಯೇ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Trials for introducing air-conditioned jackets for the Indian Special Forces soldiers are on, former Defence Minister and Goa Chief Minister Manohar Parrikar has said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