Haryana Election 2024: ಕಾಂಗ್ರೆಸ್ 3ನೇ ಪಟ್ಟಿ ಬಿಡುಗಡೆ, ವಿನೇಶ್ ಪೋಗಟ್ ನಾಮಪತ್ರ ಸಲ್ಲಿಕೆ
ಹರಿಯಾಣ, ಸೆಪ್ಟಂಬರ್ 12: ದೇಶದಲ್ಲಿ ಮೂರು ವಿಧಾನಸಭಾ ಚುನಾವಣೆಗಳತ್ತ ರಾಜಕೀಯ ಪಕ್ಷಗಳು ಗಮನ ನೆಟ್ಟಿವೆ. ಈ ಪೈಕಿ ಹರಿಯಾಣದಲ್ಲಿನ 90 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇದುವರೆಗೆ ಮೂರು ಪಟ್ಟಿ ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಗುರುವಾರ ನಾಲ್ಕನೇ ಪಟ್ಟಿ ಪ್ರಕಟಿಸಿದೆ. ಇದರಿಂದ ಮತ್ತೆ ಐದು ಮಂದಿ ನಾಯಕರು ಟಿಕೆಟ್ ಸಿಕ್ಕಂತಾಗಿದೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಅವರು, ಅಂಬಲಾ ಕ್ಯಾಂಟ್ ಕ್ಷೇತ್ರದ ಟಿಕೆಟ್ ಪರಿಮಳ ಪರಿ ಅವರಿಗೆ, ಪಾಣಿಪತ್ ಗ್ರಾಮಾಂತರ ಟಿಕೆಟ್ ಸಚಿನ್ ಕುಂದು ಅವರಿಗೆ ನೀಡಿದೆ. ನರ್ವಾನಾ (ಎಸ್‌ಸಿ) ಕ್ಷೇತ್ರದಿಂದ ಸತ್ಬೀರ್ ದುಬ್ಲೇನ್, ರಾನಿಯಾದಿಂದ ಸರ್ವ ಮಿತ್ರ ಕಾಂಬೋಜ್ ಹಾಗೂ ಟಿಗಾಂವ್‌ನಿಂದ ರೋಹಿತ್ ನಗರ್ ಅವರನ್ನು ಕಣಕ್ಕೆ ಇಳಿಸಿ ಪಟ್ಟಿ ಬಿಡುಗಡೆ ಮಾಡಿದೆ.

ಮೂರನೇ ಪಟ್ಟಿಯಲ್ಲಿ ಅನೇಕರಿಗೆ ಟಿಕೆಟ್ ಭಾಗ್ಯ
ಹರಿಯಾಣ ಕ್ಷೇತ್ರದಲ್ಲಿ ಈ ಭಾರಿ ಎಎಪಿ, ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಹಣಾಹಣಿ ಏರ್ಪಡಲಿದೆ. ಇನ್ನೂ ಕಳೆದ ಭಾರಿ ಬಿಡುಗಡೆ ಮಾಡಿದ್ದ ಮೂರನೇ ಪಟ್ಟಿಯಲ್ಲಿ ಚಂದರ್ ಮೋಹನ್ (ಪಂಚಕುಲ ಕ್ಷೇತ್ರ), ನಿರ್ಮಲ್ ಸಿಂಗ್ (ಅಂಬಾಲ ಕ್ಷೇತ್ರ), ಪೂಜಾ ಚೌಧರಿ (ಮೌಲಾನಾ), ಜಗದೀಶ್ ಯಾದವ್ (ಕೋಸ್ಲಿಯಿಂದ) ಹಾಗೂ ಲಖನ್ ಕುಮಾರ್ ಸಿಂಗ್ಲಾ (ಫರಿದಾಬಾದ್ ಕ್ಷೇತ್ರ), ಅಕ್ರಮ್ ಖಾನ್ (ಜಗದ್ರಿ), ರಾಹುಲ್ ಮಕ್ಕರ್ (ಹಂಸಿ) ಮತ್ತು ಮನೀಶಾ ಸಾಂಗ್ವಾನ್ (ದಾದ್ರಿ ಕ್ಷೇತ್ರ) ಅವರಿಗೆ ಟಿಕೆಟ್ ಘೋಷಣೆ ಮಾಡಿದೆ.
ಇನ್ನೂ ಥಾನೇಸರ್‌ನಿಂದ ಅಶೋಕ್ ಅರೋರಾ, ಉಚ್ಚನ ಕಲಾನ್‌ನಿಂದ ಬ್ರಿಜೇಂದ್ರ ಸಿಂಗ್, ಗನೌರ್‌ನಿಂದ ಕುಲದೀಪ್ ಶರ್ಮಾ ಹಾಗೂ ತೋಹಾನಾದಿಂದ ಪರಮವೀರ್ ಸಿಂಗ್ ಅವರನ್ನು ಕಾಂಗ್ರೆಸ್ ಸ್ಪರ್ಧೆಗೆ ಇಳಿಸುವ ಮೂಲಕ ಪ್ರತಿ ಪಕ್ಷಗಳಿಗೆ ಪ್ರಬಲ ಸ್ಪರ್ಧೆ ಒಡ್ಡಲು ಪ್ಲಾನ್ ಮಾಡಿಕೊಂಡಿದೆ.

