ಬಂತು.. ಬಂತು.. 20 ವರ್ಷಗಳ ನಂತರ ಭಾರತಕ್ಕೆ ಬಂತು ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ!
ಭಾರತ ಬೆಳೆಯುತ್ತಿದೆ, ಹಾಗೇ ಭಾರತದ ಕ್ರೀಡಾ ಲೋಕ ಕೂಡ ಜಾಗತಿಕ ಮಟ್ಟದಲ್ಲಿ ಮಿರಮಿರ ಮಿಂಚಲು ಶುರು ಮಾಡಿದೆ. ಕ್ರಿಕೆಟ್ ಮಾತ್ರವಲ್ಲದೆ ಭಾರತದಲ್ಲಿ ಪ್ರತಿಯೊಂದು ಕ್ರೀಡೆಗೂ ಇದೀಗ ಮಹತ್ವ ನೀಡುತ್ತಿರುವ ಕಾರಣಕ್ಕೆ ಎಲ್ಲಾ ವಿಭಾಗದಲ್ಲೂ ಭಾರತದ ಕ್ರೀಡಾಪಟುಗಳು ಸಾಧನೆಯ ಹಾದಿ ತಲುಪಿದ್ದಾರೆ. ಅದರಲ್ಲೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ನಮ್ಮ ದೇಶದ ಸಾಧಕರು ಈಗ ಮಾಡುತ್ತಿರುವ ಸಾಧನೆ ಹೆಮ್ಮೆಯನ್ನೇ ತಂದಿದೆ. ಇಂತಹ ಸಮಯದಲ್ಲೇ, 20 ವರ್ಷಗಳ ನಂತರ ಭಾರತಕ್ಕೆ ಬಂತು ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ!
ಭಾರತದಲ್ಲಿ ಕ್ರೀಡೆಗೆ ಸಾಕಷ್ಟು ಮಹತ್ವ ಸಿಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ರೀತಿಯ & ಸಮಾನವಾದ ಕ್ರೀಡಾ ಆಸಕ್ತಿ ಬೆಳೆಯುತ್ತಿದೆ. ಇದರಿಂದ ಭಾರತದಲ್ಲಿ ಕ್ರೀಡೆಗೆ ದೊಡ್ಡ ಮಟ್ಟದ ಪ್ರೋತ್ಸಾಹ ಸಿಕ್ಕಂತೆ ಆಗುತ್ತಿದೆ. ಇಂತಹ ಖುಷಿ ಖುಷಿಯಾದ ಸಮಯದಲ್ಲೇ ಭಾರತಕ್ಕೆ ಬರೋಬ್ಬರಿ 20 ವರ್ಷಗಳ ನಂತರ ಒಲಿಂಪಿಕ್ ಸಮಾನವಾದ ಜಾಗತಿಕ ಕ್ರೀಡಾಕೂಟ ಎಂಟ್ರಿ ಕೊಡುತ್ತಿದೆ. ಈ ಕ್ರೀಡಾಕೂಟ ಬೇರೆ ಯಾವುದೂ ಅಲ್ಲ, ಕಾಮನ್‌ವೆಲ್ತ್ ಗೇಮ್ಸ್ ಆಗಿದೆ. ಅಂದಹಾಗೆ ಈಗ 2030ರ ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಮಾಡುವ ಹಕ್ಕು ಅಹ್ಮದಾಬಾದ್ ಪಾಲಾಗಿದೆ. ಈ ಮೂಲಕ ಹೊಸ ಇತಿಹಾಸವೇ ನಿರ್ಮಾಣವಾಗಿದೆ.

ಕಾಮನ್‌ವೆಲ್ತ್ ಸಭೆಯಲ್ಲಿ ಮಹತ್ವದ ನಿರ್ಧಾರ
ಭಾರತ 2010 ಕಾಮನ್‌ವೆಲ್ತ್ ಗೇಮ್ಸ್ ಆಯೋಜನೆ ಮಾಡಿತ್ತು ಅಲ್ಲದೆ ಈ ಕ್ರೀಡಾಕೂಟದಲ್ಲಿ ನಮ್ಮ ದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿ ಗಮನ ಕೂಡ ಸೆಳೆದಿದ್ದರು. ಹೀಗಿದ್ದಾಗ ಮತ್ತೊಮ್ಮೆ ಭಾರತಕ್ಕೆ ಕಾಮನ್‌ವೆಲ್ತ್ ಗೇಮ್ಸ್ ಎಂಟ್ರಿ ಕೊಟ್ಟಿರುವುದು ಭಾರಿ ಕೂತೂಹಲ ಕೆರಳಿಸಿದೆ. ಅಲ್ಲದೇ ಈ ಕ್ರೀಡಾಕೂಟ ಆಯೋಜನೆ ಭಾರತದ ಶಕ್ತಿಯನ್ನು ಮತ್ತೊಮ್ಮೆ ಇಡೀ ಪ್ರಪಂಚಕ್ಕೆ ಮನವರಿಕೆ ಕೂಡ ಮಾಡಿಕೊಡಲು ವೇದಿಕೆ ಕಲ್ಪಿಸಲಿದೆ. ಗ್ಲ್ಯಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದ ಸಾಮಾನ್ಯ ಸಭೆಯ ಸಂದರ್ಭದಲ್ಲಿ ಮಹತ್ವದ ನಿರ್ಧಾರವನ್ನ ಕೈಗೊಳ್ಳಲಾಗಿದ್ದು, 2030ರ ಕ್ರೀಡಾಕೂಟ ಆಯೋಜನೆ ಹಕ್ಕನ್ನು ಭಾರತಕ್ಕೆ ನೀಡಲಾಗಿದೆ.
ಒಟ್ನಲ್ಲಿ ಭಾರತ ಜಾಗತಿಕ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಈ ಸಮಯದಲ್ಲೇ, ಭಾರಿ ಮಹತ್ವದ ಕ್ರೀಡಾಕೂಟ ಕೂಡ ಭಾರತಕ್ಕೆ ಎಂಟ್ರಿ ಆಗುತ್ತಿದೆ. ಅಲ್ಲದೆ ಜಾಗತಿಕವಾಗಿ ಭಾರತ ತನ್ನ ಶಕ್ತಿ & ಸಾಮರ್ಥ್ಯ ತೋರಿಸಲು ಹೊಸ ವೇದಿಕೆ ಸೃಷ್ಟಿಯಾಗುತ್ತಿದೆ. ಹೀಗೆ ಭಾರತಕ್ಕೆ 2030ರ ಕಾಮನ್‌ವೆಲ್ತ್ ಕ್ರೀಡಾಕೂಟ ಆಯೋಜನೆ ಹಕ್ಕು ಸಿಕ್ಕಿರುವುದು ಮಿತ್ರ ರಾಷ್ಟ್ರಗಳಿಗೆ ಖುಷಿ ಕೊಟ್ಟಿದ್ದು, ಭಾರತಕ್ಕೆ ಶುಭ ಹಾರೈಸಿವೆ.












Click it and Unblock the Notifications