ವೈರಲ್ ಆಯ್ತು ಪ್ರಿಯಾಂಕಾ ನೀಡಿದ್ದ ಆಜಾನ್ ಬಗೆಗಿನ ಹೇಳಿಕೆ ವಿಡಿಯೋ

2016ರಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯದ ಜೈ ಗಂಗಾಜಲ್ ಎಂಬ ಚಿತ್ರ ಬಿಡುಗಡೆಯಾಗಿತ್ತು. ಆ ಚಿತ್ರದ ಬಿಡುಗಡೆಗೂ ಮುನ್ನ ಆ ಚಿತ್ರದ ಪ್ರಚಾರಕ್ಕಾಗಿ ಭೋಪಾಲ್ ಗೆ ಆಗಮಿಸಿದ್ದಾಗ ನೀಡಿದ್ದ ಹೇಳಿಕೆಯ ವಿಡಿಯೋ ಅದು.

ನವದೆಹಲಿ, ಏಪ್ರಿಲ್ 19: ಮುಸ್ಲಿಮರ ಪ್ರಾರ್ಥನಾ ಕರೆ (ಆಜಾನ್) ಬಗ್ಗೆ ಟ್ವೀಟ್ ಮಾಡಿ ಹಿಂದಿ ಗಾಯಕ ಸೋನು ನಿಗಂ ವಿವಾದಕ್ಕೀಡಾದ ಬೆನ್ನಲ್ಲೇ ಕಳೆದ ವರ್ಷ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಆಜಾನ್ ಬಗ್ಗೆ ನೀಡಿದ್ದ ಹೇಳಿಕೆಯುಳ್ಳ ವಿಡಿಯೋವೊಂದು ಈಗ ವೈರಲ್ ಆಗಿದೆ.

2016ರಲ್ಲಿ ಪ್ರಿಯಾಂಕಾ ಚೋಪ್ರಾ ಅಭಿನಯದ 'ಜೈ ಗಂಗಾಜಲ್' ಎಂಬ ಚಿತ್ರ ಬಿಡುಗಡೆಯಾಗಿತ್ತು. ಆ ಚಿತ್ರದ ಬಿಡುಗಡೆಗೂ ಮುನ್ನ ಆ ಚಿತ್ರದ ಪ್ರಚಾರಕ್ಕಾಗಿ ಭೋಪಾಲ್ ಗೆ ಆಗಮಿಸಿದ್ದ ಪ್ರಿಯಾಂಕಾ ಚೋಪ್ರಾ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿದ್ದರು. ಆ ಸಂವಾದದ ವಿಡಿಯೋ ತುಣುಕು ಅದು.

After Sonu Nigam’s comments, Priyanka Chopra’s old video praising azaan goes viral

ಆಗ, ಅವರಿಗೆ 'ನಿಮ್ಮ ದಿನಚರಿಯಲ್ಲಿ ನಿಮಗಿಷ್ಟವಾಗುವ ಸಮಯ ಯಾವುದು?' ಎಂದು ಕೇಳಿದರು. ಇದಕ್ಕೆ ಉತ್ತರಿಸಿದ್ದ ಪ್ರಿಯಾಂಕಾ ಚೋಪ್ರಾ, ''ನಮ್ಮ ಮನೆಯ ಆಸುಪಾಸಿನಲ್ಲಿ ಸುಮಾರು 6 ಮಸೀದಿಗಳಿವೆ. ನಾನು ಪ್ರತಿದಿನ ಶೂಟಿಂಗ್ ಮುಗಿಸಿ ಸಂಜೆ ಮನೆಗೆ ಹೋದಾಗ ಈ ಆರೂ ಮಸೀದಿಗಳಿಂದ ಪ್ರಾರ್ಥನೆಯ ಕೂಗು (ಆಜಾನ್) ಕೇಳಿಬರುತ್ತದೆ. ತಕ್ಷಣವೇ ನಾನು ನನ್ನ ಮನೆಯಲ್ಲಿ ನೆಲದ ಮೇಲೆ ಕುಳಿತು ಪ್ರಾರ್ಥಿಸುತ್ತೇನೆ. ನನಗದು ಖುಷಿ ಕೊಡುವ ವಿಚಾರ'' ಎಂದು ಹೇಳಿದ್ದಾರೆ.

ಕೆಲ ದಿನಗಳ ಹಿಂದೆ, ಹಿಂದಿ ಗಾಯಕ ಸೋನು ನಿಗಂ ಅವರು, ''ನಾನು ಮುಸ್ಲಿಮನಲ್ಲ. ಹಾಗಾಗಿ, ಆಜಾನ್ ಕೂಗಿಗೆ ನಾನು ಏಕೆ ಬೆಳ್ಳಂಬೆಳಗ್ಗೆ ಏಳಬೇಕು? ಧಾರ್ಮಿಕವಾಗಿ ಹೀಗೆ ಇತರರಿಗೆ ತೊಂದರೆ ನೀಡುವ ಸಂಸ್ಕೃತಿ ಯಾವಾಗ ಮುಗಿಯುತ್ತದೋ ಕಾಣೆ'' ಎಂದು ಟ್ವೀಟ್ ಮಾಡಿ ವಿವಾದಕ್ಕೀಡಾಗಿದ್ದಾರೆ.

ಅವರ ವಿವಾದವು ರಾಷ್ಟ್ರಮಟ್ಟದಲ್ಲಿ ಆಜಾನ್ ಬೇಕೇ, ಬೇಡವೇ ಎಂಬುದರ ಬಗ್ಗೆ ಪರ ಹಾಗೂ ವಿರೋಧಗಳು ಬರುತ್ತಿವೆ. ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಈ ಹಿನ್ನೆಲೆಯಲ್ಲಿ, ಪ್ರಿಯಾಂಕಾ ಅವರ ಆಜಾನ್ ಪರವಾಗಿನ ಈ ಹೇಳಿಕೆ ಈಗ ಮತ್ತೆ ಚಾಲ್ತಿಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+