ವಿನೇಶ್ ಪೋಗಟ್ ನಾಮಪತ್ರ ಸಲ್ಲಿಕೆ
ಇತ್ತೀಚೆಗೆ ಕುಸ್ತಿ ಫೈನಲ್ ಪ್ರವೇಶದಿಂದ ಹೊರಗುಳಿದ ಮಾಜಿ ಕುಸ್ತಿಪಟು ವಿನೇಶ್ ಪೋಗಟ್ ಅವರನ್ನು ಜೂಲಾನಾ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರು ಗುರುವಾರ ಹರಿಯಾಣದಲ್ಲಿ ನಾಮಪತ್ರ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷ ಸೇರುವ ಮೂಲಕ ರಾಜಕೀಯ ಪ್ರವೇಶ ಮಾಡಿರುವ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ನಾಮಪತ್ರ ಸಲ್ಲಿಕೆಗೆ ವೇಳೆ ಕಾಂಗ್ರೆಸ್ ಸಂಸದ ದೀಪೇಂದರ್ ಹೂಡಾ, ಕಾಂಗ್ರೆಸ್ ರಾಜ್ಯ ನಾಯಕರು, ಕಾರ್ಯಕರ್ತರು, ಬೆಂಬಲಿಗುರ ಸಾಥ್ ನೀಡಿದರು. ಕ್ಷೇತ್ರದ ಜನರಿಗೆ ಶ್ರಮಿಸುವೆ, ನಿಮ್ಮ ಪ್ರೀತಿ ಪಾತ್ರಕ್ಕೆ ಧನ್ಯವಾದ, ಎಲ್ಲ ವರ್ಗದವರ ಕಲ್ಯಾಣಕ್ಕೆ ಇರುವ ಪಕ್ಷದ ಬದ್ಧತೆ ಕುರಿತು ಅವರು ತಿಳಿಸಿದರು.
ನನ್ನ ರಾಜಕೀಯ ಪ್ರವೇಶ ಒಂದು ರೀತಿಯಲ್ಲಿ ನನಗೆ ಸಿಕ್ಕ ಅದೃಷ್ಟ. ಜುಲಾನಾ ಕ್ಷೇತ್ರದ ಜನರು ನನಗೆ ನೀಡುತ್ತಿರುವ ಪ್ರೀತಿ ನಾನು ಹೆಚ್ಚು ಆಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಪೋಗಟ್ ವಿರುದ್ಧ ಯೋಗೀಶ್ ಬೈರಾಗಿ ಕಣಕ್ಕೆ
ಪ್ಯಾರಿಸ್ ಒಲಂಪಿಕ್ ವೇಳೆ ಸೆಪ್ಟೆಂಬರ್ 6 ರಂದು ಕುಸ್ತಿಪಟು ಬಜರಂಗ್ ಪೂನಿಯಾ ಅವರೊಂದಿಗೆ ವಿನೇಶ್ ಫೋಗಟ್ ಕಾಂಗ್ರೆಸ್ ಸೇರಿದರು. ಇದರಿಂದ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ. ಇನ್ನು ಜುಲಾನಾ ಕ್ಷೇತ್ರದಲ್ಲಿ ಪೋಗಟ್ ವಿರುದ್ಧ ಬಿಜೆಪಿಯು ಕ್ಯಾಪ್ಟನ್ ಯೋಗೀಶ್ ಬೈರಾಗಿ ಅವರನ್ನು ಕಣಕ್ಕಿಳಿಸಿದ್ದು, ಇಲ್ಲಿ ತೀವ್ರ ಪೈಪೋಟಿಗೆ ಉಂಟಾಗಲಿದೆ. ಈ ಭಾರಿ ಚುನಾವಣೆಯಲ್ಲಿ ಜುಲಾನಾ ಬಿಂದು ಕ್ಷೇತ್ರವಾಗಲಿದೆ. ರಾಜ್ಯದಲ್ಲಿ 90 ಸೀಟುಗಳಿದ್ದು, ಅಧಿಕಾರಕ್ಕೆ ಬರಲು ಮ್ಯಾಜಿಕ್ ನಂಬರ್ 46 ಸೀಟು ಗೆಲ್ಲಬೇಕಿದೆ.












Click it and Unblock the Notifications