ಭಾರತ ತಾಲಿಬಾನ್ ಜೊತೆ ಮಾತನಾಡಬೇಕಿತ್ತು ಎಂದ ಓವೈಸಿ, ವಿಶ್ವಸಂಸ್ಥೆ ಮಧ್ಯಸ್ಥಿಕೆಗೆ ಕೆಟಿಆರ್ ಆಗ್ರಹ
ನವದೆಹಲಿ, ಆ.17: ವಾಷಿಂಗ್ಟನ್ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆ ಅಫ್ಘಾನಿಸ್ತಾನಕ್ಕೆ ದಾಳಿ ನಡೆಸಿದ ತಾಲಿಬಾನ್ ಈಗ ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡಿದೆ. ಅಫ್ಘಾನಿಸ್ತಾನದಲ್ಲಿನ ಈ ಬೆಳವಣಿಗೆಗಳ ಕುರಿತು ಆಗಸ್ಟ್ 17 ರ ಸೋಮವಾರ ಪ್ರತಿಕ್ರಿಯಿಸಿದ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷ ಕೆಟಿ ರಾಮರಾವ್ "ಯುಎನ್ ಎಲ್ಲಿದೆ?" ಎಂದು ಪ್ರಶ್ನೆ ಮಾಡಿದ್ದಾರೆ.
ಕ್ಯಾಬಿನೆಟ್ ಮಂತ್ರಿಯೂ ಆಗಿರುವ ಕೆಟಿಆರ್, ವಿಶ್ವಸಂಸ್ಥೆಯನ್ನು ಪ್ರಶ್ನಿಸುವ ಟ್ವೀಟ್ ಮಾಡಿದ್ದಾರೆ ಮತ್ತು ವಿಶ್ವ ಸಂಸ್ಥೆ ಮಧ್ಯಪ್ರವೇಶಿಸುವ ಅಗತ್ಯವನ್ನು ಒತ್ತಿ ಹೇಳಿದ್ದಾರೆ. "ಪರಿಸ್ಥಿತಿಗಳು ಭಯಾನಕವಾದಾಗ ನೀವು ಮಧ್ಯಪ್ರವೇಶಿಸಬೇಕಲ್ಲವೇ!" ಎಂದು ಟಿಆರ್‌ಎಸ್‌ನ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್ ಕೇಳಿದ್ದಾರೆ.
"ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದ ನಿಜಕ್ಕೂ ಗೊಂದಲದ ದೃಶ್ಯಗಳು" ಎಂದು ರಾಜ್ಯ ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಮುನ್ಸಿಪಲ್ ಆಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿರುವ ಕೆಟಿ ರಾಮ ರಾವ್ ಹೇಳಿದರು. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡುವ ಅಫ್ಘಾನ್ ಕ್ರಿಕೆಟಿಗ ರಶೀದ್ ಖಾನ್‌ರ ಟ್ವೀಟ್ ಟ್ಯಾಗ್ ಮಾಡುವಾಗ ಕೆಟಿಆರ್ ಬಿಕ್ಕಟ್ಟಿನ ಕುರಿತು ಟ್ವೀಟ್ ಮಾಡಿದ್ದಾರೆ.

ನಮಗೆ ಶಾಂತಿ ಬೇಕು: ರಶೀದ್ ಖಾನ್ ಟ್ವೀಟ್
"ಪ್ರೀತಿಯ ವಿಶ್ವ ನಾಯಕರೇ! ನನ್ನ ದೇಶವು ಗೊಂದಲದಲ್ಲಿದೆ, ಮಕ್ಕಳು ಮತ್ತು ಮಹಿಳೆಯರು ಸೇರಿದಂತೆ ಸಾವಿರಾರು ಮುಗ್ಧ ಜನರು ಪ್ರತಿದಿನ ಹುತಾತ್ಮರಾಗುತ್ತಾರೆ, ಮನೆಗಳು ಮತ್ತು ಆಸ್ತಿಗಳು ನಾಶವಾಗುತ್ತಿವೆ. ಸಾವಿರ ಕುಟುಂಬಗಳು ಸ್ಥಳಾಂತರಗೊಂಡಿವೆ. ನಮ್ಮನ್ನು ಗೊಂದಲದಲ್ಲಿ ಬಿಡಬೇಡಿ ಅಫ್ಘಾನಿಸ್ತಾನ. ನಮಗೆ ಶಾಂತಿ ಬೇಕು," ಎಂದು ರಶೀದ್ ಖಾನ್ ಟ್ವೀಟ್ ಮಾಡಿದ್ದಾರೆ. ರಶೀದ್ ಖಾನ್ ಪ್ರಸ್ತುತ ಯುಕೆ ನಲ್ಲಿದ್ದಾರೆ ಟ್ರೆಂಟ್ ರಾಕೆಟ್ಸ್ ಪರವಾಗಿ ನೂರರ ಉದ್ಘಾಟನಾ ಆವೃತ್ತಿಯಲ್ಲಿ ಆಡುತ್ತಿದ್ದಾರೆ. ತಾಲಿಬಾನ್ ವಶಪಡಿಸಿಕೊಂಡ ಹಿನ್ನೆಲೆ ಅಫ್ಘಾನಿಸ್ತಾನದಿಂದ ತನ್ನ ಕುಟುಂಬವನ್ನು ಹೊರತರಲು ಸಾಧ್ಯವಾಗದೇ ರಶೀದ್ ಚಿಂತಿತನಾಗಿದ್ದಾರೆ," ಎಂದು ವರದಿಗಳು ತಿಳಿಸಿವೆ.

