• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮುಸ್ಲಿಮರ ಬಳಿಕ ಈಗ ಕ್ರೈಸ್ತರು ಹಿಂದುತ್ವ ಬ್ರಿಗೇಡ್‌ನ ಟಾರ್ಗೆಟ್‌'

|
Google Oneindia Kannada News

ನವದೆಹಲಿ, ಡಿಸೆಂಬರ್‌ 29: ಮುಸ್ಲಿಮರ ಬಳಿಕ ಈಗ ಕ್ರೈಸ್ತರು ಹಿಂದುತ್ವ ಬ್ರಿಗೇಡ್‌ನ ಟಾರ್ಗೆಟ್‌ ಆಗಿದ್ದಾರೆ ಎಂದು ಬುಧವಾರ ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಮಿಷನರಿ ಚಾರಿಟಿಗಳಿಗೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನೋಂದಾವಣಿಯನ್ನು ನವೀಕರಣ ಮಾಡಲು ಸರ್ಕಾರ ಸಮ್ಮತಿಸುತ್ತಿಲ್ಲ ಎಂಬ ವಿಚಾರವನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್‌ ನಾಯಕರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾದಲ್ಲಿ ಕಾಂಗ್ರೆಸ್‌ನ ಚುನಾವಣಾ ವೀಕ್ಷಕರಾಗಿರುವ ಹಿರಿಯ ಕಾಂಗ್ರೆಸ್‌ ನಾಯಕ ಪಿ ಚಿದಂಬರಂ ಮಾಧ್ಯಮಗಳ ವಿರುದ್ಧವು ವಾಗ್ದಾಳಿ ನಡೆಸಿದ್ದಾರೆ. ಮುಖ್ಯ ಮಾಧ್ಯಮಗಳು ಮಿಷನರಿ ಚಾರಿಟಿಗಳಿಗೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನೋಂದಾವಣಿಯನ್ನು ನವೀಕರಣ ಮಾಡಲು ಸರ್ಕಾರ ಅವಕಾಶ ನೀಡದ ಬಗ್ಗೆ ಸುದ್ದಿಯನ್ನೇ ಮಾಡಿಲ್ಲ ಎಂದು ಹೇಳಿರುವ ಕಾಂಗ್ರೆಸ್ ನಾಯಕ ಪಿ ಚಿದಂಬರಂ, "ಇದು ಅತೀ ಬೇಸರದ ವಿಚಾರ ಹಾಗೂ ನಾಚಿಕೆಗೇಡಿನ ವಿಚಾರ," ಎಂದಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪಿ ಚಿದಂಬರಂ, "ಕ್ರೈಸ್ತ ಚಾರಿಟಿಗಳ ವಿಚಾರದಲ್ಲಿ ಕೇಂದ್ರ ಸರ್ಕಾರವು ತಾರತಮ್ಯವನ್ನು ಹಾಗೂ ಪೂರ್ವಾಗ್ರಹವನ್ನು ಹೊಂದಿದೆ ಎಂಬುವುದು ಬಹಿರಂಗವಾಗಿದೆ. ಮುಸ್ಲಿಮರ ಬಳಿಕ ಈಗ ಕ್ರೈಸ್ತರು ಹಿಂದುತ್ವ ಬ್ರಿಗೇಡ್‌ನ ಟಾರ್ಗೆಟ್‌ ಆಗಿದ್ದಾರೆ," ಎಂದು ತಿಳಿಸಿದ್ದಾರೆ.

"ಮುಖ್ಯ ಮಾಧ್ಯಮಗಳು ತಮ್ಮ ಪತ್ರಿಕೆಗಳಲ್ಲಿ ಕೇಂದ್ರ ಸರ್ಕಾರವು ಮಿಷನರಿ ಚಾರಿಟಿಗಳಿಗೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನೋಂದಾವಣಿಯನ್ನು ನವೀಕರಣ ಮಾಡಲು ಅವಕಾಶ ನೀಡದ ವಿಚಾರವನ್ನು ವರದಿ ಮಾಡಿಲ್ಲ ಎಂಬುವುದನ್ನು ನೀವು ಗಮನಿಸಿದ್ದೀರಾ?, ಇದು ಅತೀ ಬೇಸರದ ವಿಚಾರ ಹಾಗೂ ಅತೀ ನಾಚಿಕೆಗೇಡಿನ ವಿಚಾರ. ಭಾರತದಲ್ಲಿ ಬಡವರು ಹಾಗೂ ದಾರಿದ್ರ್ಯರಿಗೆ ಈ ಎನ್‌ಜಿಒಗಳು ಸಾಮಾಜಿಕ ಸೇವೆಯನ್ನು ಮಾಡುತ್ತಿದೆ. ಕೇಂದ್ರ ಸರ್ಕಾರದ ಈ ಅನುಮತಿ ನಿರಾಕರಣೆಯು ಈ ಎನ್‌ಜಿಒ ಬಡವರಿಗೆ ಸಹಾಯ ಮಾಡುವುದಕ್ಕೆ ನೇರವಾಗಿ ಮಾಡಿದ ದಾಳಿ ಆಗಿದೆ," ಎಂದು ಚಿದಂಬರಂ ಇನ್ನೊಂದು ಟ್ವೀಟ್‌ ಮೂಲಕ ಆರೋಪ ಮಾಡಿದ್ದಾರೆ.

ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವ ಭಾರತದಲ್ಲಿ ಯಾಕಿಷ್ಟು ಏಕತೆ ಕೊರತೆ?ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸುವ ಭಾರತದಲ್ಲಿ ಯಾಕಿಷ್ಟು ಏಕತೆ ಕೊರತೆ?

ಕ್ರೈಸ್ತ ಸಮುದಾಯದ ಮೇಲೆ ಹೆಚ್ಚಿದ ದಾಳಿ

ಪ್ರಸ್ತುತ ದೇಶದಲ್ಲಿ ಕ್ರೈಸ್ತ ಸಮುದಾಯದ ಮೇಲಿನ ದಾಳಿಯು ಅಧಿಕವಾಗುತ್ತಿದೆ. ಕ್ರೈಸ್ತ ಸಮುದಾಯದ ಎನ್‌ಜಿಒಗಳಲ್ಲಿ ಮತಾಂತರ ಮಾಡಲಾಗುತ್ತದೆ ಎಂದು ಆರೋಪ ಮಾಡಿ ಬಿಜೆಪಿ ಅಂಗ ಸಂಸ್ಥೆಗಳಾದ ಭಜರಂಗದಳ, ವಿಶ್ವ ಹಿಂದೂ ಪರಿಷತ್‌ ದಾಳಿಗಳನ್ನು ನಡೆಸುತ್ತಿದೆ. ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ಕ್ರೈಸ್ತ ಶಾಲೆಯ ಮೇಲೆ ಮತಾಂತರದ ಆರೋಪದ ಮೇಲೆ ದಾಳಿ ನಡೆಸಲಾಗಿತ್ತು. ಕ್ರಿಶ್ಚಿಯನ್ ಮಿಷನರಿ ಸಂಸ್ಥೆಯು ವಿದ್ಯಾರ್ಥಿಗಳನ್ನು ಧಾರ್ಮಿಕ ಮತಾಂತರ ಮಾಡುತ್ತಿದೆ ಎಂದು ಆರೋಪಿಸಿ ಬಜರಂಗ ದಳದ ನೂರಾರು ಕಾರ್ಯಕರ್ತರು ಸ್ಥಳೀಯರೊಂದಿಗೆ ಶಾಲೆಗೆ ನುಗ್ಗಿ ಕಟ್ಟಡದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನ ಮಧ್ಯ ಪ್ರದೇಶದ ವಿದಿಶಾ ಜಿಲ್ಲೆಯ ಗಂಜ್ ಬಸೋದಾ ಪಟ್ಟಣದಲ್ಲಿ ನಡೆದಿದೆ. ಇನ್ನು ಈ ನಡುವೆ ಕರ್ನಾಟಕ ರಾಜ್ಯದಲ್ಲಿ ಧಾರ್ಮಿಕ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವುದನ್ನು ವಿರೋಧ ಮಾಡಿ ಕ್ರೈಸ್ತ ಸಮುದಾಯ ಪ್ರತಿಭಟನೆ ನಡೆಸಿದೆ.

ಶಿವಮೊಗ್ಗ: ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮರಳಿದ ಒಂದೇ ಕುಟುಂಬದ 9 ಮಂದಿಶಿವಮೊಗ್ಗ: ಕ್ರೈಸ್ತ ಧರ್ಮ ತೊರೆದು ಹಿಂದೂ ಧರ್ಮಕ್ಕೆ ಮರಳಿದ ಒಂದೇ ಕುಟುಂಬದ 9 ಮಂದಿ

ಮತಾಂತರ ಕಾರ್ಯಕ್ಕೆ ವಿದೇಶದಿಂದ ಹೇರಳ ಹಣ?

ಇನ್ನು ಮತಾಂತರ ಮಾಡಲು ವಿದೇಶದಿಂದ ಹೇರಳವಾಗಿ ಹಣ ಬರುತ್ತಿದೆ ಎಂದು ಈ ಹಿಂದೆ ವಿಎಚ್‌ಪಿ ನಾಯಕರೊಬ್ಬರು ಹೇಳಿದ್ದರು. ವಿಶ್ವ ಹಿಂದೂ ಪರಿಷತ್ ಪ್ರಾಂತ ಉಪಾಧ್ಯಕ್ಷ ಹಾ. ರಾಮಪ್ಪ, "ಹಿಂದೂ ಧರ್ಮವನ್ನು ನಾಶಪಡಿಸಲು ಬಡವರ ಬಲಹೀನತೆಯನ್ನು ಅರಿತುಕೊಂಡು, ಮತಾಂತರ ಮಾಡಲಾಗುತ್ತಿದೆ. ಮತಾಂತರ ಕಾರ್ಯಕ್ಕೆ ವಿದೇಶದಿಂದ ಹೇರಳವಾಗಿ ಹಣ ಹರಿದು ಬರುತ್ತಿದೆ. ಈ ಹಣವನ್ನು ಒತ್ತಾಯದ ಮತಾಂತರ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಹಿಂದೂ ಧರ್ಮದ ಸಂಸ್ಕಾರ, ಹಬ್ಬ ಹರಿದಿನಗಳನ್ನು ಶ್ರದ್ಧೆಯಿಂದ ಆಚರಿಸಿದರೆ ಶಾಂತಿ, ಸಮೃದ್ಧಿ, ನೆಮ್ಮದಿ ಖಂಡಿತ ದೊರೆಯಲಿದೆ,'' ಎಂದರು. (ಒನ್‌ಇಂಡಿಯಾ ಸುದ್ದಿ)

English summary
After Muslims, Christians target of Hindutva brigade Says Congress Leader Chidambaram.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X