Get Updates
Get notified of breaking news, exclusive insights, and must-see stories!

Ahmedabad Plane Crash: ಅಹಮದಬಾದ್‌ ವಿಮಾನ ಪತನ; ಬ್ಲ್ಯಾಕ್‌ ಬಾಕ್ಸ್‌ ನಾಶವಾಗಲ್ಲ ಯಾಕೆ? ಹಾಗೂ ಏನಿದರ ಕೆಲಸ ತಿಳಿಯಿರಿ

Ahmedabad Plane Crash: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ AI-171 ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಗುರುವಾರ (ಜೂನ್‌ 12) ಪತನ ಆಗಿದೆ. ಇದರಲ್ಲಿ 242 ಜನ ಪ್ರಯಾಣ ಮಾಡುತ್ತಿದ್ದು, ಇದು ಇಡೀ ದೇಶವನ್ನೇ ಬೆಚ್ಚಿಬಿಳಿಸಿದ ಅತೀ ದೊಡ್ಡ ದುರಂತವಾಗಿದೆ. ಈ ಘಟನೆ ನಡೆದ ಬಳಿಕ ಇದೀಗ ಬ್ಲ್ಯಾಕ್‌ ಬಾಕ್ಸ್‌ನ ಪಾತ್ರ ಮುನ್ನಲೆಗೆ ಬಂದಿದೆ. ಹಾಗಾದ್ರೆ ಇದೇನು ಹಾಗೂ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ವಿಮಾನ ಪತನವಾಗುತ್ತಿದ್ದಂತೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಿಂದ ಆಕಾಶದೆತ್ತರಕ್ಕೆ ದಟ್ಟ ಹೊಗೆ ಆವರಿಸುತ್ತಿರುವುದು ಕಂಡುಬಂದಿದೆ. ಟೇಕ್ ಆಫ್ ಆದ ತಕ್ಷಣವೇ ಏರ್ ಇಂಡಿಯಾ ವಿಮಾನ ಪತನ ಆಗಿರುವ ಘಟನೆ ಅಹಮದಾಬಾದ್‌ನ . ಮೇಘನಿ ನಗರ್ ಬಳಿ ನಡೆದಿದೆ

Ahmedabad Plane Crash How the Black Box Work know details

ಇನ್ನು ಈ ವಿಮಾನದಲ್ಲಿ 12ನೇ ನಂಬರ್ ಸೀಟ್‌ನಲ್ಲಿ ಕುಳಿತುಕೊಂಟಿದ್ದ ಗುಜರಾತ್​​ ಮಾಜಿ ಸಿಎಂ ವಿಜಯ್ ರೂಪಾನಿ ಸೇರಿ ಒಟ್ಟು 242 ಪ್ರಯಾಣಿಕರು ಇದ್ದು, ಈ ಪೈಕಿ 230 ಪ್ರಯಾಣಿಕರು, 12 ಮಂದಿ ಏರ್ ಇಂಡಿಯಾ ಸಿಬ್ಬಂದಿ ಇದ್ದರು.
242 ಪ್ರಯಾಣಿಕರಲ್ಲಿ 169-ಭಾರತೀಯರು, 53-ಬ್ರಿಟನ್, 1-ಕೆನಡಾ, ಪೋರ್ಚುಗಲ್‌ ಪ್ರಜೆಗಳು ಸಹ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಈ ದುರಂತದ ಬೆನ್ನಲ್ಲೇ ಬ್ಲ್ಯಾಕ್‌ ಬಾಕ್ಸ್‌ ಭಾರೀ ಚರ್ಚೆಗೆ ಕಾರಣವಾಗಿದೆ.

ಬ್ಲ್ಯಾಕ್‌ ಬಾಕ್ಸ್‌ನ ಪಾತ್ರವೇನು?: ಯಾವುದೇ ವಿಮಾನ ಅಥವಾ ಹೆಲಿಕಾಪ್ಟರ್‌ ಪತನ ಆದರೂ ಈ ತನಿಖೆಯಲ್ಲಿ ಬ್ಲ್ಯಾಕ್‌ ಬಾಕ್ಸ್‌ ಪ್ರಮುಖ ಪಾತ್ರ ವಹಿಸುತ್ತದೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಕಾರ್ಯಚಟುವಟಿಕೆಗಳನ್ನು ದಾಖಲು ಮಾಡುತ್ತದೆ. ಆದ್ದರಿಂದ ಎಲ್ಲಾ ರೀತಿಯ ವಿಮಾನಗಳಲ್ಲೂ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಕೆ ಮಾಡಲಾಗುತ್ತದೆ.

ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಕೆ ಮಾಡಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ಬ್ಲ್ಯಾಕ್ ಬಾಕ್ಸ್ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನ ದತ್ತಾಂಶಗಳ ಸಂಗ್ರಹ ಅಂತಲೂ ಕರೆಯಲಾಗುತ್ತದೆ. ವಿಮಾನ ಅಪಘಾತಕ್ಕೆ ಒಳಗಾದಾಗ ಅದಕ್ಕೆ ಸೂಕ್ತ ಕಾರಣ ಏನೆಂದು ಪತ್ತೆ ಹಚ್ಚಲು ನೆರವು ಆಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಕೆ ಮಾಡಲಾಗುತ್ತದೆ.

ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇರಿಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿರುತ್ತದೆ. ಇದು ಸಮುದ್ರದಲ್ಲಿ ಬಿದ್ದರೆ ಹಾಗೂ ಎಷ್ಟೇ ಎತ್ತರದಿಂದ ಬಿದ್ದರೂ ಕೂಡ ಯಾವುದೇ ನಾಶವಾಗುವುದಿಲ್ಲ. ಅಂತಹ ಶಕ್ತಿಯನ್ನು ಇದು ಒಳಗೊಂಡಿದೆ.

ಅಪಘಾತದ ಸಂಭವಿಸಿದಾಗ ಹಿಂಭಾಗಕ್ಕೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಅಲ್ಲಿನ ಸ್ಥಳ ಎತ್ತರ ಆಗಿರುತ್ತದೆ. ಆದ್ದರಿಂದ ಈ ಭಾಗದಲ್ಲಿ ಪೆಟ್ಟಿಗೆಯನ್ನು ಅಳವಡಿಕೆ ಮಾಡಲಾಗುತ್ತದೆ. ವಿಮಾನದ ಇಂಜಿನ್‌ಗೆ ಜೋಡಿಸಲಾದ ಜನರೇಟರ್‌ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗಲಿದೆ.

ಫ್ಲೈಟ್ ಡೇಟಾ ರೆಕಾರ್ಡರ್ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ದತ್ತಾಂಶವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇದ್ದರೆ, 10 ಗಂಟೆಗಳ ಕಾಲ ದತ್ತಾಂಶವನ್ನು ಹಿಡಿದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ತಯಾರಿಸಲಾಗುತ್ತದೆ.

ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲು ಮಾಡುತ್ತದೆ. ಯಾವುದೇ ಅಪಘಾತ ನಡೆಯುವ ಮೊದಲು ಇಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ. ಇನ್ನು ಈ ಬ್ಲ್ಯಾಕ್‌ ಬಾಕ್ಸ್‌ ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಕೆಲಸ ನಿರ್ಬಹಿಸುತ್ತದೆ. ಪತ್ತೆ ಕಾರ್ಯ ಸುಲಭ ಆಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋ ಮೀಟರ್ ದೂರದಿಂದ ಗುರುತಿಸಬಹುದು. 14,000 ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ರವಾನಿಸುತ್ತಿರುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+