ಮಣಿಪುರ ವಿಧಾನಸಭೆ ಅಧಿವೇಶನ ಆರಂಭವಾದ ಕೂಡಲೇ ಮುಂದೂಡಿಕೆ: ಹೆಚ್ಚಿನ ಕುಕಿ ಶಾಸಕರು ಗೈರು!
ಮಣಿಪುರ ವಿಧಾನಸಭೆ ಅಧಿವೇಶನ ಆರಂಭವಾದ ಕೂಡಲೇ ಮುಂದೂಡಲ್ಪಟ್ಟ ಘಟನೆ ಕಳೆದ ದಿನ ನಡೆದಿದೆ. ಮೇ ತಿಂಗಳಲ್ಲಿ ಈಶಾನ್ಯ ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಭುಗಿಲೆದ್ದ ಬಳಿಕ ಮೊದಲನೆಯ ಅಧಿವೇಶನ ಕಳೆದ ದಿನ ನಡೆಯಿತು. ಆದರೆ ಹಿಂಸಾಚಾರದ ಬಗ್ಗೆ ಗದ್ದಲದ ಸೃಷ್ಟಿಯಾದ ಬೆನ್ನಲ್ಲೆ ಅಧಿವೇಶನ ಆರಂಭವಾದ ಕೂಡಲೇ ಮುಂದೂಡಲ್ಪಟ್ಟಿದೆ.
ಬಹುನಿರೀಕ್ಷಿತ ಅಧಿವೇಶನವು ಸುಮಾರು ನಾಲ್ಕು ತಿಂಗಳ ಕಾಲ ನಡೆದ ಹಿಂಸಾಚಾರದ ಬಗ್ಗೆ ಚರ್ಚಿಸುವುದಾಗಿತ್ತು. ಹೆಚ್ಚಿನ ಕುಕಿ ಶಾಸಕರು ಪಕ್ಷ ಭೇದವಿಲ್ಲದೆ ಸುರಕ್ಷತೆಯ ಕಾರಣದಿಂದ ಅಧಿವೇಶನಕ್ಕೆ ಹಾಜರಾಗಲಿಲ್ಲ. ಕುಕಿ ಪ್ರಾಬಲ್ಯದ ಪ್ರದೇಶಗಳ 10 ಶಾಸಕರ ಪೈಕಿ ಆರು ಮಂದಿ ವಿಧಾನಸಭೆಯ ಸ್ಪೀಕರ್‌ಗೆ ಗೈರುಹಾಜರಿ ಕೋರಿದ್ದರು ಎಂದು ವರದಿಯಾಗಿದೆ.

