Get Updates
Get notified of breaking news, exclusive insights, and must-see stories!

Cyclone Biparjoy: ಗುಜರಾತ್‌ ವಿನಾಶದ ಬಳಿಕ, ರಾಜಸ್ಥಾನದ ಕಡೆಗೆ ಬಿಪರ್‌ಜೋಯ್

ನವದೆಹಲಿ, ಜೂನ್. 16: ಬಿಪರ್‌ಜಾಯ್‌ ಚಂಡಮಾರುತ ಗುರುವಾರ ಗುಜರಾತ್‌ಗೆ ಅಪ್ಪಳಿಸಿದ್ದರಿಂದ ರಾಜ್ಯದಲ್ಲಿ ಭಾರೀ ಅವಘಡಗಳು ಸಂಭವಿಸಿವೆ. ವಿದ್ಯುತ್‌ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದ್ದು, ಕನಿಷ್ಠ 22 ಜನರು ಗಾಯಗೊಂಡಿದ್ದಾರೆ. ಗುಜರಾತ್ ಬಳಿಕ ಚಂಡಮಾರುತವು ಇಂದು ಸಂಜೆ ರಾಜಸ್ಥಾನದ ಕಡೆಗೆ ತೆರಳುವ ಸಾಧ್ಯತೆಯಿದೆ.

ಐಎಂಡಿ ನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಈ ಬಗ್ಗೆ ಮಾಹಿತಿ ನೀಡಿದ್ದಾರೆ. "ಬಿಪರ್‌ಜಾಯ್‌ ಚಂಡಮಾರುತವು ಈಶಾನ್ಯಕ್ಕೆ ಚಲಿಸಿದೆ. ಗುಜರಾತ್‌ನ ಜಖೌ ಬಂದರಿಗೆ ಸಮೀಪವಿರುವ ಪಾಕಿಸ್ತಾನದ ಕರಾವಳಿಯ ಸೌರಾಷ್ಟ್ರ-ಕಚ್ ಅನ್ನು ದಾಟಿದೆ. ಚಂಡಮಾರುತವು ಈಗ ಸಮುದ್ರದಿಂದ ಭೂಮಿ ಕಡೆಗೆ ಚಲಿಸಿದೆ ಮತ್ತು ಸೌರಾಷ್ಟ್ರ-ಕಚ್ ಕಡೆಗ ಕೇಂದ್ರೀಕೃತವಾಗಿದೆ. ಚಂಡಮಾರುತದ ತೀವ್ರತೆಯು ಗಂಟೆಗೆ 105-115 ಕಿ.ಮೀ.ಗೆ ಕಡಿಮೆಯಾಗಿದೆ. ವರ್ಗವು ಅತ್ಯಂತ ತೀವ್ರವಾದ ಸೈಕ್ಲೋನಿಕ್ ಚಂಡಮಾರುತದಿಂದ (VSCS) ತೀವ್ರ ಸೈಕ್ಲೋನಿಕ್ ಚಂಡಮಾರುತಕ್ಕೆ (SCS) ಬದಲಾಗಿದೆ. ಜೂನ್ 16 ರಂದು ರಾಜಸ್ಥಾನದಲ್ಲಿ ಭಾರೀ ಮಳೆಯಾಗಬಹುದು" ಎಂದು ಮಾಹಿತಿ ನೀಡಿದ್ದಾರೆ.

