ಸಿಎಂ ಆದ ಬಳಿಕ ಅಂಗವಿಕಲೆಗೆ ಮೊದಲ ಉದ್ಯೋಗ ನೀಡಿದ ರೇವಂತ್ ರೆಡ್ಡಿ
ಹೈದರಾಬಾದ್, ಡಿಸೆಂಬರ್ 7: ತೆಲಂಗಾಣ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ನೂತನ ಸಿಎಂ ರೇವಂತ್ ರೆಡ್ಡಿ ಅವರು ಅಂಗವಿಕಲೆಯೊಬ್ಬರಿಗೆ ಮೊದಲ ಉದ್ಯೋಗವನ್ನು ನೀಡಿದ್ದಾರೆ.
TPCC president Revanth reddy promises first job to Rajini, a disabled (dwarf) girl from Nampally.
— Asma (@asmatasleem13) October 17, 2023
Revanth Reddy has promised to give the first job when Congress comes to power.
Rajini, who completed post graduation told Revanth about her grief that she is not even getting a job… pic.twitter.com/CcflENmEUS
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಉದ್ಯೋಗ ನೀಡಲಾಗುವುದು ಎಂದು ರೇವಂತ್ ರೆಡ್ಡಿ ಅಂಗವಿಕಲೆಯೊಬ್ಬರಿಗೆ ಭರವಸೆ ನೀಡಿದ್ದರು. ಅದರಂತೆ ಇಂದು ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ಅಂಗವಿಕಲೆಗೆ ಮೊದಲ ಉದ್ಯೋಗವನ್ನು ಸಿಎಂ ನೀಡಿದರು.

ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ರೇವಂತ್ ರೆಡ್ಡಿ ಅವರು ನಾಂಪಲ್ಲಿಯ ಅಂಗವಿಕಲೆ (ಕುಬ್ಜ) ಬಾಲಕಿ ರಜಿನಿ ಅವರಿಗೆ ಮೊದಲ ಉದ್ಯೋಗ ನೀಡಿದ್ದಾರೆ. ಸ್ನಾತಕೋತ್ತರ ಪದವಿ ಮುಗಿಸಿರುವ ರಜನಿ, ಖಾಸಗಿ ಕಂಪನಿಗಳಲ್ಲಿ ಕೆಲಸವೂ ಸಿಗುತ್ತಿಲ್ಲ ಎಂದು ರೇವಂತ್ ರೆಡ್ಡಿ ಅವರೊಂದಿಗೆ ಬೇಸರ ವ್ಯಕ್ತಪಡಿಸಿದ್ದರು. ಅದರಂತೆ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನ್ನು ಸ್ವತಃ ರಜನಿ ಹೆಸರನ್ನು ರೇವಂತ್ ತುಂಬಿದರು.
ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರೇವಂತ್ ರೆಡ್ಡಿ ತಮ್ಮ ಪತ್ನಿ ಹಾಗೂ ಮಕ್ಕಳನ್ನು ಸೋನಿಯಾ ಗಾಂಧಿಗೆ ಪರಿಚಯ ಮಾಡಿಕೊಟ್ಟರು. ಅವರ ಕುಟುಂಬ ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಸಂಸದ ರಾಹುಲ್ ಗಾಂಧಿ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಭೇಟಿ ಮಾಡಿದರು.
ತೆಲಂಗಾಣ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಕರ್ನಾಟಕ ಮಾದರಿಯಲ್ಲಿ ಗ್ಯಾರಂಟಿಗಳನ್ನು ಘೋಷಣೆಯನ್ನು ಮಾಡಿತ್ತು. ಅಲ್ಲದೆ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ ಮೂಲಕ ಜನರ ಮನಸ್ಸು ಗೆಲ್ಲುವ ಪ್ರಯತ್ನ ಮಾಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸನ್ನು ಗಳಿಸಿತು.
ತೆಲಂಗಾಣ ಆಂಧ್ರಪ್ರದೇಶದಿಂದ ಪ್ರತ್ಯೇಕಗೊಂಡ ಬಳಿಕ ರಾಜ್ಯಕ್ಕೆ ಆಯ್ಕೆಯಾದ ಎರಡನೇ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ರೇವಂತ್ ರೆಡ್ಡಿ ಪಾತ್ರವಾಗಿದ್ದಾರೆ. ರೇವಂತ್ ರೆಡ್ಡಿ ಅವರೊಂದಿಗೆ ಭಟ್ಟಿ ಮಿಕ್ರಮಾರ್ಕ ಮಲ್ಲು ಅವರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇದಲ್ಲದೆ ಅವರೊಂದಿಗೆ ಒಟ್ಟು 10 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.
ತೆಲಂಗಾಣ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದ ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಗಳಾಗಿ ದೇವರ ಹೆಸರಿನಲ್ಲಿ ಅಧಿಕಾರ ಸ್ವೀಕರಿಸಿದರು. ಅವರಿಗೆ ತೆಲಂಗಾಣ ರಾಜ್ಯಪಾಲರಾದ ತಮಿಳಿಸೈ ಸೌಂದರ್ಯರಾಜನ್ ಪ್ರಮಾಣ ವಚನ ಬೋಧಿಸಿದರು. ಗುರುವಾರ ಹೈದರಾಬಾದ್‌ನಲ್ಲಿ ನೂತನ ಸಚಿವರಾಗಿ ಕೊಮಿಟಿರೆಡ್ಡಿ ವೆಂಕಟರೆಡ್ಡಿ, ದುದ್ದಿಲ್ಲ ಶ್ರೀಧರ್ ಬಾಬು, ಪೊಂಗುಲೇಟಿ ಶ್ರೀನಿವಾಸರೆಡ್ಡಿ, ಪೊನ್ನಂ ಪ್ರಭಾಕರ್, ನಾಲಮಾಡ ಉತ್ತಮ್ ಕುಮಾರ್ ರೆಡ್ಡಿ, ಸಿ.ದಾಮೋದರ್ ರಾಜಾನರಸಿಂಹ, ಕೊಂಡಾ ಸುರೇಖಾ, ಜೂಪಲ್ಲಿ ಕೃಷ್ಣಾರಾವ್ಅನುಸೂಯಾ ಸೀತಕ್ಕ, ತುಮ್ಮಲ ನಾಗೇಶ್ವರರಾವ್ ಅವರು ಪ್ರಮಾಣವಚನ ಸ್ವೀಕರಿಸಿದರು.












Click it and Unblock the Notifications