Afzal Ansari: ರಾಹುಲ್ ಗಾಂಧಿ ನಂತರ ಲೋಕಸಭಾ ಸದಸ್ಯತ್ವ ಕಳೆದುಕೊಳ್ಳಲಿರುವ ಮತ್ತೊಬ್ಬ ಸಂಸದ
ಲಕ್ನೋ, ಏಪ್ರಿಲ್. 29: ಭಾರತೀಯ ಜನತಾ ಶಾಸಕ ಕೃಷ್ಣಾನಂದ್ ರೈ ಅವರ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟಾರ್, ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರನ್ನು ಉತ್ತರ ಪ್ರದೇಶದ ಗಾಜಿಪುರದ ಸಂಸದ ಶಾಸಕ ನ್ಯಾಯಾಲಯ ಶನಿವಾರ ದೋಷಿ ಎಂದು ಘೋಷಿಸಿದೆ. ಜೊತೆಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದು, 5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
ಇವರ ಜೊತೆಗೆ ಇದೇ ಪ್ರಕರಣದಲ್ಲಿ ಅವರ ಸಹೋದರ, ಬಹುಜನ ಸಮಾಜ ಪಕ್ಷದ ಸಂಸದ ಅಫ್ಜಲ್ ಅನ್ಸಾರಿ ಕೂಡ ಅದೇ ದೋಷಿ ಎಂದು ತೀರ್ಪು ನೀಡಲಾಗಿದೆ. 2007 ರ ದರೋಡೆಕೋರರ ಕಾಯಿದೆ ಪ್ರಕರಣದಲ್ಲಿ ಅಫ್ಜಲ್ ಅನ್ಸಾರಿಗೂ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಹೀಗಾಗಿ ಇವರು ತನ್ನ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳವ ಸಂಭವವಿದೆ.

ನ್ಯಾಯಾಲಯ ಮುಕ್ತಾರ್ ಅನ್ಸಾರಿಗೆ 5 ಲಕ್ಷ ಮತ್ತು ಅಫ್ಜಲ್ ಅನ್ಸಾರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಹತ್ಯೆಗೆ ಸಂಬಂಧಿಸಿದ ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ ಸಹೋದರರು ಆರೋಪಿಗಳಾಗಿದ್ದಾರೆ. ಈ ಶಿಕ್ಷೆಯೊಂದಿಗೆ, ಅಫ್ಜಲ್ ಅನ್ಸಾರಿ ಅವರು ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳಲಿದ್ದಾರೆ.
ಸಂಸತ್ತಿನ ನಿಯಮಗಳ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಯಾವುದೇ ಸದಸ್ಯರು ಲೋಕಸಭೆಯಿಂದ ಅನರ್ಹರಾಗುತ್ತಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು 2019 ರ ಮಾನನಷ್ಟ ಪ್ರಕರಣದಲ್ಲಿ ತಪ್ಪಿತಸ್ಥರೆಂದು ತೀರ್ಪು ಕೊಡಲಾಗಿತ್ತು. ಈ ತೀರ್ಪಿನಲ್ಲಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಗೆ ಗುರಿ ಮಾಡಲಾಯಿತು. ನಂತರ ಸಂಸತ್ತಿನ ನಿಯಮಗಳ ಪ್ರಕಾರ ಇತ್ತೀಚೆಗೆ ತಮ್ಮ ಸಂಸದ ಸ್ಥಾನಮಾನವನ್ನು ಕಳೆದುಕೊಂಡಿದ್ದಾರೆ.
ಶನಿವಾರ ಮುಂಜಾನೆ, 2005 ರಲ್ಲಿ ಘಾಜಿಪುರದಲ್ಲಿ ಮುಖ್ತಾರ್ ಅನ್ಸಾರಿ ಮತ್ತು ಅವರ ಸಹೋದರ ಅಫ್ಜಲ್ ಅನ್ಸಾರಿಯಿಂದ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆಗೀಡಾಗಿದ್ದರು. ದಿವಂಗತ ಬಿಜೆಪಿ ಶಾಸಕ ಕೃಷ್ಣಾನಂದ ರೈ ಅವರ ಪತ್ನಿ ಅಲ್ಕಾ ರೈ, ಉತ್ತರ ಪ್ರದೇಶದಲ್ಲಿ ಗೂಂಡಾಗಳು, ಮಾಫಿಯಾದ ಆಡಳಿತ ಕೊನೆಗೊಂಡಿದೆ ಮತ್ತು ನ್ಯಾಯಾಂಗದ ಮೇಲೆ ನನಗೆ ನಂಬಿಕೆ ಇದೆ ಎಂದು ಶನಿವಾರ ಹೇಳಿದ್ದಾರೆ.












Click it and Unblock the Notifications