ಆಗ್ರಾ: ಅಂತ್ಯಕ್ರಿಯೆ ವೇಳೆ ಕಣ್ಣು ತೆರೆದ ಬಿಜೆಪಿ ನಾಯಕ, ಕುಟುಂಬಸ್ಥರು ಶಾಕ್
ಆಗ್ರಾ ಆಗಸ್ಟ್ 8: ಸಾವನ್ನಪ್ಪಿದ್ದಾರೆ ಎಂದು ಭಾವಿಸಲಾಗಿದ್ದ ವ್ಯಕ್ತಿ ಅಂತ್ಯಕ್ರಿಯೆ ವೇಳೆ ಎಚ್ಚರಗೊಂಡ ವಿಚಿತ್ರ ಘಟನೆಯೊಂದು ಆಗ್ರಾದಲ್ಲಿ ನಡೆದಿದೆ. ಆಗ್ರಾದ ಬಿಜೆಪಿ ಮಾಜಿ ಅಧ್ಯಕ್ಷ ಮಹೇಶ್ ಬಾಘೇಲ್ (65) ಇವರ ಅಂತ್ಯಕ್ರಿಯೆಗೆ ಸಕಲ ತಯಾರಿ ಮಾಡಿಕೊಳ್ಳಲಾಗಿತ್ತು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಮಹೇಶ್ ಬಾಘೇಲ್ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ್ದರು. ಬಳಿಕವಷ್ಟೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಪವಾಡ ಎಂಬಂತೆ ಅವರಿಗೆ ಅಂತ್ಯಕ್ರಿಯೆಗೆ ಸಂಬಂಧಿಕರು ಸಿದ್ಧತೆ ನಡೆಸುತ್ತಿದ್ದಾಗ ಪ್ರಜ್ಞೆ ಮರಳಿ ಬಂದಿದೆ.

ಭಾನುವಾರ ರಾತ್ರಿ ಬಾಘೇಲ್ ಅವರ ಆರೋಗ್ಯ ಹದಗೆಟ್ಟಿದ್ದು, ಕುಟುಂಬಸ್ಥರು ಪುಷ್ಪಾಂಜಲಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೊದೊಯ್ದಿದ್ದರು. ಆಸ್ಪತ್ರೆಯಲ್ಲಿ ಬಾಘೆಲ್‌ನ ಅಂಗಾಂಗಗಳು ವಿಫಲವಾಗಿವೆ ಎಂದು ವೈದ್ಯರು ಹೇಳಿದ್ದರು. ಪ್ರಾಥಮಿಕ ತನಿಖೆಯ ನಂತರ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಸೋಮವಾರ ಅವರ ಕುಟುಂಬವು ಅವರನ್ನು ಅಂತಿಮ ವಿಧಿವಿಧಾನಗಳಿಗಾಗಿ ಸರೈ ಖ್ವಾಜಾ ಪ್ರದೇಶದಲ್ಲಿನ ಅವರ ನಿವಾಸಕ್ಕೆ ಕರೆತಂದರು. ಮನೆಯಲ್ಲಿಯೇ ಅವರ ಕೆಲವು ಸಂಬಂಧಿಕರು ಬಘೇಲ್ ಅವರ ದೇಹದಲ್ಲಿ 'ಚಲನೆ' ಗಮನಿಸಿದರು. ಅವರು ಬಿಜೆಪಿ ನಾಯಕನ ಮಕ್ಕಳಾದ ಅಭಿಷೇಕ್ ಮತ್ತು ಅಂಕಿತ್ ಮನೆಗೆ ತಲುಪಿದ ನಂತರ ಅವರ ತಂದೆಗೆ ಪ್ರಜ್ಞೆ ಬಂದಿದೆ. ಕಣ್ಣು ತೆರೆಯುವ ಮೂಲಕ ಅವರು ಎಲ್ಲರನ್ನೂ ಆಶ್ಚರ್ಯಗೊಳಿಸಿದ್ದಾರೆ.