After Gujarat, Cyclone Biparjoy To Head To Rajasthan

ಇನ್ನು, ಬಿಪರ್‌ಜೋಯ್ ಚಂಡಮಾರುತ ಮತ್ತು ಅದರೊಂದಿಗೆ ಬರಲಿರುವ ಭಾರೀ ಮಳೆಯನ್ನು ಎದುರಿಸಲು ರಾಜ್ಯವು ಸಜ್ಜಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗುರುವಾರ ಹೇಳಿದ್ದಾರೆ. ಮುಖ್ಯ ಕಾರ್ಯದರ್ಶಿ, ಡಿಜಿಪಿ ಮತ್ತು ಹವಾಮಾನ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಿಎಂ ಅಶೋಕ್ ಗೆಹ್ಲೋಟ್, ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಕರಾವಳಿ ಭಾಗಗಳಲ್ಲಿ ಬಿಪರ್‌ಜೋಯ್ ಚಂಡಮಾರುತದ ಭಾರೀ ಮಳೆಯಿಂದ ಹಠಾತ್ ಪ್ರವಾಹದೊಂದಿಗೆ ಪಶ್ಚಿಮ ಭಾರತ ಮತ್ತು ದಕ್ಷಿಣ ಪಾಕಿಸ್ತಾನದ ತೀರದಲ್ಲಿ ಬಿರುಗಾಳಿ ಸಹಿತ ಮಳೆ ಸುರಿಯಿತು. ಚಂಡಮಾರುತಕ್ಕೆ ಮುಂಚಿತವಾಗಿ ಎರಡು ದೇಶಗಳಲ್ಲಿ ಒಟ್ಟು 1,73,000 ಜನರನ್ನು ತಾತ್ಕಾಳಿಕ ಆಶ್ರಯಕ್ಕೆ ಸ್ಥಳಾಂತರಿಸಲಾಗಿದೆ. ಚಂಡಮಾರುತವು ಹಾದುಹೋದ ನಂತರ ಪರಿಹಾರ ಕಾರ್ಯಗಳನ್ನು ನಿರ್ವಹಿಸಲು ಸಿದ್ಧತೆಗಳನ್ನು ಮಾಡಲಾಯಿತು. ಕಳೆದ ಬೇಸಿಗೆಯಲ್ಲಿ ಪ್ರವಾಹದಿಂದ ನಾಶವಾಗಿರುವ ಪಾಕಿಸ್ತಾನದ ದಕ್ಷಿಣ ಪ್ರಾಂತ್ಯವು ಚಂಡಮಾರುತದ ಹಾದಿಯಲ್ಲಿದೆ.

After Gujarat, Cyclone Biparjoy To Head To Rajasthan

ಇದರ ಜೊತೆಗೆ ಗುರುವಾರ ಸಂಜೆ ಗುಜರಾತ್‌ನ ಕರಾವಳಿ ಪ್ರದೇಶಗಳಲ್ಲಿ ಬಿಪರ್‌ಜಾಯ್‌ ಚಂಡಮಾರುತ ಅಪ್ಪಳಿಸಿದ್ದು, ಭಾರೀ ಚಂಡಮಾರುತಕ್ಕೆ ವಿದ್ಯುತ್‌ ಕಂಬಗಳು ಮತ್ತು ಮರಗಳು ನೆಲಕ್ಕುರುಳಿದೆ. ಘಟನೆಗಳಲ್ಲಿ ಕನಿಷ್ಠ 22 ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆಯೊಂದಿಗೆ ಗುಜರಾತಿನ ವಿವಿಧ ಸ್ಥಳಗಳಲ್ಲಿ 524 ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ, ಸುಮಾರು 940 ಹಳ್ಳಿಗಳಿಗೆ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಇದರ ಜೊತೆಯಲ್ಲಿ, 23 ಪ್ರಾಣಿಗಳು ಸಹ ಸಾವನ್ನಪ್ಪಿವೆ.

ಗುಜರಾತ್‌ನಲ್ಲಿ ನೂರಾರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಹಲವಾರು ಪರಿಹಾರ ಮತ್ತು ರಕ್ಷಣಾ ತಂಡಗಳು ಅಲರ್ಟ್ ಆಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ''ಚಂಡಮಾರುತದಿಂದ ಸುಮಾರು 22 ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ ಯಾರ ಸಾವಿನ ಸುದ್ದಿಯೂ ವರದಿಯಾಗಿಲ್ಲ. 23 ಪ್ರಾಣಿಗಳು ಸಾವನ್ನಪ್ಪಿವೆ. 524 ಮರಗಳು ಬಿದ್ದಿವೆ ಮತ್ತು ಕೆಲವು ಸ್ಥಳಗಳಲ್ಲಿ ವಿದ್ಯುತ್ ಕಂಬಗಳು ಸಹ ಬಿದ್ದಿವೆ. ಹೀಗಾಗಿ 940 ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲ" ಎಂದು ಗುಜರಾತ್‌ನ ರಿಲೀಫ್ ಕಮಿಷನರ್ ಅಲೋಕ್ ಸಿಂಗ್ ಮಾಹಿತಿ ನೀಡಿದ್ದಾರೆ.

"ಮುಂದಿನ 3 ರಿಂದ 6 ಗಂಟೆಗಳಲ್ಲಿ ಉಬ್ಬರವಿಳಿತದ ಅಲೆಗಳು ನಿಧಾನವಾಗಿ ಕಡಿಮೆಯಾಗುತ್ತವೆ. ಜೂನ್ 16 ರಂದು ಭಾರೀ ಮಳೆಯಾಗಬಹುದು" ಎಂದು ಹವಾಮಾನ ಇಲಾಖೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+