ಬಾಬ್ರಿ ಮಸೀದಿ ದ್ವಂಸ ಪ್ರಕರಣ: ಅಡ್ವಾಣಿ ಮೇಲೆ ಮತ್ತಷ್ಟು ಆರೋಪ?
ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಸಿಬಿಐ ನ್ಯಾಯಾಲಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಮತ್ತಷ್ಟು ಆರೋಪ ಹೊರಿಸುವ ಸಾಧ್ಯತೆಗಳು ನಿಚ್ಛಳವಾಗಿದೆ.
ಲಕ್ನೊ, ಮೇ 25: ಬಾಬ್ರಿ ಮಸೀದಿ ದ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಶೇಷ ಸಿಬಿಐ ನ್ಯಾಯಾಲಯ ಬಿಜೆಪಿ ನಾಯಕ ಎಲ್.ಕೆ.ಅಡ್ವಾನಿ ಅವರ ಮೇಲೆ ಮತ್ತಷ್ಟು ಆರೋಪ ಹೊರಿಸುವ ಸಾಧ್ಯತೆಗಳು ನಿಚ್ಛಳವಾಗಿದೆ.
1992 ರ ಬಾಬ್ರಿ ಮಸೀದಿ ದ್ವಂಸ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿಸರುವ ನ್ಯಾಯಾಲಯ ಎಲ್.ಕೆ.ಅಡ್ವಾಣಿ ಸೇರಿದಂತೆ ಮತ್ತಷ್ಟು ಜನರ ಮೇಲೆ ಆರೋಪ ಹೊರಿಸಿದ್ದು, ಈಗಾಗಲೇ ಆರಂಭವಾಗಿರುವ ವಿಚಾರಣೆ, ದಿನ ದಿನವೂ ನಡೆಯಲಿದೆ ಎಂದಿದೆ.[ಅಸಲಿಗೆ ಅಯೋಧ್ಯೆಯಲ್ಲಿ ಕರಸೇವಕರನ್ನು ಪ್ರಚೋದಿಸಿದ್ದು ಅಡ್ವಾಣಿಯಲ್ಲ, ನಾನು]

ಒಟ್ಟಿನಲ್ಲಿ ಬಿಜೆಪಿಯ ನಾಯಕ ಎಲ್ ಕೆ ಅಡ್ವಾಣಿಯವರ ರಾಜಕೀಯ ಹಾದಿಗೆ ಬಾಬ್ರಿ ಮಸೀದಿ ಪ್ರಕರಣ ಒಂದು ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಬೆಳವಣಿಗೆಯ ನಡುವಲ್ಲೇ ಮೇ 24, ಬುಧವಾರದಂದು ವಿಶೇಷ ನ್ಯಾಯಾಲಯ ಬಾಬ್ರಿ ಮಸೀದಿ ದ್ವಂಸ ಪ್ರಕರಣದ ಆರನೇ ಆರೋಪಿ ಸತೀಶ್ ಪ್ರಧಾನ್ ಮತ್ತು ಶಿವಸೇನಾ ಮಾಜಿ ಸಂಸದ ಎಸ್.ಕೆ.ಯಾದವ್ ಅವರಿಗೆ ಜಾಮೀನು ನೀಡಿದೆ.












Click it and Unblock the Notifications