ಯುಪಿಎ ಕಾಲದ ಸಾಲದ ವಿಷ್ಯ: ಮೋದಿ ವಿರುದ್ಧ ಚಿದಂಬರಂ ಗರಂ
ನವದೆಹಲಿ, ಸೆಪ್ಟೆಂಬರ್ 02:ಯುಪಿಎ ಸರ್ಕಾರದ ಆಡಳಿತಾವಧಿಯಲ್ಲಿ ನೀಡಿದ ಸಾಲಗಳ ಬಗ್ಗೆ ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಯನ್ನು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಖಂಡಿಸಿದ್ದಾರೆ. ಯುಪಿಎ ಅವಧಿಯ ಸಾಲದ ಲೆಕ್ಕ ಹಾಗಿರಲಿ, ಎನ್‌ಡಿಎ ಅವಧಿಯಲ್ಲಿ ಸರ್ಕಾರ ನೀಡಿರುವ ಸಾಲಗಳ ಕುರಿತು ಅಂಕಿ ಅಂಶಗಳನ್ನು ಬಹಿರಂಗ ಪಡಿಸಿ ಎಂದು ಸವಾಲು ಹಾಕಿದ್ದಾರೆ.
ಸಾಲದ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿರುವ ಕಾಂಗ್ರೆಸ್ ನಾಯಕ ಚಿದಂಬರಂ, ಹಿಂದಿನ ಸರ್ಕಾರವು ನೀಡಿರುವ ಕೆಟ್ಟ ಸಾಲಗಳನ್ನು ಈಗಿನ ಸರ್ಕಾರ ಏಕೆ ಮರುಪಡೆಯಲಿಲ್ಲ. ಎನ್‌ಡಿಎ ಅಡಿಯಲ್ಲಿ ಎಷ್ಟು ಸಾಲ ನೀಡಲಾಗಿದೆ ಮತ್ತು ಅವುಗಳಲ್ಲಿ ಮರು ಪಾವತಿಸಿಕೊಳ್ಳಲಾಗಿದೆ ಎಂದು ಪ್ರಶ್ನಿಸಿದ್ದಾರೆ.

ಮೇ 2014 ರ ನಂತರ ಎಷ್ಟು ಸಾಲವನ್ನು ನೀಡಲಾಗಿದೆ ಮತ್ತು ಎಷ್ಟನ್ನು ಮರುಪಾವತಿಸಿಕೊಳ್ಳಲಾಗಿದೆ? ಈ ಕುರಿತಾಗಿ ಸಂಸತ್ತಿನಲ್ಲೂ ಕೂಡ ಪ್ರಶ್ನೆಗಳನ್ನು ಕೇಳಲಾಗಿದ್ದರೂ ಉತ್ತರ ಮಾತ್ರ ದೊರೆತಿಲ್ಲ ಎಂದಿದ್ದಾರೆ.
How many loans and how much that were given after May 2014 have become non-performing assets?
— P. Chidambaram (@PChidambaram_IN) September 2, 2018
ಪೋಸ್ಟ್ ಪೇಮೆಂಟ್ ಬ್ಯಾಂಕ್ (ಐಪಿಪಿಬಿ) ಉದ್ಘಾಟಿಸಿ ಮಾತನಾಡಿದ್ದ ಮೋದಿ, 2014ಕ್ಕೂ ಮೊದಲು ಕೇವಲ 12 ಮಂದಿ ಸುಮಾರು 1.75 ಲಕ್ಷ ಕೋಟಿ ರೂ.ಸಾಲ ಪಡೆದುಕೊಂಡಿದ್ದರು.
Let's assume that PM is right when he says that loans given under UPA have turned bad. How many of those loans were renewed or rolled over (that is 'evergreened') under NDA?
— P. Chidambaram (@PChidambaram_IN) September 2, 2018
27 ಮಂದಿ 1 ಲಕ್ಷ ಕೋಟಿ ರೂ. ಸಾಲ ಪಡೆದುಕೊಂಡಿದ್ದಾರೆ. ನಾಮ್‌ಧಾರಿಗಳು(ರಾಜವಂಶ) ಮಾಡಿದ ಫೋನ್ ಕರೆಯಿಂದಾಗಿ ಇವರಿಗೆಲ್ಲ ಸಾಲ ನೀಡಲಾಗಿತ್ತು.
Why were those loans not recalled? Why were those loans evergreened?
— P. Chidambaram (@PChidambaram_IN) September 2, 2018
27 ಮಂದಿಯಿಂದ ಒಂದು ಲಕ್ಷ ಕೋಟಿ ಸಾಲವನ್ನು ಹಿಂಪಡೆಯಲು ಕಾರ್ಯ ಪ್ರಗತಿಯಲ್ಲಿದೆ ಎಂದು ಪರೋಕ್ಷವಾಗಿ ಯುಪಿಎ ಸರ್ಕಾರವನ್ನು ಟೀಕಿಸಿದ್ದರು.












Click it and Unblock the Notifications