"ವೈದ್ಯರು ಸತ್ತರು ಎಂದು ಘೋಷಿಸಿದ 30 ನಿಮಿಷಗಳ ನಂತರ ನನ್ನ ಸಹೋದರನಲ್ಲಿ ಜೀವವಿರುವ ಎಲ್ಲಾ ಲಕ್ಷಣಗಳು ಕಂಡು ಬಂದವು. ಅವರು ಬದುಕಿರುವುದು ಪವಾಡ,'' ಎಂದು ಬಘೇಲ್ ಸಹೋದರ ಲಖನ್ ಸಿಂಗ್ ಹೇಳಿದ್ದಾರೆ. ಬಾಘೆಲ್ ಅವರನ್ನು ತಕ್ಷಣವೇ ನ್ಯೂ ಆಗ್ರಾದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಅವರ ಎದೆಯಲ್ಲಿ ಸೋಂಕನ್ನು ವೈದ್ಯರು ಗುರುತಿಸಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ.
ಮತ್ತೊಂದು ಘಟನೆ
ಅನಾರೋಗ್ಯದಿಂದಾಗಿ ಮಹಿಳೆ ಮೃತಪಟ್ಟಿದ್ದಾರೆಂದು ಭಾವಿಸಿ ಅಂತ್ಯಕ್ರಿಯೆ ಮಾಡುವ ವೇಳೆ ಕಣ್ಣು ಬಿಟ್ಟು ಅಚ್ಚರಿಗೆ ಕಾರಣವಾಗಿದ್ದ ಮೈಸೂರು ಮೂಲದ ಮಹಿಳೆ ಮೃತಪಟ್ಟಿದ್ದರು.
ಬಸವೇಶ್ವರ ರಸ್ತೆಯ ನಿವಾಸಿಯಾಗಿರುವ ಪದ್ಮಬಾಯಿ (59) ಮೃತಪಟ್ಟ ಮಹಿಳೆ. ಪದ್ಮಬಾಯಿ ಅವರಿಗೆ ತೀವ್ರ ಅನಾರೋಗ್ಯ ಸಮಸ್ಯೆಯುಂಟಾದ ಕಾರಣ ಅವರನ್ನು 2021 ಮೇ.15 ರಂದು ಲಕ್ಷ್ಮೀಪುರಂನ ನರ್ಸಿಂಗ್ ಹೋಂನಲ್ಲಿ ದಾಖಲು ಮಾಡಲಾಗಿತ್ತು. ಪದ್ಮ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ವೆಂಟಿಲೇಟರ್ ನ್ನು ನೀಡಲಾಗಿತ್ತು. ಚಿಕಿತ್ಸೆ ನೀಡುತ್ತಿದ್ದ ವೈದ್ಯರು ಪದ್ಮ ಅವರು ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದ್ದರು.
ಇದರಂತೆ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ವೆಂಟಿಲೇಟರ್ ನ್ನು ತೆಗೆಯಲಾಗಿದೆ. ನಂತರ ಆಸ್ಪತ್ರೆಯಿಂದ ಪದ್ಮ ಅವರನ್ನು ಬಿಡುಗಡೆ ಮಾಡಿದ್ದಾರೆ. ವೈದ್ಯರು ನೀಡಿದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿದ ಕುಟುಂಬಸ್ಥರು ಪದ್ಮ ಅವರು ಸಾವನ್ನಪ್ಪಿದ್ದಾರೆಂದು ತಿಳಿದು ಅಂತಿಮ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಇದರಂತೆ ಪದ್ಮ ಅವರು ಸಾವನ್ನಪ್ಪಿದ್ದಾರೆಂದು ಪತ್ರಿಕೆಗಳಲ್ಲಿ ಜಾಹೀರಾತನ್ನು ಪ್ರಕಟಿಸಿದ್ದರು. ಇನ್ನೇನು ಪದ್ಮ ಅವರ ಅಂತಿಮ ಸಂಸ್ಕಾರ ನಡೆಸಬೇಕೆನ್ನುವಷ್ಟರಲ್ಲಿ ಪದ್ಮ ಅವರು ಉಸಿರಾಡುತ್ತಿರುವುದು ಸಂಬಂಧಿಕರಿಗೆ ತಿಳಿದಿದೆ. ನಂತರ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮತ್ತೆ ಅವರಿಗೆ ವೆಂಟಿಲೇಟರ್ ನೀಡಲಾಗಿತ್ತು.
ಇದಾದ ಎರಡು ದಿನಗಳ ನಂತರವೂ ಪದ್ಮ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇದರಂತೆ ಚಿಕಿತ್ಸೆ ಫಲಕಾರಿಯಾಗದೇ ಪದ್ಮ ಆವರು ಸಾವನ್ನಪ್ಪಿದ್ದರು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications