ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಭಾವದ ನಡುವೆ ಲಸಿಕೆ ಅಭಿಯಾನ ವೇಗದಲ್ಲಿ 2ನೇ ಸ್ಥಾನ ಪಡೆದ ಭಾರತ

|
Google Oneindia Kannada News

ನವದೆಹಲಿ, ಮೇ 27: ದೇಶಾದ್ಯಂತ ನಡೆಯುತ್ತಿರುವ ಕೊರೊನಾ ಲಸಿಕಾ ಅಭಿಯಾನ 131ನೇ ದಿನಕ್ಕೆ ಕಾಲಿಟ್ಟಿದ್ದು, ಮೇ 26ರವರೆಗೆ ಲಸಿಕೆ ನೀಡಿಕೆ 20 ಕೋಟಿ ಗಡಿದಾಟಿದೆ (20,06,62,456 ಡೋಸ್ ಗಳ ಪೈಕಿ 15,71,49,593 ಮೊದಲ ಡೋಸ್ ಮತ್ತು 4,35,12,863 ಎರಡನೇ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ).

ಭಾರತದ ಕೋವಿಡ್-19 ಲಸಿಕಾ ಅಭಿಯಾನ ಈವರೆಗಿನ ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನವಾಗಿದ್ದು, ಇದಕ್ಕೆ ಪ್ರಧಾನಿ ಮೋದಿ 2021ರ ಜನವರಿ 16ರಂದು ಚಾಲನೆ ನೀಡಿದ್ದರು. ಮುಂದೆ ಓದಿ...

 ಎಚ್ಚರ: ಭಾರೀ ಇಳಿಕೆ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಎಚ್ಚರ: ಭಾರೀ ಇಳಿಕೆ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಏರಿಕೆ

 ಲಸಿಕೆ ನೀಡಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಲಸಿಕೆ ನೀಡಿಕೆಯಲ್ಲಿ ಭಾರತಕ್ಕೆ ಎರಡನೇ ಸ್ಥಾನ

ಕೇವಲ 130 ದಿನದಲ್ಲಿ ಅಮೆರಿಕ ನಂತರ ಈ ಸಾಧನೆ ಮಾಡಿದ ಎರಡನೇ ದೇಶ ಭಾರತವಾಗಿದೆ. ಅಮೆರಿಕ 124 ದಿನಗಳಲ್ಲಿ 20 ಕೋಟಿ ಗಡಿದಾಟಿತ್ತು. ಜಗತ್ತಿನ ಹಲವು ರಾಷ್ಟ್ರಗಳ ಲಭ್ಯವಿರುವ ಅಂಕಿ-ಅಂಶಗಳಂತೆ ಕೋವಿಡ್-19 ಲಸಿಕಾ ಅಭಿಯಾನದಲ್ಲಿ ಮುಂಚೂಣಿಯಲ್ಲಿರುವ ಇತರೆ ದೇಶಗಳಲ್ಲಿ, ಬ್ರಿಟನ್ 168 ದಿನದಲ್ಲಿ 5.1 ಕೋಟಿ, ಬ್ರೆಜಿಲ್ 128 ದಿನದಲ್ಲಿ 5.9 ಕೋಟಿ ಮತ್ತು ಜರ್ಮನಿ 149 ದಿನದಲ್ಲಿ 4.5 ಕೋಟಿ ಲಸಿಕೆ ವ್ಯಾಪ್ತಿಯನ್ನು ತಲುಪಿವೆ.

 60 ವರ್ಷ ಮೇಲ್ಪಟ್ಟ ಶೇ.42ರಷ್ಟು ಜನರಿಗೆ ಒಂದು ಡೋಸ್ ಲಸಿಕೆ

60 ವರ್ಷ ಮೇಲ್ಪಟ್ಟ ಶೇ.42ರಷ್ಟು ಜನರಿಗೆ ಒಂದು ಡೋಸ್ ಲಸಿಕೆ

ಕೇಂದ್ರ ಆರೋಗ್ಯ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ ಭಾರತದಲ್ಲಿ ಈವರೆಗೆ 45 ವರ್ಷ ಮೇಲ್ಪಟ್ಟ ಶೇ.34ರಷ್ಟು ಜನಸಂಖ್ಯೆಗೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಅಂತೆಯೇ ಭಾರತದಲ್ಲಿ 60 ವರ್ಷಕ್ಕೂ ಮೇಲ್ಪಟ್ಟ ಜನಸಂಖ್ಯೆಯಲ್ಲಿ ಶೇ.42ರಷ್ಟು ಜನರಿಗೆ ಕನಿಷ್ಠ ಒಂದು ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ.

ಭಾರತದಲ್ಲಿ 20 ಕೋಟಿಗೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆಭಾರತದಲ್ಲಿ 20 ಕೋಟಿಗೂ ಅಧಿಕ ಮಂದಿಗೆ ಕೊರೊನಾವೈರಸ್ ಲಸಿಕೆ

 ಭಾರತದಲ್ಲಿ ಮೂರು ಬಗೆಯ ಲಸಿಕೆ

ಭಾರತದಲ್ಲಿ ಮೂರು ಬಗೆಯ ಲಸಿಕೆ

ಈ ದಿನದವರೆಗೆ ಭಾರತ ತನ್ನ ಲಸಿಕೆ ಅಭಿಯಾನದಲ್ಲಿ ಮೂರು ಬಗೆಯ ಲಸಿಕೆಗಳನ್ನು ಬಳಸುತ್ತಿದೆ; ಇದರಲ್ಲಿ ಎರಡು ಲಸಿಕೆಗಳು ಭಾರತದಲ್ಲೇ ತಯಾರಾದವು - ಸೆರಂ ಇನ್ಸ್ ಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್, ರಷ್ಯಾದ ಸ್ಪೂಟ್ನಿಕ್ ವಿ ಅನ್ನು ಮೂರನೇ ಲಸಿಕೆಯನ್ನಾಗಿ ತುರ್ತು ಬಳಕೆಗೆ ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ ಮತ್ತು ಅದನ್ನು ಕೆಲವು ಖಾಸಗಿ ಆಸ್ಪತ್ರೆಗಳು ಬಳಕೆ ಮಾಡುತ್ತಿದ್ದು, ಆ ಬಳಕೆ ಪ್ರಮಾಣ ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ.

 ಲಸಿಕೆ ಅಭಿಯಾನದ ಹಂತಗಳು

ಲಸಿಕೆ ಅಭಿಯಾನದ ಹಂತಗಳು

ಲಸಿಕೆ ಅಭಿಯಾನದ ಮೊದಲ ಹಂತ 130 ದಿನಗಳ ಹಿಂದೆ ಜನವರಿ 16ರಂದು ಆರಂಭವಾಯಿತು. ಕೋವಿಡ್-19 ಲಸಿಕೆ ಕುರಿತ ರಾಷ್ಟ್ರೀಯ ತಜ್ಞರ ಸಮಿತಿ (ಎನ್ಇಜಿವಿಎಸಿ) ಆರೋಗ್ಯ ರಕ್ಷಣಾ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ (ಸರ್ಕಾರಿ ಮತ್ತು ಖಾಸಗಿ ವಲಯದ ಇಬ್ಬರೂ) ಆದ್ಯತೆ ನೀಡಿತ್ತು. ಎರಡನೇ ಹಂತದ ಲಸಿಕೆ ಅಭಿಯಾನ ಮಾರ್ಚ್ 1 ರಿಂದ ಆರಂಭವಾಗಿದ್ದು, ಅದರಲ್ಲಿ ಅತ್ಯಂತ ಸೂಕ್ಷ್ಮ ವಯೋಮಾನದವರ ರಕ್ಷಣೆಗೆ ಆದ್ಯತೆ ನೀಡಲಾಯಿತು. ಇದರಲ್ಲಿ 60 ವರ್ಷ ಮೇಲ್ಪಟ್ಟ ಜನರು ಮತ್ತು ಕೆಲವು ಅನಾರೋಗ್ಯ ಹೊಂದಿದ 45 ವರ್ಷ ಮೇಲ್ಪಟ್ಟ ಜನರಿಗೆ ಆದ್ಯತೆ ನೀಡಲಾಯಿತು. ಇದು 2021ರ ಏಪ್ರಿಲ್ 1 ರಿಂದ ಮತ್ತಷ್ಟು ಸರಳೀಕರಣಗೊಂಡು 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದು ಆರಂಭವಾಯಿತು.
ಮೂರನೇ ಹಂತದಲ್ಲಿ 2021ರ ಮೇ 1 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೋವಿಡ್-19 ಲಸಿಕೆಗೆ ಅರ್ಹರು ಎಂದು ಪರಿಗಣಿಸಲಾಗಿದೆ.

English summary
In 131 Days 20.06 Crore Beneficiaries Got Vaccinated Against Coronavirus Across India,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X