ಜೋಶಿಮಠದಂತೆ ಉತ್ತರ ಪ್ರದೇಶದ ಈ ನಗರದಲ್ಲೂ ಕಾಣಿಸಿಕೊಳ್ಳುತ್ತಿವೆ ಬಿರುಕುಗಳು: ಇದೇನಿದು ಹೊಸ ಅಪಾಯ?

ಲಖನೌ, ಜನವರಿ 11: ಉತ್ತರಾಖಂಡ್‌ನ ಜೋಶಿಮಠ ಪ್ರದೇಶದಲ್ಲಿ ಭೂಮಿ ಕುಸಿಯುತ್ತಿರುವ ಭೀತಿಯ ನಡುವೆಯೇ ಅಲಿಗಢದ ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಹಠಾತ್ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

'ಕಳೆದ ಹಲವಾರು ದಿನಗಳಿಂದ ನಮ್ಮ ಕೆಲವು ಮನೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿದ್ದು, ಇದರಿಂದ ನಾವು ಭಯಭೀತರಾಗಿದ್ದೇವೆ. ಈ ಬಗ್ಗೆ ದೂರು ನೀಡಿದ್ದೇವೆ. ಆದರೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಕೇವಲ ಭರವಸೆ ನೀಡುತ್ತಿದ್ದಾರೆ. ಮನೆಗಳು ಕುಸಿದು ಬೀಳುವ ಆತಂಕವಿದೆ' ಎಂದು ಸ್ಥಳೀಯರೊಬ್ಬರು ಶಶಿ ಹೇಳಿದರು.

ಮಕರ ಸಂಕ್ರಾಂತಿ ವಿಶೇಷ ಪುಟ

ಸ್ಥಳೀಯರ ಪ್ರಕಾರ, ಸರ್ಕಾರದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ಪೈಪ್‌ಲೈನ್ ಹಾಕಲಾಗಿದ್ದು, ಈಗ ಅದು ಸೋರಿಕೆಯಾಗುತ್ತಿದೆ. ಇದು ಬಿರುಕುಗಳ ಬೆಳವಣಿಗೆಗೆ ಕಾರಣವಾಗಿದೆ ಎಂದು ವರದಿಯಾಗಿದೆ.

After Joshimath Cracks And Leaks Appear In Houses In UPs Aligarh

'ಇದು ಸಂಭವಿಸುತ್ತಿರುವುದು ಮೂರ್ನಾಲ್ಕು ದಿನಗಳಿಂದ. ನಾವು ಈ ಘಟನೆಯ ಬಗ್ಗೆ ಇಲಾಖೆಗೆ ತಿಳಿಸಿದ್ದೇವೆ. ಆದರೆ ಇದುವರೆಗೆ ಯಾವುದೇ ನೆರವು ನೀಡಿಲ್ಲ. ನಾವು ಭಯಭೀತರಾಗಿ ಬದುಕುತ್ತಿದ್ದೇವೆ' ಎಂದು ಸ್ಥಳೀಯರಾದ ಅಫ್ಶಾ ಮಶ್ರೂರ್ ಹೇಳಿದ್ದಾರೆ.

ಮಹಾನಗರ ಪಾಲಿಕೆಯ ಹೆಚ್ಚುವರಿ ಆಯುಕ್ತ ರಾಕೇಶ್ ಕುಮಾರ್ ಯಾದವ್ ಅವರು ಈ ಬಗ್ಗೆ ಗಮನ ಹರಿಸಿದ್ದು, ಇಲಾಖೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

'ಕನ್ವರಿಗಂಜ್ ಪ್ರದೇಶದಲ್ಲಿ ಕೆಲವು ಮನೆಗಳಲ್ಲಿ ಬಿರುಕುಗಳು ಕಂಡುಬಂದಿವೆ ಎಂಬ ಮಾಹಿತಿ ನಮಗೆ ಬಂದಿದೆ. ಈ ವಿಷಯ ಇನ್ನೂ ಪೂರ್ಣ ಗಮನಕ್ಕೆ ಬಂದಿಲ್ಲ. ನಾವು ಈಗ ನಮ್ಮ ತಂಡವನ್ನು ಸ್ಥಳಕ್ಕೆ ಕಳುಹಿಸುತ್ತೇವೆ ಮತ್ತು ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗುವುದು' ಯಾದವ್ ಭರವಸೆ ನೀಡಿದ್ದಾರೆ.

After Joshimath Cracks And Leaks Appear In Houses In UPs Aligarh

ಉತ್ತರಾಖಂಡದ ಜೋಶಿಮಠದಲ್ಲಿ ಬಿರುಕು ಬಿಟ್ಟಿರುವ ಹಾಗೂ ತೀವ್ರವಾಗಿ ಹಾನಿಗೀಡಾಗಿರುವ ಕಟ್ಟಡಗಳನ್ನು ಇಂದಿನಿಂದ ನೆಲಸಮಗೊಳಿಸಿ ಅಕ್ಕಪಕ್ಕದ ಕಟ್ಟಡಗಳ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೋಶಿಮಠವನ್ನು 'ಅಪಾಯ', 'ಬಫರ್' ಮತ್ತು 'ಸಂಪೂರ್ಣವಾಗಿ ಸುರಕ್ಷಿತ' ಎಂಬ ಮೂರು ವಲಯಗಳಾಗಿ ವಿಂಗಡಿಸಲಾಗಿದೆ. ಇದು ಭೂಮಿಯ ಕುಸಿತ ಅಥವಾ ನೆಲದ ಮೇಲ್ಮೈ ಮುಳುಗುವಿಕೆಯ ಅಪಾಯದ ಪ್ರಮಾಣವನ್ನು ಆಧರಿಸಿದೆ.

After Joshimath Cracks And Leaks Appear In Houses In UPs Aligarh

ಮುಳುಗುತ್ತಿರುವ ಜೋಶಿಮಠದಲ್ಲಿ ಒಟ್ಟು 678 ಕಟ್ಟಡಗಳು ಬಿರುಕು ಬಿಟ್ಟಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚು ಹಾನಿಗೊಳಗಾದವುಗಳನ್ನು ಕೆಡವಲಾಗುತ್ತದೆ.

ಅಪಾಯದ ವಲಯದಲ್ಲಿರುವ ಹಲವಾರು ಮನೆಗಳಲ್ಲದೆ, ಎರಡು ಹೋಟೆಲ್‌ಗಳು - ಮೌಂಟ್ ವ್ಯೂ ಮತ್ತು ಮಲಾರಿ ಇನ್‌ಗಳನ್ನು ಸಹ ಕೆಡವಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+