ಭಾರತ ತಾಲಿಬಾನ್ ಜೊತೆ ಮಾತನಾಡಬೇಕಿತ್ತು ಎಂದ ಓವೈಸಿ
ಈ ನಡುವೆ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡ ಸೋಮವಾರ ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಭಾರತವು ತಾಲಿಬಾನ್ ಜೊತೆ ಬೇಗ ಮಾತುಕತೆ ನಡೆಸಬೇಕಿತ್ತು," ಎಂದು ಓವೈಸಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ಭಾರತವು ಮಾತುಕತೆ ನಡೆಸಬೇಕಿತ್ತು. ನಾವು ತಾಲಿಬಾನ್ ಜೊತೆ ಅನೌಪಚಾರಿಕ ಅಥವಾ ಔಪಚಾರಿಕ ಮಾತುಕತೆಯನ್ನು ಆರಂಭಿಸಬೇಕಿತ್ತು. ನಾವು ಸಮಯವನ್ನು ಕಳೆದುಕೊಂಡಿದ್ದೇವೆ. ಕಳೆದ ಏಳು ವರ್ಷಗಳಿಂದ ಮೋದಿ ಸರ್ಕಾರ ಏನಾಗುತ್ತಿದೆ ಎಂಬುದನ್ನು ತಿಳಿಯುವುದರಲ್ಲಿ ವಿಫಲವಾಗಿದೆ," ಎಂದು ಸುದ್ದಿಗಾರರಿಗೆ ತಿಳಿಸಿದರು. ಹೈದರಾಬಾದ್ ಸಂಸದರು, "ಈಗ ತಾಲಿಬಾನ್ ಅಫ್ಘಾನಿಸ್ತಾನದ ಸಂಪೂರ್ಣ ನಿಯಂತ್ರಣ ಪಡೆದಿದೆ. ಆದರೆ ಭಾರತವು ಅವರೊಂದಿಗೆ ಯಾವುದೇ ಸಂವಹನ ಅಥವಾ ಮಾತುಕತೆಗಳನ್ನು ನಡೆಸಿಲ್ಲ," ಎಂದು ಹೇಳಿದರು. "ಭಾರತವು ತಾಲಿಬಾನ್ ಜೊತೆ ಮಾತುಕತೆ ನಡೆಸಬೇಕು ಎಂದು ಎಲ್ಲ ಅಂತಾರಾಷ್ಟ್ರೀಯ ಭದ್ರತಾ ತಜ್ಞರು ಸೂಚಿಸಿದ್ದಾರೆ," ಎಂದು ಉಲ್ಲೇಖ ಮಾಡಿದರು. ಏತನ್ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅಫ್ಘಾನಿಸ್ತಾನ ವಿಚಾರದಲ್ಲಿ ಸಭೆ ನಡೆಸಿದ್ದಾರೆ ಎಂದು ವರದಿ ತಿಳಿಸಿದೆ.

