ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೌದು, ನಾನು ಹಿಂದೂ ಎಂದಿದ್ದಕ್ಕೆ ಆತ ತೆತ್ತ ಬೆಲೆ ಏನು?

|
Google Oneindia Kannada News

ಪುಣೆ, ಜನವರಿ, 22: ದೇಶದೆಲ್ಲೆಡೇ ಹೈದ್ರಾಬಾದಿನ ರೋಹಿತ್ ವೇಮುಲ ಆತ್ಮಹತ್ಯೆಯದ್ದೇ ಚರ್ಚೆ. ಜಾತೀಯತೆ, ಕೋಮವಾದ, ಅಸಹಿಷ್ಣುತೆ ಹೀಗೆ ನೂರಾರು ಮಾತುಗಳು. ಇದೆಲ್ಲವನ್ನು ಒತ್ತಟ್ಟಿಗೆ ಇಡದಿದ್ದರೆ ನಮಗೆ ಮತ್ತೊಂದು ಸಾವಿನ ನಿಜನಾದ ಸುದ್ದಿ ನಮಗೆ ತಿಳಿಯದೇ ಹೋಗಬಹುದು.

ಕಳೆದ ಶುಕ್ರವಾರ ಪುಣೆಯಲ್ಲಿ ನಡೆದ ಯುವಕನ ಹತ್ಯೆ ಕತೆಯನ್ನು ನಾವು ಕೇಳಲೇಬೇಕಿದೆ. ಸವನ್ ರಾಥೋಡ್ ಎಂಬ ಯುವಕನ ಹತ್ಯೆ ರೋಹಿತ್ ಸಾವಿನಷ್ಟು ದೊಡ್ಡ ಸುದ್ದಿಯಾಗಲೇ ಇಲ್ಲ. ಇದೀಗ ಆತ ಸಾವಿನ ವೇಳೆ ಹೇಳಿದ್ದ ಮಾತುಗಳು ನಿಜಕ್ಕೂ ಬೇರೆಯದೇ ಕತೆ ಹೇಳುತ್ತಿವೆ. ಆತನನ್ನು ಸುಟ್ಟು ಹಾಕಿದ್ದ ಘಟನಾವಳಿಗಳ ಚಿತ್ರಣವನ್ನು ಅನವದೇ ಬಾಯಿಂದ ಕೇಳಿ...(ಸವನ್ ರಾಥೋಡ್ ಅವರು ಆಸ್ಪತ್ರೆಯಲ್ಲಿದ್ದಾಗ ವಕೀಲರೊಬ್ಬರು ಆತನ ಕೊನೆ ಮಾತುಗಳನ್ನು ವಿಡಿಯೋ ಮಾಡಿದ್ದಾರೆ)[ಬೂದಿಮುಚ್ಚಿದ್ದ 'ಅಸಹಿಷ್ಣುತೆ' ಕೆಂಡ ಕೆದಕಿದ ಕರಣ್ ಜೋಹರ್!]

pune


ಆತನ ಮಾತಿನಲ್ಲೇ ಸಾವಿನ ಕ್ಷಣಗಳನ್ನು ಕೇಳೋಣ....

"ಪಂಧನ್ ಪುರದಲ್ಲಿ ನಾನು ನನ್ನ ಕುಟುಂಬದೊಂದಿಗೆ ವಾಸವಾಗಿದ್ದೆ. ಕೆಲಸ ಅರಸಿ ಪುಣೆ ಮಹಾನಗರಕ್ಕೆ ಕಾಲಿಟ್ಟಿದ್ದೆ. ನಾನು ನಡೆದುಕೊಂಡು ತೆರಳುತ್ತಿದ್ದಾಗ, ಅಡ್ಡ ಹಾಕಿದ ಮೂರು ಜನರ ಗುಂಪು 'ನಿನ್ನ ಹೆಸರೇನು?' ಎಂದು ಪ್ರಶ್ನೆ ಮಾಡಿತು. ನಾನು ಸವನ್ ರಾಥೋಡ್ ಎಂದು ಹೇಳಿದೆ. "ನೀನು ಹಿಂದೂನಾ?" ಎಂದು ಗುಂಪು ತಿರುಗಿ ಪ್ರಶ್ನೆ ಮಾಡಿತು. ಅದಕ್ಕೆ ನಾನು "ಹೌದು" ಎಂದೆ. ಇದಾದ ಮೇಲೆ ಏಕಾಏಕಿ ನನ್ನ ಮೇಲೆ ದಾಳಿ ನಡೆಸಿದ ಗುಂಪು ಕ್ಯಾನ್ ವೊಂದನ್ನು ತೆಗೆದು ನನ್ನ ಮೇಲೆ ಪೆಟ್ರೋಲ್ ಎರಚಿ ಬೆಂಕಿ ಇಟ್ಟಿತು. ಈ ಹೇಳಿಕೆಗಳು ವಿಡಿಯೊದಲ್ಲಿ ದಾಖಲಾಗಿದೆ.

