Video: ಇನ್ಸ್ಟಾಗ್ರಾಮ್ ರೀಲ್ ಮಾಡಿ 'ಪೊಲೀಸ್' ಕೆಲಸ ಕಳೆದುಕೊಂಡ 'ಮಹಿಳಾ ಪೇದೆ'

ಆಗ್ರಾ, ಅಕ್ಟೋಬರ್ 24: ಸಾಮಾಜಿಕ ಜಾಲತಾಣಗಳ ಅತೀವ ಬಳಕೆ ಇರುವ ಪ್ರಸ್ತುತ ಸನ್ನಿವೇಶದಲ್ಲಿ ರೀಲ್‌ ವಿಡಿಯೋಗಳು ಹೆಚ್ಚು ವೈರಲ್ ಆಗುತ್ತಿವೆ. ಈ ಪೈಕಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಮಾಡಿದ ರೀಲ್ ಅವರಿಗೇ ಸಂಕಷ್ಟ ತಂದೊಡ್ಡಿದೆ.

ಉತ್ತರ ಪ್ರದೇಶದ ಕಾನ್ಪುರದ ಮಹಿಳೆ ಪಿಂಕಿ ಮಿಶ್ರಾ (Priyanka Mishra) ಅವರು 2020 ರಲ್ಲಿ ಪೊಲೀಸ್ ಪಡೆಗೆ ಸೇರಿದ್ದರು. ಎಂಎಂ ಗೇಟ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲ್ಪಟ್ಟಿದ್ದರು. ಇವರು ನಿಯಮ ಮೀರಿ ಮಾಡಿದ್ದ ರೀಲ್ಸ್ ವಿಡಿಯೋ ಬಹಳಷ್ಟು ಕಡೆ ವೈರಲ್ ಆಗಿತ್ತು. ಇದರಿಂದ ಅವರನ್ನು 2021ರಲ್ಲಿ ಕೆಲಸದಿಂದ ಅಮಾನತಗೊಳಿಸಲಾಯಿತು.

Agra Lady Constable Pinky Mishra Reels Video Viral: Dismissed Within 48 Hours after Being Reinstated

ರೀಲ್ ವಿಡಿಯೋದಲ್ಲಿ ಪಿಂಕಿ ಮಿಶ್ರಾ ಅವರು, ಸರ್ವೀಸ್ ರಿವಾಲ್ವರ್‌ನೊಂದಿಗೆ ಖಾಕಿ ಸಮವಸ್ತ್ರದಲ್ಲಿ ಇನ್‌ಸ್ಟಾಗ್ರಾಮ್ ರೀಲ್ ಅನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಅನ್ನು ಪೊಲೀಸ್ ಠಾಣೆಯ ಸ್ಟೋರ್ ರೂಂನಲ್ಲಿ ಚಿತ್ರೀಕರಿಸಲಾಗಿತ್ತು ಎನ್ನಲಾಗಿದೆ. ರೀಲ್ ವೈರಲ್ ಆಗುತ್ತಿದ್ದಂತೆ ಸರ್ಕಾರಿ ನಿಯಮಗಳ ಪ್ರಕಾರ, ಆದ ತಪ್ಪಿಗೆ ಅವರನ್ನು ಹಿರಿಯ ಅಧಿಕಾರಿಗಳು ಅಮಾನತು ಮಾಡಲಾಯಿತು. ಇದರ ಬೆನ್ನಲ್ಲೆ ಪಿಂಕಿ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದರು.

'ಅಮಾನತು', 'ಮರು'ಸೇರ್ಪಡೆ ಮತ್ತೆ 'ವಜಾ' ಮಾಡಿ ಆದೇಶ

2021 ರಲ್ಲಿ ಅಮಾನತುಗೊಂಡಿದ್ದ ಪೊಲೀಸ್ ಪೇದೆ ಪಿಂಕಿ ಮಿಶ್ರಾ ಅವರು ಆರ್ಥಿಕ ಸಂಕಷ್ಟ ಸಮಸ್ಯೆ ಹೇಳಿಕೊಂಡು ಕರ್ತವ್ಯಕ್ಕೆ ಮರು ಸೇರ್ಪಡೆಗೆ ಅವಕಾಶ ಕೋರಿದ್ದರು. ಅದರಂತೆ ಮರುಸೇರ್ಪಡೆಯಾದ ಕೇವಲ 48 ಗಂಟೆಗಳಲ್ಲಿ ಅವರನ್ನು ಪೊಲೀಸ್ ಆಯುಕ್ತರು ವಜಾಗೊಳಿಸಿದೆ ಆದೇಶಿಸಿದ್ದಾರೆ.