ಕುಕಿ ಶಾಸಕರು ಅಧಿವೇಶನಕ್ಕೆ ಗೈರು
ಐವರು ಶಾಸಕರು ಸೋಮವಾರ ಆಗಸ್ಟ್ 28 ರಂದು ಸ್ಪೀಕರ್‌ಗೆ ಗೈರುಹಾಜರಿಗಾಗಿ ಅರ್ಜಿ ಸಲ್ಲಿಸಿದ್ದರೆ, ಸಮಾಜ ಕಲ್ಯಾಣ ಮತ್ತು ಸಹಕಾರ ಸಚಿವ ನೆಮ್ಚಾ ಕಿಪ್‌ಗೆನ್, ಕಾಂಗ್‌ಪೋಪಿಯ ಶಾಸಕರು ಆಗಸ್ಟ್ 26 ರ ಶನಿವಾರದಂದು ತಮ್ಮ ಅರ್ಜಿಯನ್ನು ಕಳುಹಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ದಿ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.
ಸೋಮವಾರ ರಜೆ ಕೋರಿದ ಶಾಸಕರು ಅಂದರೆ- ಬುಡಕಟ್ಟು ಮತ್ತು ಗುಡ್ಡಗಾಡು ವ್ಯವಹಾರಗಳ ಸಚಿವ ಲೆಟ್ಪಾವೊ ಹಾಕಿಪ್ (ತೆಂಗ್ನೌಪಾಲ್), ಚುರಾಚಂದ್‌ಪುರ ಶಾಸಕ ಖೌಟೆ, ಸೈಕುಲ್‌ನ ಕಿಮ್ನಿಯೊ ಹ್ಯಾಂಗ್‌ಶಿಂಗ್, ಸೈಟುವಿನ ಹಾಕ್‌ಹೋಲೆಟ್ ಕಿಪ್‌ಗೆನ್ ಮತ್ತು ಹೆಂಗ್ಲೆಪ್ ಶಾಸಕ ಲೆಟ್ಜಮಾಂಗ್ ಹಾಕಿಪ್.
ಕಳೆದ ತಿಂಗಳು ರಾಜ್ಯ ಸರ್ಕಾರವು ಆಗಸ್ಟ್ 21 ರೊಳಗೆ ಅಧಿವೇಶನ ನಡೆಸಲು ಶಿಫಾರಸು ಮಾಡಿತ್ತು. ಆದರೆ ನಂತರ ರಾಜಭವನದಿಂದ ಹಸಿರು ನಿಶಾನೆ ಸಿಗದ ಹಿನ್ನೆಲೆಯಲ್ಲಿ ಅದನ್ನು ಆಗಸ್ಟ್ 28 ಕ್ಕೆ ಪರಿಷ್ಕರಿಸಿತು. ಆಗಸ್ಟ್ 29 ರಂದು ವಿಧಾನಸಭೆ ಪುನರಾರಂಭವಾಗಲಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ಕಳೆದ ವಾರ ಪ್ರಕಟಿಸಿತ್ತು.

ಬುಡಕಟ್ಟು ಏಕತೆಯ ಸಮಿತಿ (CoTU) ಮತ್ತು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಇತ್ತೀಚೆಗೆ ಅಧಿವೇಶನವನ್ನು ಕರೆಯುವುದನ್ನು ಖಂಡಿಸಿತ್ತು, ಪ್ರಸ್ತುತ ಪರಿಸ್ಥಿತಿಯು ಕುಕಿ-ಜೋ ಶಾಸಕರು ಹಾಜರಾಗಲು ಸೂಕ್ತವಲ್ಲ ಎಂದು ಅವರು ಹೇಳಿದರು.
'ಅಸೆಂಬ್ಲಿ ಸೆಷನ್ ಮತ್ತು ಐ ವಾಶ್'
ಮಣಿಪುರದ ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಓಕ್ರಾಮ್ ಇಬೋಬಿ ಸಿಂಗ್ ಅವರು ಆಗಸ್ಟ್ 26 ರಂದು, ಅಸೆಂಬ್ಲಿ ಅಧಿವೇಶನವು ಸಾರ್ವಜನಿಕ ಹಿತಾಸಕ್ತಿಗಾಗಿ ಅಲ್ಲ, ಕಣ್ಣೋರೆಸುವ ಅಧಿವೇಶನವಾಗಿದೆ ಎಂದು ದೂರಿದರು.

ಮಣಿಪುರ ವಿಧಾನಸಭೆಯು ಕೊನೆಯ ಬಾರಿಗೆ ಫೆಬ್ರವರಿ-ಮಾರ್ಚ್‌ನಲ್ಲಿ ಬಜೆಟ್ ಅಧಿವೇಶನಕ್ಕಾಗಿ ಕರೆದಿತ್ತು ಮತ್ತು ಮೇ 3 ರಂದು ಭುಗಿಲೆದ್ದ ಘರ್ಷಣೆಗಳು ಮುಂಗಾರು ಅಧಿವೇಶನವನ್ನು ಹಿಂದಕ್ಕೆ ತಳ್ಳಿದವು. ಸದ್ಯ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಕೇಂದ್ರ ಸಚಿವ ಬಿಎಲ್ ವರ್ಮಾ ಸೋಮವಾರ ಹೇಳಿದ್ದಾರೆ.












Click it and Unblock the Notifications