ಅಫ್ಘಾನ್‌ಗೆ ಭಾರತದಿಂದ 3 ಬಿಲಿಯನ್ ಡಾಲರ್ ಖರ್ಚು
ಅಫ್ಘಾನಿಸ್ತಾನದ ಪುನರ್ನಿರ್ಮಾಣಕ್ಕಾಗಿ ಭಾರತವು 3 ಬಿಲಿಯನ್ ಡಾಲರ್ ಖರ್ಚು ಮಾಡಿದೆ ಎಂದು ಕೂಡಾ ಭಾರತದಿಂದ 3 ಬಿಲಿಯನ್ ಡಾಲರ್ ಖರ್ಚು ಉಲ್ಲೇಖ ಮಾಡಿದ್ದಾರೆ. "ಭಾರತ ದೇಶವು ಅಫ್ಘಾನ್ ಪಾರ್ಲಿಮೆಂಟ್ ಕಟ್ಟಡವನ್ನು ನಿರ್ಮಿಸಿತು, ಇದನ್ನು ಪ್ರಧಾನಿ ಮೋದಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಜೊತೆಗೆ ಉದ್ಘಾಟಿಸಿದರು. ಸಲಾಮಾ ಅಣೆಕಟ್ಟನ್ನು ಭಾರತದ ಹಣದಿಂದ ನಿರ್ಮಿಸಲಾಗಿದ್ದು, ಭಾರತಕ್ಕೆ ಬಂದ ಅಫ್ಘಾನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಯಿತು. ಅಫ್ಘಾನಿಸ್ಥಾನದಲ್ಲಿ ಭಾರತಕ್ಕೆ ಇರುವ ಅತೀ ಹೆಚ್ಚಿನ ಆತಂಕವೆಂದರೆ ಆಡಳಿತವಿಲ್ಲದ ಜಾಗಗಳು ಆಗಿದೆ," ಎಂದು ಒವೈಸಿ ಹೇಳಿದರು.
Recommended Video

ಆಡಳಿತವಿಲ್ಲದೇ ಇರುವುದು ಹೇಗೆ?
"ಅಲ್ ಖೈದಾ ಮತ್ತು ಐಸಿಸ್ ತಮ್ಮ ಪ್ರಧಾನ ಕಛೇರಿಯನ್ನು ಸ್ಥಳಾಂತರಿಸಿ ಇರಾಕ್ ಮತ್ತು ಸಿರಿಯಾದಿಂದ ಅಫ್ಘಾನಿಸ್ತಾನಕ್ಕೆ ನೇಮಕಾತಿಯನ್ನು ಬದಲಾಯಿಸಿವೆ. ಜೈಶ್-ಎ-ಮೊಹಮ್ಮದ್ ಈಗ ಹೆಲ್ಮಂಡ್ ಪ್ರದೇಶದಲ್ಲಿ ಬೇರೂರಿದೆ. ಎಲ್ಲಾ ಭದ್ರತಾ ತಜ್ಞರು ಇದನ್ನು ಹೇಳಿದ್ದಾರೆ" ಎಂದು ಓವೈಸಿ ಹೇಳಿದರು. ಅವರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದಾಗ, ತಾಲಿಬಾನ್ ಜೊತೆ ಮಾತುಕತೆಯನ್ನು ಸಮರ್ಥಿಸಿದಾಗ ತನ್ನನ್ನು ಟೀಕಿಸಲಾಯಿತು ಮತ್ತು ಅಪಹಾಸ್ಯ ಮಾಡಲಾಯಿತು ಎಂಬುವುದನ್ನು ನೆನಪಿಸಿಕೊಂಡರು. "ತಾಲಿಬಾನ್ ಯಾವ ನಿಲುವನ್ನು ಹೊಂದಿದೆ ಎಂದು ನಮಗೆ ತಿಳಿದಿದೆ. ಅವರ ವಿಧಾನಗಳು ಮತ್ತು ಹಿಂಜರಿತ ನೀತಿಗಳನ್ನು ನಾವು ಒಪ್ಪುವುದಿಲ್ಲ, ಆದರೆ ಆ ಎಲ್ಲಾ ಆಡಳಿತವಿಲ್ಲದ ಜಾಗಗಳಲ್ಲಿ ಏನಾಗುತ್ತದೆ ಎಂದು ನೀವು ಊಹಿಸಬಲ್ಲಿರಾ? ಇದು ಖಂಡಿತವಾಗಿಯೂ ದೊಡ್ಡ ಸಮಸ್ಯೆಯಾಗಿದೆ ಮತ್ತು ಭವಿಷ್ಯದಲ್ಲಿ ದೊಡ್ಡದಾಗಬಹುದು," ಎಂದು ಒವೈಸಿ ಹೇಳಿದರು.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications