Ahmedabad Plane Crash: ಅಹಮದಬಾದ್‌ನಲ್ಲಿ ವಿಮಾನ ಪತನ; ಸಹಾಯವಾಣಿ ಬಿಡುಗಡೆ ಮಾಡಿದ ಏರ್ ಇಂಡಿಯಾ
Ahmedabad Plane Crash: ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ AI-171 ಏರ್ ಇಂಡಿಯಾ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂದು (ಜೂನ್ 12) ಪತನವಾಗಿದೆ. ಆದರೆ ಇದುವರೆಗೂ ಸಾವು-ನೋವುಗಳ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ, ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿಗಳನ್ನು ತೆರೆಯಲಾಗಿದೆ. ಸಂಪೂರ್ಣ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಪತನಗೊಂಡ ಏರ್ ಇಂಡಿಯಾ ವಿಮಾನದ ಪೈಲಟ್ 8,200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ತಿಳಿಸಿದೆ. ಲಂಡನ್‌ಗೆ ಹೊರಟ್ಟಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸಹಾಯವಾಣಿ ಸಂಖ್ಯೆಗಳ ವಿವರ: ಅಹಮದಾಬಾದ್‌ನಲ್ಲಿ ವಿಮಾನ ಅಪಘಾತದ ನಂತರ , ಏರ್ ಇಂಡಿಯಾ ಪ್ರಯಾಣಿಕರಿಗೆ ಸಹಾಯವಾಣಿಯನ್ನು ಸ್ಥಾಪಿಸಿದೆ. ಹೆಚ್ಚಿನ ಮಾಹಿತಿಗಾಗಿ1800 5691 444 ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಹಾಗೂ ಕಾನ್ಸುಲರ್ ಬೆಂಬಲವನ್ನು ಬಯಸುವ ಬ್ರಿಟನ್ ಪ್ರಜೆಗಳು 020 7008 5000 ಗೆ ಸಂಖ್ಯೆಗೆ ಸಂಪರ್ಕಿಸುವಂತೆ ಮನವಿ ಮಾಡಿದೆ.
ಅಹಮದಾಬಾದ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ ಸುಮಾರು 1.50ಕ್ಕೆ ಟೇಕಾಫ್ ಆಗಿದೆ. ವಿಮಾನದಲ್ಲಿ 2 ಪೈಲಟ್‌ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 242 ಜನ ಪ್ರಯಾಣ ಮಾಡುತ್ತಿದ್ದರು. ಪೈಲಟ್ ಕ್ಯಾಪ್ಟನ್ ಸುಮೀತ್ ಸಭರ್ವಾಲ್ 8,200 ಗಂಟೆಗಳ ಅನುಭವ ಹೊಂದಿದ್ದರೆ, ಸಹ-ಪೈಲಟ್ 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದರು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಏರ್ ಟ್ರಾಫಿಕ್ ಕಂಟ್ರೋಲ್ ಕರೆ ಬಂದಿದೆ. ಬಳಿಕ ಎಟಿಸಿ ಮಾಡಿದ ಕರೆಗಳಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.
ಘಟನೆಗೆ ಕಾರಣ ಏನು?: ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ವೇಳೆ ವಿಮಾನದ ಇಂಜಿನ್‌ಗೆ ಪಕ್ಷಿ ಬಡಿದ ಕಾರಣ ಈ ಘಟನೆ ಸಂಭವಿಸಿರುವ ಸಾಧ್ಯತೆಯಿದೆ ಎಂದು ಅನುಮಾನ ವ್ಯಕ್ತ ಆಗಿದೆ. ಟೇಕ್ ಆಫ್ ಆಗುವಾಗ ಇಂಜಿನ್‌ಗೆ ಪಕ್ಷಿ ಬಡಿದ ಕಾರಣ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ತಕ್ಷಣವೇ ತಗ್ಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಂದು ಇಂಜಿನ್‌ಗೆ ಪಕ್ಷಿ ಬಡಿದಾಗ ಏನು ಮಾಡಲಾಗುತ್ತದೆ?: ಸಾಮಾನ್ಯವಾಗಿ ವಿಮಾನದ ಒಂದು ಇಂಜಿನ್‌ಗೆ ಪಕ್ಷಿ ಬಡಿದರೆ ಇನ್ನೊಂದು ಇಂಜಿನ್ ಮೂಲಕ ಚಾಲನೆ ಮಾಡಿ ಹತ್ತಿರರ ನಿಲ್ದಾಣದಲ್ಲಿ ಪೈಲಟ್ ತುರ್ತು ಲ್ಯಾಂಡ್ ಮಾಡಲಾಗುತ್ತದೆ. ಆದರೆ ಇಲ್ಲಿ ಎರಡು ಇಂಜಿನ್‌ಗೆ ಪಕ್ಷಿ ಬಡಿದ ಹಿನ್ನೆಲೆ ವಿಮಾನ ವೇಗವನ್ನ ಕಳೆದುಕೊಂಡು ಪತನ ಹೊಂದಿರಲೂಬಹುದು ಎಂದು ಹಲವರು ಅನುಮಾನವನ್ನ ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಇಂಜಿನ್‌ಗೆ ಪಕ್ಷಿ ಬಡಿಯುವುದು ಬಲು ಅಪರೂಪ.
ಲ್ಯಾಂಡಿಂಗ್ ಗೇರ್ ಮೇಲಕ್ಕೆತ್ತುವ ಮೊದಲೇ ವಿಮಾನವನ್ನು ಕೆಳಗಿಳಿಯಲು ಆರಂಭಿಸಲಾಗಿತ್ತು. ವಿಮಾನದ ಇಂಜಿನ್ ಶಕ್ತಿಯನ್ನು ಕಳೆದುಕೊಂಡರೆ ಮಾತ್ರ ಹೀಗೆ ಆಗುತ್ತದೆ. ಆದರೆ, ತನಿಖೆಯಿಂದ ನಿಖರವಾದ ಕಾರಣ ತಿಳಿಯಬೇಕಿದೆ. ಇನ್ನು ಈ ವಿಮಾನದಲ್ಲಿದ್ದ 10 ಸಿಬ್ಬಂದಿ ಸೇರಿ, 242 ಜನರಿದ್ದರು. ಅದರಲ್ಲಿದ್ದ 110 ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.












Click it and Unblock the Notifications