ಇದಕ್ಕೆ ಕಾರಣವೇನು ಎಂದು ನೋಡುವುದಾದರೆ, ಪಿಂಕಿ ಅವರಿಗೆ ಪೊಲೀಸ್ ನಿಯಮಾವಳಿಗಳನ್ನು ಉಲ್ಲಂಘಿಸಿ ಮರುಸ್ಥಾಪನೆಯ ಆದೇಶ ನೀಡಲಾಗಿದೆ. ಅಧಿಕಾರಿಗಳ ಸಮಾಲೋಚನೆ ಇಲ್ಲದೆ ಅವರು ಕರ್ತವ್ಯದ ಮರುಸ್ಥಾಪನೆ ಮಾಡಲಾಗಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

Agra Lady Constable Pinky Mishra Reels Video Viral: Dismissed Within 48 Hours after Being Reinstated

ಪಿಂಕಿ ಕಡತ ಕಾನೂನು ಸಲಹೆಗೆ ರವಾನೆ

ಪಿಂಕಿ ಮತ್ತೆ 2023 ರಲ್ಲಿ ಮರು ಸ್ಥಾಪನೆಗೆ ಕೋರಿ ಅರ್ಜಿ ಸಲ್ಲಿಸಿದ್ದರು ಅವರಿಗೆ ಪೊಲೀಸ್ ಇಲಾಖೆಯ ಗುಮಾಸ್ತರೊಬ್ಬರು ಅಕ್ಟೋಬರ್ 18 ರಂದು ಪಿಂಕಿಗೆ ಮರು ಸ್ಥಾಪನೆ ಆದೇಶ ನೀಡಿದ್ದರು. ಆದೇಶದ ಕಾರ್ಯವಿಧಾನದಲ್ಲಿ ದೋಷ ಉಂಟಾಗಿದೆ ಎಂದ ಆಗ್ರಾ ಪೊಲೀಸ್ ಕಮಿಷನರ್ ಡಾ. ಪ್ರೀತೀಂದರ್ ಸಿಂಗ್ ಅವರು 48-ಗಂಟೆಯೊಳಗೆ ಆಕೆಯ ಮರು ಸೇರ್ಪಡೆ ರದ್ದು ಮಾಡಿದ್ದಾರೆ.

ಅಲ್ಲದೇ ಪಿಂಕಿ ಕಡತವನ್ನು ಇಲಾಖೆ ಜಂಟಿ ನಿರ್ದೇಶಕರು (ಪ್ರಾಸಿಕ್ಯೂಷನ್) ಕಾನೂನು ಸಲಹೆಗಾಗಿ ಕಳುಹಿಸಿದ್ದಾರೆ. ಇನ್ನೂ ಆದೇಶ ನೀಡಿದ ಪೊಲೀಸ್ ಗುಮಾಸ್ತ್‌ನನ್ನು ಅಮಾನತು ಮಾಡಿ ಸಿಂಗ್ ಅವರು ಆದೇಶ ಪ್ರಕಟಿಸಿದರು. ಅಲ್ಲದೇ ಈ ಹಿಂದೆ ರಾಜೀನಾಮೆ ನೀಡಿದ್ದ ಯಾವುದೇ ವ್ಯಕ್ತಿಯನ್ನು ಮರುಸೇರ್ಪಡೆಗೊಳಿಸುವ ಅಧಿಕಾರಿ ಪೊಲೀಸ್ ಪ್ರಧಾನ ಕಚೇರಿಗೆ ಮಾತ್ರವೇ ಇದೆ ಎಂದು ಸಿಂಗ್ ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+