26/11 ದಾಳಿ ಪಕ್ಕಕ್ಕಿಟ್ಟು ತಾಜ್‌ನಲ್ಲಿ ಚಾ ಕುಡಿಯೋಣ ಬನ್ನಿ
ಮುಂಬೈ, ನವೆಂಬರ್, 25: ಅದು ನವೆಂಬರ್ 26, 2008. ಭಾರತದೊಳಕ್ಕೆ ನುಗ್ಗಿದ ಪಾತಕಿಗಳು ಮುಂಬೈನ ತಾಜ್ ಹೋಟೆಲ್ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ಮಾಡಿದ್ದರು. ಸಂದೀಪ್ ಉನ್ನಿಕೃಷ್ಣನ್, ಹೇಮಂತ್ ಕರ್ಕರೆ, ತುಕಾರಾಮ್ ಒಂಬ್ಲೆ ತಮ್ಮ ಪ್ರಾಣವನ್ನೇ ದೇಶಕ್ಕಾಗಿ ನೀಡಿದ್ದರು.
ಜೀವಂತವಾಗಿ ಸೆರೆ ಸಿಕ್ಕ ಉಗ್ರ ಕಸಬ್ ನನ್ನು ಐದುವರೆ ವರ್ಷಗಳ ವಿಚಾರಣೆ ನಂತರ ಗಲ್ಲಿಗೇರಿಸಲಾಯಿತು. ದಾಳಿಯಲ್ಲಿ ಮಡಿದವರ ಕುಟುಂಬದವರು ನಿಧಾನವಾಗಿ ತಮ್ಮ ನೋವನ್ನು ಮರೆಯುತ್ತಿದ್ದಾರೆ. ಇದೀಗ ಮತ್ತದೇ ದಿನಾಂಕ ಎದುರಾಗಿದೆ 26 ನವೆಂಬರ್.[ಆರಕ್ಷಕರಿಗೊಂದು ಶುಭಾಶಯ ಹೇಳಲು ನಮ್ಮೊಂದಿಗೆ ಬನ್ನಿ]
ಘಟನೆ ನಡೆದು 7 ವರ್ಷಗಳು ಕಳೆದಿವೆ. ಆದರೆ ನೋವನ್ನು ಅನುಭವಿಸಿದವರ ಅಂತರಾಳ ಇನ್ನು ಮರುಗುತ್ತಲೇ ಇದೆ? ಉಗ್ರರು ದಾಳಿ ಇಟ್ಟಿದ್ದ ತಾಜ್ ಹೋಟೆಲ್, ನಾರಿಮನ್ ಹೌಸ್ ಮತ್ತೆ ಹಳೆ ವೈಭವಕ್ಕೆ ಮರಳಿದೆ. ಭಾರತೀಯರು ಉಗ್ರರಿಗೆ ಬೆದರಲ್ಲ, ಮತ್ತದೇ ಗತ್ತು ಗೈರತ್ತಿನಲ್ಲಿ ತಾಜ್ ಹೋಟೆಲ್ ಕಾಫಿ ಹೀರುತ್ತಿದ್ದಾರೆ. ಉಗ್ರರ ದಾಳಿ ಕರಾಳ ನೆನಪನ್ನು ಪಕ್ಕಕ್ಕಿಟ್ಟು ತಾಜ್ ಹೋಟೆಲ್ ಒಂದು ರೌಂಡ್ ಹಾಕಿಕೊಂಡು ಬರೋಣ ಬನ್ನಿ....

ವಿದೇಶಿಯರ ಸಂಚಾರ
ಭಾರತದ ವಾಣಿಜ್ಯ ರಾಜಧಾನಿ ಮುಂಬೈನ ತಾಜ್ ಹೊಟೆಲ್ ಎದುರು ನಿರಾತಂಕವಾಗಿ ಸಂಚರಿಸುತ್ತಿರುವ ವಿದೇಶಿಯರು.

ಪಾರಿವಾಳಗಳ ಸ್ವಚ್ಛಂದ ಹಾರಾಟ
2008 ರಲ್ಲಿ ಉಗ್ರದ ದಾಳಿಗೆ ತುತ್ತಾಗಿದ್ದ ತಾಜ್ ಹೋಟೆಲ್ ಎದುರು ಪಾರಿವಾಳಗಳ ಸ್ವಚ್ಛಂದ ಹಾರಾಟ.

ಶಿವಾಜಿ ಟರ್ಮಿನಲ್ ಹೇಗಿದೆ?
ಛತ್ರಪತಿ ಶಿವಾಜಿ ಟರ್ಮಿನಲ್ ನಲ್ಲಿ ತಾವು ತೆರಳಬೇಕಾದ ಜಾಗಕ್ಕೆ ಹೊರಟು ನಿಂತ ನಾಗರಿಕರು.

ಅಳಿಸದ ಕಲೆಗಳು
ಮುಂಬೈ ನಾರಿಮನ್ ಹೌಸ್ ಎದುರಿಗಿನ ಬಾಗಿಲುಗಳ ಮೇಲಿರುವ ಬುಲೆಟ್ ಗುರುತುಗಳು ಕರಾಳ ದಾಳಿಯ ಕೆಟ್ಟ ನೆನಪು ಮಾಡಿಸುತ್ತವೆ.

ರೈಲ್ವೆ ನಿಲ್ದಾಣ ಪ್ರಶಾಂತ
ಛತ್ರಪತಿ ಶಿವಾಜಿ ಟರ್ಮಿನಲ್ ಪ್ರಶಾಂತವಾಗಿದ್ದು ಹಳೆಯ ದಾಳಿಯ ಮೆಲುಕು ಹಾಕದಂತೆ ತಡೆಯುತ್ತಿದೆ.

ಕಾಫಿ ಕುಡಿಯೋಣ ಬನ್ನಿ
ದಾಳಿಗೆ ತುತ್ತಾಗಿದ್ದ ಲಿಯೋಪೋಡ್ ಕೆಫೆಯಲ್ಲಿ ಮತ್ತದೇ ಗದ್ದಲ, ವ್ಯಾಪಾರ ವಹಿವಾಟು ಜೋರಾಗಿಯೇ ನಡೆದಿದೆ.

ನಾರಿಮನ್ ಹೌಸ್ ಹೀಗಿದೆ
ಉಗ್ರ ದಾಳಿಗೆ ಸಿಕ್ಕು ನಲುಗಿ ಹೋಗಿದ್ದ ನಾರಿಮನ್ ಹೌಸ್ ನಲ್ಲಿ ಶಾಂತಿ ನೆಲೆಸಿದೆ.
-
ಪ್ರಧಾನಿ ಮೋದಿಗೆ ಕರೆ ಮಾಡಿದ ಟ್ರಂಪ್: ಶಾಂತಿ ಸ್ಥಾಪನೆಗೆ ಭಾರತದ ಬೆಂಬಲ, ಮಹತ್ವ ಮಾತುಕತೆ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
LPG: ಗೃಹಬಳಕೆ ಸಿಲಿಂಡರ್ ಬಳಕೆದಾರರಿಗೆ ಬಿಗ್ ಅಪ್ಡೇಟ್: ಎಲ್ಪಿಜಿ ಅಭಾವ ನೀಗಿಸಲು ಕೇಂದ್ರದಿಂದ ಹೊಸ ಪ್ಲಾನ್ -
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ












Click it and Unblock the Notifications