ನನ್ನ ಮಗ ಹಿಂದೂ ಎಂಬ ಏಕೈಕ ಕಾರಣಕ್ಕೆ ಆತನನನ್ನು ಸಟ್ಟು ಹಾಕಲಾಯಿತು ಎಂದು ಯುವಕನ ತಂದೆ ಆರೋಪ ಮಾಡಿದ್ದು ಸುದ್ದಿಯಾಗಲೇ ಇಲ್ಲ. ಇದಾದ ಮೇಲೆ ಪೊಲೀಸರು ಇಮ್ರಾನ್, ಜುಬೇರ್, ಇಬ್ರಾಹಿಂ ಶೇಖ್ ಎಂಬುವರನ್ನು ಬಂಧಿಸಿದ್ದರು.[ಹೈದ್ರಾಬಾದ್ ವಿವಿಯಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದು ಏಕೆ?]

ನಾವು ಆಸ್ಪತ್ರೆಗೆ ತೆರಳಿದಾಗ ಸವನ್ ಸ್ಥಿತಿ ಚಿಂತಾಜನಕವಾಗಿತ್ತು. ಆತ ಸಾಯುವ ಮುನ್ನ ಹೇಳಿಕೆ ತೆಗೆದುಕೊಳ್ಳುವಂತೆ ಪೊಲೀಸರಿಗೆ ಕೇಳಿಕೊಂಡೆವು. ಆದರೆ ಪೊಲೀಸರು ಇದನ್ನು ವಿರೋಧಿಸಿದರು. ಹಾಗಾಗಿ ನಾನೇ ಆತನ ಕೊನೆ ಹೇಳಿಕೆಯನ್ನು ಅವನ ತಂದೆ ಮತ್ತು ಸ್ನೇಹಿತರ ಎದುರೇ ರೇಕಾರ್ಡ್ ಮಾಡಿಕೊಂಡೆ. ಆತ ಕಳ್ಳತನ ಮಾಡಲು ನನ್ನ ಮೇಲೆ ದಾಳಿ ಮಾಡಿದರು ಎಂದು ಎಲ್ಲಿಯೂ ಹೇಳಲಿಲ್ಲ. ಇದು ಕೋಮು ಕಾರಣಕ್ಕೆ ನಡೆದ ಸಾವು ಎಂಬುವುದು ಸ್ಪಷ್ಟ ಎಂದು ವಕೀಲ ರಮೇಶ್ ರಾಥೋಡ್ ತಿಳಿಸಿದ್ದಾರೆ.

ಆದರೆ ಡಿಸಿಪಿ ತುಷಾರ್ ದೋಷಿ ಇದು ಕೋಮು ಕಾರಣಕ್ಕೆ ನಡೆದ ಸಾವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಆರೋಪಿಗಳು ಸವನ್ ಬಳಿ ಬ್ಯಾಟರಿ ಕಳ್ಳತನದ ಬಗ್ಗೆ ಕೇಳಿದ್ದಾರೆ. ಕ್ರೀಡಾಂಗಣದ ಬ್ಯಾಟರಿಯನ್ನು ಸವನ್ ಕದ್ದಿದ್ದಾನೆ ಎಂಬ ಅನುಮಾನದ ಮೇಲೆ ಪ್ರಶ್ನೆ ಮಾಡಿದ್ದಾರೆ. ಆದರೆ ಇದಕ್ಕೆ ಸವನ್ ಸರಿಯಾದ ಉತ್ತರ ನೀಡಿಲ್ಲ. ಇದಾದ ಮೇಲೆ ತಾಳ್ಮೆ ಕಳೆದುಕೊಂಡ ಆಕ್ರಮಣಕಾರರು ಆತನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ ಇದು ಡಿಸಿಪಿ ತುಷಾರ್ ದೋಷಿ ನೀಡಿರುವ ಹೇಳಿಕೆ. ಇದರಂತೆಯೇ ಎಫ್ ಐ ಆರ್ ಸಹ ದಾಖಲಾಗಿದೆ.

ಒಟ್ಟಿನಲ್ಲಿ ಯುವಕನ ಸಾವಿನ ಬಗೆಗಿನ ಅನುಮಾನ ಮಾತ್ರ ಬಗೆಹರಿದಿಲ್ಲ. ಮಾಧ್ಯಮಗಳು ಸಹ ಈತನ ಸಾವಿನ ಬಗ್ಗೆ ಚರ್ಚೆ ಮಾಡಲು ಸಮಯವಿಲ್ಲ!

English summary
A Pune teenager's death last Friday has set Pune on the boil. Savan Rathod, 17, died last week but the details trickling out now after the boy's last words were recorded on video, indicate that he was burnt after he admitted to being 'Hindu'. A lawyer recorded his last words in the hospital.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X